೧. ಗೌತಮಬುದ್ಧನ ಜನನವಾದದ್ದು ಎಲ್ಲಿ?
೨. ಸ್ವತಂತ್ರ ಭಾರತದ ಮೊತ್ತಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?
೩. ಗಂಗಾನದಿಯು ಪರ್ವತಪ್ರದೇಶದಿಂದ ಸಮತಟ್ಟು ಪ್ರದೇಶಕ್ಕೆ ಇಳಿಯುವ ಕ್ಷೇತ್ರ ಯಾವುದು?
೪. ಭಾರತದ ಅತ್ಯಂತ ಉದ್ದದ ನದಿ-ಸೇತುವೆ ಎಲ್ಲಿದೆ?
೫. ಶ್ರೀನಗರ ಯಾವ ನದಿಯ ತಟದಲ್ಲಿದೆ?
೬. ಭಾರತದ ಕೇಂದ್ರೀಯ ಭತ್ತ ಸಂಶೋಧನ ಸಂಸ್ಥೆ ಎಲ್ಲಿದೆ?
೭. ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎ.ಡಿ.ಬಿ.) ಕೇಂದ್ರಕಚೇರಿ ಎಲ್ಲಿದೆ?
೮. ರಾಜಸ್ಥಾನದ ಚುರು ಜಿಲ್ಲೆಯ ಅಮರಪುರದ ವಿಶಿಷ್ಟತೆ ಏನು?
೯. ಗ್ರಹವನ್ನು ಸೂಚಿಸುವ ಆಂಗ್ಲಪದ `ಪ್ಲಾನೆಟ್’ನ ಅರ್ಥವೇನು?
೧೦. ಸಚ್ಚಿದಾನಂದ ರೌಟ್ರಾಯ್ ಯಾವ ಭಾಷೆಯ ಪ್ರಸಿದ್ಧ ಕವಿ?
ಉತ್ತರ:
೧. ಲುಂಬಿನೀ ವನ (ನೇಪಾಳದಲ್ಲಿದೆ).
೨. ೧೯೫೨.
೩. ಹರಿದ್ವಾರ.
೪. ಗಾಂಧಿ ಸೇತು, ಗಂಗಾನದಿ, ಪಟ್ನಾ.
೫. ಝೀಲಮ್.
೬. ಕಟಕ್, ಒಡಿಶಾ.
೭. ಮೆನಿಲಾ, ಫಿಲಿಪೈನ್ಸ್.
೮. `ಸಹಸ್ರಮಾನದ ಗ್ರಾಮ’ ಎಂದು ವಿಶ್ವಸಂಸ್ಥೆಯಿಂದ ಮನ್ನಣೆ.
೯. `ಸಂಚಾರಿ’.
೧೦. ಒರಿಯಾ.