
ಸ್ಟೇಶನ್ ತಲಪಿದ ಪೊಲೀಸ್, “ಇಲ್ಲಿ ಕೂತಿರಿ, ಸ್ವಲ್ಪ ಕಾಯಬೇಕಾಗುತ್ತೆ” ಎಂದು ಸುಧಾಕರನಿಗೆ ಹೇಳಿ, ಒಳಹೊಕ್ಕು ಮಾಯವಾದ. ಅಲ್ಲೇ ಇದ್ದ ಒಂದು ಹಳೆಯ ಮುರುಕುಬೆಂಚಿನ ಮೇಲೆ ಕೂತ ಸುಧಾಕರ ತಾನು ಯಾರಿಗಾಗಿ ಕಾಯಬೇಕು, ಯಾತಕ್ಕಾಗಿ ಕಾಯಬೇಕು ಎಂಬುದೂ ತಿಳಿಯದೆ, ಆದರೆ ಕಾಯುತ್ತಾ ಕುಳಿತ. ಸೊಳ್ಳೆಗಳು ಕಚ್ಚುತ್ತಿದ್ದವು. ಹೊರಗೆ ನಿಧಾನ ಕತ್ತಲು ಆವರಿಸುತ್ತಿತ್ತು. ಯಾರು ಯಾರೋ ಬರುತ್ತಿದ್ದರು, ಹೋಗುತ್ತಿದ್ದರು. ಬಸ್ ಇಳಿದವನು ತನ್ನ ಪಾಡಿಗೆ ತಾನು ಹೊರಡುವ ಬದಲು ಆ ಮುದುಕಿಯ ಬಗ್ಗೆ ಯಾಕೆ ಕರುಣೆ ತೋರಿದೆ, ಈಗ ಈ […]