ಲೋಕದಲ್ಲಿ ಅನೇಕರು ದುಃಖಿಗಳಿದ್ದಾರೆ. ಯಾಕೆ ಅವರಿಗೆ ದುಃಖ ಉಂಟಾಗುತ್ತದೆ? ಪರಿಹರಿಸಲಾರದ ಸಂಕಟವಾದರೆ ದುಃಖವುಂಟಾಗುವುದು ಸ್ವಾಭಾವಿಕ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ದುಃಖಿಸುವುದು ತನಗೆ ಬಯಸಿದ್ದು ಸಿಗಲಿಲ್ಲ ಎಂಬುದರಿಂದ. ಹೆಚ್ಚಿನ ಬಯಕೆಯೇ ಇಲ್ಲದವನಿಗೆ ಈ ದುಃಖವೂ ಇಲ್ಲ. ಬಯಕೆಗಳನ್ನು ಮಿತಿಯಲ್ಲಿಟ್ಟುಕೊಂಡರೆ ಅನೇಕ ಜನರ ದುಃಖ ಇಲ್ಲವಾದೀತು. ಆದರೆ ಪ್ರತಿಯೊಬ್ಬನೂ ತನಗೆ ಅರ್ಹತೆ ಮತ್ತು ಅವಕಾಶ ಇಲ್ಲವಾದಾಗಲೂ ಬೇಕು ಎನಿಸಿದುದನ್ನು ಪಡೆಯುವ ಪ್ರಯತ್ನಕ್ಕೆ ತೊಡಗುತ್ತಾನೆ. ಬಯಸಿದ್ದೆಲ್ಲ ಸಿಗುವುದಕ್ಕೆ ಸಾಧ್ಯವೆ? ಮೊದಲು ಇಲ್ಲವಲ್ಲ ಎಂಬ ದುಃಖ. ಆಮೇಲೆ ಪ್ರಯತ್ನಿಸಿಯೂ ಸಿಗಲಿಲ್ಲ ಎಂಬ […]













