ಚಂದ್ರಯಾನ್-೩, ಆದಿತ್ಯ ಎಲ್-೧ ಯಶಸ್ವಿ ಪ್ರಯೋಗಗಳಿಗಾಗಿ ದೇಶವಿಡೀ ಸಂಭ್ರಮಿಸುತ್ತಿರುವಾಗಲೇ ಮತ್ತೊಂದು ಇತಿಹಾಸಾರ್ಹ ಸಾಧನೆಗಾಗಿ ಬಾಹ್ಯಾಕಾಶ ಸಂಶೋಧನ ಸಂಸ್ಥೆ ‘ಇಸ್ರೋ’ ಗಮನ ಸೆಳೆದಿದೆ. ಆಂಗ್ಲ ವರ್ಷಾರಂಭದ ಜನವರಿ ೧ರಂದು ಪಿಎಸ್‌ಎಲ್‌ವಿ-ಸಿ೫೮ ರಾಕೆಟ್‌ನ್ನು ಉಡ್ಡಾಣಗೊಳಿಸಿ ಅದರ ಮೂಲಕ ಎಕ್ಸ್ಪೋ ಶಾಟ್ ಚಿತ್ರಣವನ್ನು ಭೂಗ್ರಹಕ್ಕೆ ರವಾನಿಸಿದೆ. ಖಗೋಳದಲ್ಲಿನ ಎಕ್ಸ್ರೇ ತರಂಗಗಳ ಉದ್ಗಮಸ್ಥಾನವನ್ನು ಗುರುತಿಸುವ ಲಕ್ಷ್ಯದಿಂದ ಎಕ್ಸ್ಪೋ ಶಾಟ್ ಪ್ರಯೋಗಿಸಿರುವುದು ಅಮೆರಿಕದ ನಾಸಾ ಹೊರತುಪಡಿಸಿದರೆ ಇದುವರೆಗೆ ಪ್ರಾಯಶಃ ಭಾರತ ಮಾತ್ರ. ಅಮೆರಿಕ, ರಷ್ಯ, ಫ್ರಾನ್ಸ್ ಮೊದಲಾದ ದೇಶಗಳಿಗೆ ತಾನು ಕಡಮೆಯಲ್ಲವೆಂದು ಸಾಕ್ಷö್ಯಪಡಿಸಿರುವ ಈ ಈಚಿನ ಸಾಧನೆ ವೈಜ್ಞಾನಿಕ ಮಹತ್ತ÷್ವದ್ದಾಗಿರುವುದು ಮಾತ್ರವಲ್ಲದೆ, ಅಸಂಖ್ಯ ಆಕಾಶಕಾಯಗಳಲ್ಲಿ ನಿಕ್ಷಿಪ್ತವಾಗಿರುವ ಅಪರಿಮಿತ ಹೊಸ ಸಂಪನ್ಮೂಲಗಳ ವಾಣಿಜ್ಯೀಕರಣಕ್ಕೂ ಭವಿಷ್ಯದಲ್ಲಿ ದಾರಿ ಮಾಡಲು ಅವಕಾಶವಾಗಿದೆ. ಹಾಗೆ ಹೊಸ ಉದ್ಯೋಗಾವಕಾಶ ಮೊದಲಾದ ಉಪಲಬ್ಧಿಗಳಿಗೂ ಬಾಗಿಲು ತೆರೆಯಲಿದೆ. ವಿಜ್ಞಾನ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾತ್ರದ ವರ್ಧನೆಯೂ ಆಗಲಿರುವುದು ನಿಶ್ಚಿತ.
ಮತ್ತೊಂದು ಬಾಹ್ಯಾಕಾಶ ಸಾಧನೆ
Month : February-2024 Episode : Author :