ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2023 > June

ಸರ್ಕಾರ ಮತ್ತು ಜನತೆ

ಅಧಿಕಾರಕೇಂದ್ರಗಳಿಗೂ ಸಾಮಾನ್ಯ ಜನತೆಗೂ ನಡುವೆ ದೊಡ್ಡ ಕಂದರವಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ ಎಂಬ ವ್ಯಾಖ್ಯೆ ಹಿಂದಿನ ವರ್ಷಗಳಲ್ಲಿ ಆಗಾಗ ಕೇಳಬರುತ್ತಿತ್ತು. ಅದು ದಿಟವೂ ಆಗಿತ್ತು. ಜನಸಂಪರ್ಕದಿಂದ ಆದಷ್ಟು ದೂರವಿರಿ ಎಂದೇ ಆಡಳಿತ ತರಬೇತಿ ಕೇಂದ್ರದಲ್ಲಿ ಬೋಧಿಸಲಾಗುತ್ತಿತ್ತು ಎಂಬ ವಾಸ್ತವವನ್ನು ಅನೇಕ ಹಿರಿಯ ಅಧಿಕಾರಿಗಳೇ ಹೇಳಿದ್ದಿದೆ; ಅದು ಹಾಗಿರಲಿ. ಸರ್ಕಾರಕ್ಕೂ ಪ್ರಜೆಗಳಿಗೂ ನಡುವೆ ಹೆಚ್ಚು ನಿಕಟವೂ ಸ್ಥಾಯಿಯೂ ಆದ ಸಂಪರ್ಕವನ್ನು ಸಾಧಿಸುವುದು ಈಗಿನ ಆರೂಢ ಸರ್ಕಾರದ ಆದ್ಯತೆಗಳಲ್ಲೊಂದಾಗಿರುವುದು ಅದರ ಹಲವಾರು ಕ್ರಮಗಳಿಂದ ದ್ಯೋತವಾಗುತ್ತಿದೆ. ಇದು ಶ್ಲಾಘನೀಯವೆಂದು ಗುರುತಿಸಬೇಕು. ನಿದರ್ಶನಕ್ಕೆ […]

ದೀಪ್ತಿ

ಸತ್ಯಧರ್ಮಾರ್ಯವೃತ್ತೇಷು ಶೌಚೇ ಚೈವಾರಮೇತ್ಸದಾ | ಶಿಷ್ಯಾಂಶ್ಚ ಶಿಷ್ಯಾದ್ಧರ್ಮೇಣ ವಾಗ್ಬಾಹೂದರಸಂಯತಃ ||                                 – ಮನುಸ್ಮೃತಿ “ಸತ್ಯಪಥದಲ್ಲಿ, ಧರ್ಮಾಚರಣೆಯಲ್ಲಿ, ಶುಚಿಯಾಗಿರುವುದರಲ್ಲಿಯೇ ಸದಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಅನುಚರರನ್ನೂ ಧರ್ಮಮಾರ್ಗದಲ್ಲಿಯೆ ನಡೆಯುವಂತೆ ಪ್ರೋತ್ಸಾಹಿಸಬೇಕು. ಮಾತು, ತೋಳು, ಹೊಟ್ಟೆ – ಇವನ್ನು ಹತೋಟಿಯಲ್ಲಿರಿಸಿಕೊಂಡಿರಬೇಕು.” ಹೊರಮೈಯನ್ನು ಸಾಬೂನಿನಿಂದಲೋ ಅಂಥ ಅನ್ಯ ಪರಿಕರಗಳಿಂದಲೋ ತಿಕ್ಕಿ ಶುಚಿಗೊಳಿಸಿಕೊಳ್ಳುತ್ತೇವೆ. ಅದರಂತೆ ನಮ್ಮ ಒಳಗಿನ ಅಂಗಗಳ ಪಾರಿಶುದ್ಧ್ಯವನ್ನೂ ಕಾಪಾಡಿಕೊಳ್ಳಬೇಕಲ್ಲವೆ? ಹೊರಗಿನ ಮೈಗೆ ಕೊಳೆ-ಕಸರು ತಗಲುತ್ತಿರುವಂತೆ ಒಳಗಿನ ಅಂಗಗಳಾದ ಮನಸ್ಸು-ಬುದ್ಧಿಗಳಿಗೂ ಮಾಲಿನ್ಯ ಮೆತ್ತಿಕೊಳ್ಳುವ ಅವಕಾಶಗಳಿಗೆ ಕೊರತೆಯಿಲ್ಲ. ಇವಾದರೋ ಸೂಕ್ಷ್ಮರೂಪದವು. ಯಾರನ್ನೋ ನಿಂದನೆ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ