
ಡಾ. ವಿ.ಡಿ. ದಿವೇಕರ್ ಅವರು ತಮ್ಮ ಕೃತಿ ‘ಸೌತ್ ಇಂಡಿಯ ಇನ್ 1857 ವಾರ್ ಆಫ್ ಇಂಡಿಪೆಂಡೆನ್ಸ್’ನಲ್ಲಿ ಸಾಕಷ್ಟು ವಿವರಗಳನ್ನು ಶೋಧಿಸಿ ಪ್ರಕಟ ಮಾಡಿದ್ದಾರೆ. (ಈ ಕೃತಿಯನ್ನು ದು.ಗು. ಲಕ್ಷ್ಮಣರವರು ಕನ್ನಡಕ್ಕೆ ಅನುವಾದಿಸಿದ್ದಾರೆ.) ಈ ದಾವಾನಲದ ಬಿಸಿ ಕನ್ನಡ ನಾಡಿಗೂ ತಟ್ಟಿದ್ದುದರಲ್ಲಿ ಆಶ್ಚರ್ಯವಿಲ್ಲ. ಈ ‘ವಿದ್ರೋಹ’ದಲ್ಲಿ ಕರುನಾಡಿನ ಮೈಸೂರು ಸಂಸ್ಥಾನ ಹೆಚ್ಚಿನ ಕೊಡುಗೆಯನ್ನು ನೀಡದಿದ್ದರೂ ಬೆಂಗಳೂರಿನ ದಂಡುಪ್ರದೇಶ, ಜಮಖಂಡಿ, ಬಿಜಾಪುರ, ಬೆಳಗಾವಿ, ಕಾರವಾರ ಮೊದಲಾದ ಪ್ರದೇಶಗಳಲ್ಲಿ ಇದರ ಬಿಸಿ ತಟ್ಟಿದ್ದುದು ಗಮನಾರ್ಹವಾಗಿದೆ. 1857ರ ಮೇ ಹತ್ತರಂದು ಮೀರಠ್ನ […]