ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
59ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ಛಿನ್ನೋಽಪಿ ಚಂದನತರುರ್ನ ಜಹಾತಿ ಗಂಧಂ

ವೃದ್ಧೋಽಪಿ ವಾರಣಪತಿರ್ನ ಜಹಾತಿ ಲೀಲಾಮ್ |

ಯಂತ್ರಾರ್ಪಿತೋ ಮಧುರತಾಂ ನ ಜಹಾತಿ ಚೇಕ್ಷಂ

ಕ್ಷೀಣೋಽಪಿ ನ ತ್ಯಜತಿ ಶೀಲಗುಣಾನ್ ಕುಲೀನಃ ||

“ಗಂಧದ ಮರವನ್ನು ಕಡಿದರೂ ಅದು ತನ್ನ ಸುಗಂಧವನ್ನು ಸೂಸದೆ ಇರುವುದಿಲ್ಲ. ವಯಸ್ಸು ಕಳೆದಿದ್ದರೂ ಗಜರಾಜನು ತನ್ನ ವಿಲಾಸವನ್ನು ಬಿಡುವುದಿಲ್ಲ. ಗಾಣದಲ್ಲಿ ತಿರುವಿದಾಗಲೂ ಕಬ್ಬು ತನ್ನ ಸಿಹಿ ಗುಣವನ್ನು ತ್ಯಜಿಸುವುದಿಲ್ಲ. ಅದರಂತೆ ಸಂಸ್ಕಾರವಂತನಾದವನು ಪ್ರತಿಕೂಲ ಸನ್ನಿವೇಶದಲ್ಲಿಯೂ ತನ್ನ ಉತ್ತಮ ನಡತೆಯನ್ನು ಬಿಡುವುದಿಲ್ಲ.”

ಯಾವುದೊ ಅಹಿತಕರ ಸನ್ನಿವೇಶ ಎದುರಾದಾಗಲೋ ಅಥವಾ ತನ್ನ ಬಗೆಗೆ ಇತರರು ಅನುದಾರವಾಗಿ ನಡೆದುಕೊಂಡಾಗಲೋ ಅದಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ತೋರಬೇಕೆನಿಸುವುದು ವಿರಳವಲ್ಲ. ಇದು ಅಸಹಜವಲ್ಲವೆಂಬ ಧೋರಣೆಯೂ ಲೋಕದಲ್ಲಿ ಸಾಮಾನ್ಯವೇ. ಆದರೆ ಪ್ರಬುದ್ಧರಾದವರು ಅಂತಹ ಕ್ಲೇಶಕರ ಸಂದರ್ಭಗಳಲ್ಲಿಯೂ ಸ್ತಿಮಿತತೆಯನ್ನು ಕಳೆದುಕೊಳ್ಳದೆ ಸಮಾಹಿತಮನಸ್ಕರಾಗಿಯೆ ಇರುತ್ತಾರೆ. ಪ್ರಕೃತಿಗೂ ಸಂಸ್ಕೃತಿಗೂ ಭೇದ ಇದೇ.

ರೋಮನ್ ಚಕ್ರವರ್ತಿ ಜೂಲಿಯಸ್ ಸೀಸರನ ಅಮಿತ ಸಾಮರ್ಥ್ಯದ ಬಗೆಗೂ ಅಧಿಕಾರವಂತಿಕೆಯ ಬಗೆಗೂ ಅಸೂಯೆ-ಅಸಹನೆ ತಳೆದವರು ಅನೇಕರಿದ್ದರು. ಅಂತಹ ವಿರೋಧಿಯೊಬ್ಬ ಬರೆದ ಹಲವಾರು ದೂಷಣಪತ್ರಗಳ ಕಂತೆಯೊಂದು ಒಮ್ಮೆ ಸೀಸರನ ಗಮನಕ್ಕೆ ಬಂದಿತು. ಆತ ಅದಾವುದನ್ನೂ ಓದದೆಯೇ ಬೆಂಕಿಗೆ

ಹಾಕಿದ. ಅದನ್ನು ನೋಡಿದ ಮಿತ್ರನೊಬ್ಬ “ನೀವು ತಪ್ಪು ಮಾಡಿದಿರಿ. ಆ ಪತ್ರಗಳೆಲ್ಲ ಉಳಿದಿದ್ದರೆ ಅವನ್ನು ಬರೆದಿದ್ದವನು ನಿಮ್ಮ ಶತ್ರುವೆಂದೂ ಅವನು ಮಾತ್ಸರ್ಯಪೀಡಿತನೆಂದೂ ಬೇರೆಯವರಿಗೆ ತಿಳಿಯುತ್ತಿತ್ತು ಎಂದ. ಇದಕ್ಕೆ ಸೀಸರ್ ಉತ್ತರಿಸಿದ: ನಾನು ಯಾವುದೇ ಸನ್ನಿವೇಶದಲ್ಲಿಯೂ ಕ್ರೋಧಕ್ಕೆ ಒಳಗಾಗಬಾರದೆಂದು ನಿಶ್ಚಯಿಸಿದ್ದೇನೆ. ಆದ್ದರಿಂದ ಕ್ರೋಧಕ್ಕೆ ಸಂದರ್ಭವನ್ನೊದಗಿಸುವ ಮೂಲಕಾರಣವನ್ನೇ ನಾಶಮಾಡುವುದು ಒಳ್ಳೆಯದಲ್ಲವೆ?”

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ