
ಒಬ್ಬ ರಾಜಕುಮಾರನಿಗೆ ಬೇಕಾದ ಕ್ರಮಶಿಕ್ಷಣ, ವಿದ್ಯಾಭ್ಯಾಸ ಎಲ್ಲ ನನಗಾಗಿತ್ತು. ಯುದ್ಧರಂಗದಲ್ಲಿ ಒಳ್ಳೆಯ ಯೋಧನೂ ಆಗುತ್ತಿದ್ದೆನೋ ಏನೋ, ನನ್ನ ಅಣ್ಣಂದಿರಂತೆ. ಎಷ್ಟು ಕಲಿತರೇನು, ಅದನ್ನು ಪ್ರಕಟಿಸುವ ಸಂದರ್ಭ ಬರಬೇಕಲ್ಲ? ನನ್ನ ಪಾಲಿಗೆ ಹಾಗೊಂದು ಸಂದರ್ಭ ಒದಗಿ ಬರಲೇ ಇಲ್ಲ. ಹೀಗಾಗಿ ನಾನು ಕಲಿತದ್ದೆಲ್ಲ ನನ್ನಲ್ಲಿ ಹೂತುಹೋಗಿತ್ತು. ಅದನ್ನು ಮತ್ತೆ ಮತ್ತೆ ಸುತ್ತಲಿದ್ದ ಸುಂದರಾಂಗಿಯರ ಎದುರು ವರ್ಣಿಸಿ ನಾನೊಬ್ಬ ಸಮರ್ಥ ಯೋಧ ಎಂದು ಅವರೆಲ್ಲ ನಂಬುವಂತೆ ಮಾಡಿದ್ದೆ. ಅವರು ಮಾತ್ರವಲ್ಲ ನಾನೇ ಸ್ವತಃ ಅದನ್ನು ನಂಬಿದ್ದೆ. ಒಬ್ಬ ಯೋಧನಾಗಿ ಪಾಂಡವರ […]