ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2021

ಇತಿಹಾಸ

ಇತಿಹಾಸಗಳ ಪ್ರತಿಸೃಷ್ಟಿಸೋಣ ಕಟ್ಟಳೆಗಳ ಒಡೆದು ದಾಸ್ಯವನು ಕಿತ್ತುಹಾಕೋಣ. ಮಲಗಿರಲಿ ಅವರು ತಮ್ಮ ಸಿದ್ಧಾಂತಗಳಡಿಯಲ್ಲಿ ತಾವೇ ಕಟ್ಟಿಕೊಂಡ ಸೆರೆಮನೆಗಳಲ್ಲಿ. ನೋಡಲಿ ಜಗವು ನಮ್ಮ ಈ ಕಾರ್ಯವ ಬರೆದಿಡಲಿ ಹೋರಾಟದ ಕೆಚ್ಚೆದೆಯ ಕಾಯಕವ. ಶತಮಾನಗಳವರೆಗೆ ಬಂಧಿಸಿದ ಶೃಂಖಲೆಗಳ ಕಡಿದುಹಾಕೋಣ ಜಗದ ಇರುವಿಕೆಗೆ ಹೊಸ ಸೃಷ್ಟಿ ನೀಡೋಣ. ವಿದ್ಯೆಯ ಶಸ್ತ್ರವನು ಕೈಹಿಡಿದು ನಡೆಯೋಣ ಎದೆಯಲಿರುವ ಛಲವೆಂಬ ಬಯಕೆಯ ದೇದೀಪ್ಯಗೊಳಿಸೋಣ. ನವ ಭವಿತವ್ಯದ ಎಡೆಗೆ ಮುಂದಡಿ ಹಾಕೋಣ ಇತಿಹಾಸದ ಪ್ರತಿಸೃಷ್ಟಿಯಲಿ ಕ್ರಾಂತಿಯಾಗೋಣ. –ವಿಜಯ ನಾಗ್ ಜಿ.

ನಿಜವಾದ ಸುಳ್ಳು

ನಿಜವಾದ ಸುಳ್ಳು

ಇಷ್ಟು ದಿನ ಹೌದಾಗಿದ್ದು, ಇಂದು ಅಲ್ಲವಾಗಿದೆ ಇಲ್ಲವೆನ್ನುವುದು ಎದ್ದು ಕಾಣುತ್ತಿತ್ತು. ಯಾವುದೊ ಭಯ, ಚಿಂತೆಗಳ ಸುಳಿ ಇಲ್ಲದ್ದು ಇದೆಯೆಂಬ ಭಾವನೆಗಳ ಬಿರುಗಾಳಿ. ಎಲ್ಲಾ ಬರೆ ಭ್ರಮೆ ನೀನೆಣಿಸಿದಂತೆ ಏನು ಇಲ್ಲ ಹಿರಿಯರ ವಚನ ಸುಳ್ಳಲ್ಲ. ಈ ತನು ರೋಗ ನಿರೋಗಗಳ ಸಮ್ಮಿಲನ ಬದುಕು ನೆರಳು ಬೆಳಕಿನ ಸಂಕಲನ. ಬೆಳ್ಳನೆ ಬೆಳಕನ್ನು ಬಿಡಿ ಬಿಡಿಸಿ ನೋಡಿದರೆ ಏನೇನು ಕಾಣುತ್ತಾ  ಹೋಗಿ ಕೊನೆಗೆ ಕರ್ರನೆ ಬಣ್ಣ ರಾಚುವುದು ಕರಿಯದನ್ನು ತಡಕಾಡಿ ಸಾಗಿದರೆ ಬೆಳಕು ಮೂಡಿ ದಾರಿ ಸುಗಮವಾಗುವುದು. ಬೆಳ್ಳಗಿದ್ದವರು ಕರಿಯಾಗಿ […]

ಅಮ್ಮ…

ಅಮ್ಮ...

ಹೇಗೆ ಮರೆಯಲಿ ಮಧುರ ನವಮಾಸ ಗರ್ಭಗುಡಿಯಲಿ ಆ ಬೆಚ್ಚಗಿನ ವಾಸ | ನನಗೆಲ್ಲಿಹ ಅರಿವು ಆಗ ಹೊರಲೋಕದ ಬಗೆ ತಿಳಿದಿದ್ದೆ, ಆಕೆ ಬಯಸಿದ್ದು ಜೀವನದಿ ನನ್ನ ಏಳ್ಗೆ || ನನಗಾದರೋ ಹೊರ ಲೋಕವೇನೆಂಬ ಹೆದರಿಕೆ ಆಕೆಗೋ ನನ್ನ ಎತ್ತಿ ಮುದ್ದಾಡುವ ಬಯಕೆ| ಹೊರಗೆ ಬಂದಾಗ ಇತ್ತು ನನಗೆ ಆತಂಕ ಅಮ್ಮನಿಗೆ ಇದ್ದುದೊಂದೇ; ನನ್ನ ಮುತ್ತಿಕ್ಕೋ ತವಕ || ವರುಷಗಳೇ ಉರುಳಿವೆ, ನಾ ಹೊರಲೋಕಕೆ ಬಂದು ಸಾಕಾಗಿ ಹೋಗಿದೆ ಸ್ಪರ್ಧಾತ್ಮಕ ಜಗವಿಂದು | ಸಿಗುತಿದೆ ಈ ದಾರಿಯಲಿ ಸೋಲಿನ […]

ಮಾನವ ಜನ್ಮ

ಮಾನವ ಜನ್ಮ ಕೊಟ್ಟಿಹನು ದೇವರು ಎಲ್ಲವನ್ನು ತೊರೆ ನೀನು ಬೇಕುಗಳನ್ನು ಕಂಗಾಲಾಗಿಹನು ಪರಮಾತ್ಮ ಈತ ತಾನೇ ಸೃಷ್ಟಿಸಿದ ಜೀವಿಯೆಂದು? ಇದ್ದಿದುರಲ್ಲಿ ಸಂತೋಷವ ಮರೆತು, ಆಸೆಯಲಿ ದುಃಖಗಳ ಬರಮಾಡಿಕೊಳ್ಳುವನು ಪ್ರಜ್ವಲಿಸುತ್ತಿರುವ ಪರಂಜ್ಯೋತಿಯನ್ನು ಆರಿಸಿ ಹಿಡಿದಿಹನು ನಿಶೆಯಲ್ಲಿ ಚಿಮಣಿ ದೀಪವನ್ನು ಪರರಿಗೆ ತೋರಿಸುತ್ತಿರುವನು ತೋರ್‌ಬೆರಳ ನೀ ಹಾಗೆ-ಹೀಗೆಂದು ಮದದಲ್ಲಿ ಮರೆತಿಹನು ತನ್ನ ಬುಡ ತನಗೆ ಕಾಣುವುದಿಲ್ಲವೆಂದು ಬದುಕಿರುವ ನಾಲ್ಕು ದಿನದಲ್ಲಿ ಗಳಿಸಿಕೋ ಒಳ್ಳೆಯ ಹೆಸರನ್ನು ಉಸಿರು ಹೋದರೂ ನೆನೆಯುವಂತಾಗಲಿ ಅಂದು ಆತನೊಬ್ಬ ಇದ್ದನೆಂದು ಕವನ, ೯ನೇ ತರಗತಿ ಶ್ರೀರಾಮ ವಿದ್ಯಾಕೇಂದ್ರ, […]

ಕೃಷಿಯ ಖುಷಿ

ಕೃಷಿಯ ಖುಷಿ

ಏಪ್ರಿಲ್ ೨೦೨೦. ಅದು ಬೇಸಿಗೆ ಕಾಲ. ಎಲ್ಲೆಲ್ಲೂ ಕೊರೋನಾ ಲಾಕ್‌ಡೌನ್. ಹಾಗೆ ನಾನು ಅಜ್ಜಿ ಮನೆಗೆ ಹೋಗಿದ್ದೆ. ಅಲ್ಲಿ ನನ್ನ ಅಜ್ಜಿ ತರಕಾರಿ ಬೀಜಗಳನ್ನು ಒಣಗಿಸುತ್ತಿದ್ದರು. ನನ್ನ ಅಣ್ಣನ ಜೊತೆ ಆಟವಾಡುತ್ತ, ಬಿದಿರಿನ ಕೋಲಿನಲ್ಲಿ ಪುಟ್ಟ ಪುಟ್ಟ ಮನೆಗಳನ್ನು ಕಟ್ಟುತ್ತಾ ದಿನ ಕಳೆದವು. ಮಳೆಗಾಲ ಬಂತು. ನನ್ನ ಅಜ್ಜಿ ಮಣ್ಣನ್ನು ಅಗೆದು ಕೆಲವು ಬೀಜಗಳನ್ನು ಬಿತ್ತಿದರು. ಒಂದು ವಾರದಲ್ಲಿ ಹಾಕಿದ ಎಲ್ಲ ಬೀಜಗಳು ಚಿಗುರಿದವು. ನನಗಂತೂ ಖುಷಿಯೋ ಖುಷಿ. ಎರಡು ಮೂರು ವಾರಗಳು ಕಳೆದ ನಂತರ ಅವು […]

ಸಹಬಾಳ್ವೆಯಲ್ಲಿ ಸಂತೋಷ – ರಕ್ಷಣೆಯಿದೆ

ಸಹಬಾಳ್ವೆಯಲ್ಲಿ ಸಂತೋಷ – ರಕ್ಷಣೆಯಿದೆ

ಒಂದಾನೊಂದು ಕಾಡಿನಲ್ಲಿ ಮಾವಿನ ಮರ ಮತ್ತು ಹಲಸಿನ ಮರ ಎರಡು ಅಕ್ಕಪಕ್ಕದಲ್ಲಿ ಬೆಳೆದಿದ್ದವು. ಮಾವಿನ ಮರವು ತನ್ನ ಸಿಹಿಯಾದ ಹಣ್ಣುಗಳ ಬಗ್ಗೆ ಗರ್ವದಿಂದ ಇತರ ಪ್ರಾಣಿಗಳನ್ನು ತಾತ್ಸಾರದಿಂದ ಕಾಣುತ್ತಿತ್ತು. ಮಾವಿನ ಮರದ ಈ ಸ್ವಭಾವದಿಂದ ಎಲ್ಲಾ ಪ್ರಾಣಿಗಳು ಬೇಸತ್ತಿದ್ದವು. ಯಾವ ಪ್ರಾಣಿಗಳೂ ಮಾವಿನ ಮರದ ಸ್ನೇಹ ಮಾಡಿರಲಿಲ್ಲ. ಅದೇ ಹಲಸಿನ ಮರವು ಎಲ್ಲ ಪ್ರಾಣಿಗಳೊಂದಿಗೆ ಸ್ನೇಹದಿಂದ, ಮಮತೆಯಿಂದ ವರ್ತಿಸುತ್ತಿತ್ತು. ಹಲಸಿನ ಮರದ ಸ್ವಭಾವಕ್ಕೆ ಕಾಡಿನ ಪ್ರಾಣಿಗಳು ಮನಸೋತಿದ್ದವು. ಪಕ್ಷಿಗಳು ಹಾಗೂ ಜೇನುನೊಣಗಳು ತಮ್ಮ ಗೂಡನ್ನು ಕಟ್ಟಿಕೊಂಡಿದ್ದವು. ಹೀಗೆ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ