
೨೦೧೭ರ ಮೇ ತಿಂಗಳ ಮೊದಲ ವಾರದಲ್ಲಿ ಪ್ರದೀಪ್ ಆರ್ಯ ಅವರಿಗೆ ಸೈನ್ಯದಿಂದ ತುರ್ತು ಕರೆ ಬಂದಿತು. ಮುಂಬೈನ ಆದಾಯ ತೆರಿಗೆ ಕಚೇರಿಯಲ್ಲಿ ಕಡತಗಳ ಮಧ್ಯೆ ಕೆಲಸ ಮಾಡುತ್ತಿದ್ದ ಪ್ರದೀಪ್, ಕೂಡಲೇ ತಮ್ಮ ಮೇಲಧಿಕಾರಿಯ ಬಳಿ ಹೋಗಿ ರಜೆಗೆ ಅರ್ಜಿ ಹಾಕಿದರು. ಎಷ್ಟು ದಿನಕ್ಕೆ ವಾಪಸ್ ಬರುತ್ತೇನೆ ಎನ್ನುವುದೂ ತಿಳಿದಿಲ್ಲ, ಯಾವ ಕೆಲಸಕ್ಕೆ ತೆರಳುತ್ತಿದ್ದೇನೆ ಎನ್ನುವುದೂ ತಿಳಿದಿಲ್ಲ. ಪ್ಯಾರಾ ಸ್ಪೆಷಲ್ ಫೋರ್ಸಸ್ನ ಕಮಾಂಡಿಂಗ್ ಆಫೀಸರ್ ಅವರಿಂದ ಕರೆ ಬಂದಿತ್ತು. ಜಮ್ಮು-ಕಾಶ್ಮೀರದ ಊರಿ ಪ್ರದೇಶದಲ್ಲಿ ಎಲ್ಓಸಿ (LOC) ಸಮೀಪ ಕೆಲಸ […]