ನಮ್ಮ ದೇಶದಲ್ಲೀಗ ೨೦ ಕೋಟಿಗೂ ಮಿಗಿಲಾದ ಅಂತರ್ಜಾಲ ಬಳಕೆದಾರರು ಇದ್ದಾರೆ. ಆದರೆ ಅಂತರ್ಜಾಲ ವ್ಯವಹಾರಗಳ ಮೇಲೆ ಎಷ್ಟುಮಾತ್ರವೂ ಸರ್ಕಾರದ ನಿಯಂತ್ರಣ ಇಲ್ಲ. ಅಂತರ್ಜಾಲ ಸೇವೆಗಳನ್ನು ಒದಗಿಸುವುವೆಲ್ಲ ವಿದೇಶೀ ಕಂಪೆನಿಗಳು – ಗೂಗಲ್, ಫೇಸ್ಬುಕ್ ಮೊದಲಾದವು. ಅವು ಯಾವುವೂ ನಮ್ಮ ಸರ್ಕಾರಕ್ಕೆ ತೆರಿಗೆ ಸಲ್ಲಿಸುತ್ತಿಲ್ಲ. ‘ಈ ದೇಶದ ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ’ ಎಂದೇ ಈ ಕಂಪೆನಿಗಳು ಬಹಿರಂಗವಾಗಿಯೆ ಸಾರಿವೆ. ತೆರಿಗೆವಂಚನೆ, ‘ಸೈಬರ್-ಕ್ರೈಮ್’ ತಂತ್ರಗಳು – ಎರಡೂ ಮಾರ್ಗಗಳಲ್ಲಿ ಸರ್ಕಾರ ಬಿಲಿಯಾಂತರ ನಷ್ಟವನ್ನು ಅನುಭವಿಸುತ್ತಿದೆ. ಕತ್ತಲ ರಾಜ್ಯದಲ್ಲಿ ನಡೆದದ್ದೇ ಶಾಸನ […]
“ಅಂಧೇರೀ ನಗರೀ…” ದೇಶದ ಭದ್ರತೆಯೊಂದಿಗೆ ಚೆಲ್ಲಾಟ
Month : March-2015 Episode : Author : ಎಸ್.ಆರ್. ರಾಮಸ್ವಾಮಿ