
ಸ್ತ್ರೀ ಪಾತ್ರದಲ್ಲಿ ಅತ್ಯಂತ ತಲ್ಲೀನರಾಗಿ ಪರಕಾಯ ಪ್ರವೇಶ ಮಾಡುವ ಪುರುಷರು ಮನೆಯಲ್ಲಿನ ತಮ್ಮ ಪತ್ನಿಯರ, ಸಹೋದರಿಯರ ಭಾವಗಳನ್ನು ಅಷ್ಟೇ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ ಎಂಬ ಭರವಸೆ ಇದೆಯೇ? ಹಾಗಿರುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಸರ್ವವೇದ್ಯ. ರಂಗಭೂಮಿಯೆಂಬುದು ಬದುಕಿನ ಉತ್ಪ್ರೇಕ್ಷಿತ ಅನುಕರಣೆಯೇ ಹೊರತು ಅದು ಬದುಕಲ್ಲ. ಯಕ್ಷಗಾನ ತಾಳಮದ್ದಳೆಯ ಶ್ರೀಕೃಷ್ಣ ಸಂಧಾನ ಪ್ರಸಂಗ. ವಿದುರನ ಅರ್ಥ ಹೇಳುವ ಅವಕಾಶ ನನಗೆ ಒದಗಿ ಬಂದಿತ್ತು. ಮೊದಲ ಭಾಗದ ಭಕ್ತಿಯ, ಭಾವುಕತೆಯ ಕೃಷ್ಣನನ್ನು ಕಂಡ ಪುಳಕೋತ್ಸವದ ಹರ್ಷವೆಲ್ಲದರ ಅಭಿವ್ಯಕ್ತಿಯ ಬಳಿಕ ಮುಂದಿನ […]