ತುಂಬ ಹೊತ್ತಾದರೂ ಅಣ್ಣನಾಗಲಿ, ಗಂಡನಾಗಲಿ ಹಿಂದಿರುಗದೆ ಇದ್ದಾಗ ಮದನಸುಂದರಿಯು ತಾನೇ ಮಂದಿರದ ಒಳಗೆ ಬಂದು ನೋಡುತ್ತಾಳೆ, ಅವರಿಬ್ಬರ ರುಂಡಮುಂಡಗಳೂ ಬೇರೆ ಬೇರೆಯಾಗಿ ಬಿದ್ದಿವೆ! “ಅಯ್ಯೋ, ಇದೇನು ಅನಾಹುತವಾಯ್ತು!’’ ಎಂದು ಅವಳು ತಲೆ ಚಚ್ಚಿಕೊಂಡು ಅತ್ತು ಕರೆದು ಮಾಡಿದಳು. ಕೊನೆಗೆ ತನ್ನ ಅತ್ಯಂತ ಪ್ರಿಯರಾದ ಇವರಿಬ್ಬರೂ ಮೃತರಾದ ಮೇಲೆ ತಾನಿನ್ನು ಬದುಕಿದ್ದು ಫಲವೇನು? ತಾನೂ ಪ್ರಾಣಾರ್ಪಣೆ ಮಾಡುತ್ತೇನೆ ಎಂದು ನಿರ್ಧರಿಸಿಕೊಂಡು ದೇವಿಗೆ ಕೈಮುಗಿದು “ದೇವಿ, ಮುಂದಿನ ಜನ್ಮದಲ್ಲಿಯೂ ಇವನೇ ನನಗೆ ಅಣ್ಣನಾಗುವಂತೆ, ಇವರೇ ನನಗೆ ಗಂಡನಾಗುವಂತೆ ಅನುಗ್ರಹ ಮಾಡು” […]













