
ಚಾಂಡಾಲನು ಇನ್ನೂ ಗಾಬರಿಯಾಗಿ ಮತ್ತಷ್ಟು ವೇಗವಾಗಿ ಓಡತೊಡಗಿ, ಅಲ್ಲೇ ಒಂದು ಕಲ್ಲನ್ನು ಎಡವಿ ಬಿದ್ದು ಕೂಡಲೇ ಮೂರ್ಛಿತನಾದನು. ವಿಷ್ಣುದಾಸನು ಬೇಗ ಬೇಗ ಅವನ ಬಳಿಗೆ ಬಂದು ತನ್ನ ಬಟ್ಟೆಯ ಸೆರಗಿನಿಂದ ಅವನ ಮುಖಕ್ಕೆ ಗಾಳಿ ಬೀಸಿದನು. ಚಾಂಡಾಲನು ಕಣ್ಣು ತೆರೆದಾಗ ವಿಷ್ಣುದಾಸನಿಗಾದ ಅಚ್ಚರಿಗೆ ಪಾರವೇ ಇರಲಿಲ್ಲ. ಏಕೆಂದರೆ ಅವನು ಸಾಕ್ಷಾತ್ ಶ್ರೀಮನ್ನಾರಾಯಣನೇ ಆಗಿದ್ದನು. ಅವನು ಚತುರ್ಭುಜಗಳಿಂದ ಕೂಡಿದ ನಿಜರೂಪದಿಂದ ಪ್ರತ್ಯಕ್ಷನಾದಾಗ ವಿಷ್ಣುದಾಸನು ಸ್ತುತಿಸಲೂ ತಿಳಿಯದೆ ಸುಮ್ಮನೆ ನಿಂತಿದ್ದನು. ಹಿಂದೆ ಕಾಂಚೀಪಟ್ಟಣದಲ್ಲಿ ಚೋಳನೆಂಬ ರಾಜನಿದ್ದನು. ಒಮ್ಮೆ ಅವನು ಅನಂತಶಯನ […]