ಕಾಳಿದಾಸನ ಮೇಘದೂತ (ಮೇಘಸಂದೇಶ) ಕಾವ್ಯವು ಸಂಸ್ಕೃತಸಾಹಿತ್ಯದಲ್ಲಿಯೇ ಅನನ್ಯವಾದುದು. ಎಷ್ಟುಮಟ್ಟಿಗೆ ಎಂದರೆ ಹತ್ತಾರು ’-ದೂತ’ ಅಥವಾ ’-ಸಂದೇಶ’ ಕಾವ್ಯಗಳ ಪರಂಪರೆಗೇ ಅದು ನಾಂದಿಯಾಯಿತು. ಭಾರತದ ಎಲ್ಲ ಭಾಷೆಗಳ ಸಾಹಿತ್ಯದ ಮೇಲೂ ಅದು ಗಾಢ ಪ್ರಭಾವವನ್ನು ಬೀರಿದೆ. ಪ್ರತಿ ಭಾಷೆಯಲ್ಲಿಯೂ ಮೇಘಸಂದೇಶದ ಹಲವು ಅನುವಾದಗಳು ಪ್ರಕಾಶಗೊಂಡಿವೆ, ಈಗಲೂ ಬರುತ್ತಿವೆ. ದ.ರಾ. ಬೇಂದ್ರೆ, ಎಸ್.ವಿ. ಪರಮೇಶ್ವರಭಟ್ಟ ಮೊದಲಾದವರ ಅನುವಾದಗಳು ಹಲವು ದಶಕಗಳಷ್ಟು ಹಿಂದೆಯೇ ಬಂದಿದ್ದರೆ ಅ.ರಾ. ಮಿತ್ರ ಅವರ ಹೊಸದೊಂದು ಅನುವಾದ ಈಗ್ಗೆ ನಾಲ್ಕೈದು ವರ್ಷ ಹಿಂದೆಯಷ್ಟೇ ಹೊರಬಂದಿದೆ. ನೇರ ಪದ್ಯಾನುವಾದ […]
ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು
Month : September-2017 Episode : Author : ಎಸ್.ಆರ್. ರಾಮಸ್ವಾಮಿ