
ಬದುಕನ್ನು ಪ್ರೀತಿಸುವವ ಮೊದಲು ಬಿಡಬೇಕಾದುದು ವ್ಯಾಮೋಹವನ್ನು. ಆಗ ತನ್ನನ್ನು ಪ್ರೀತಿಸುವವರನ್ನೂ ಪ್ರೀತಿಸುವುದಾಗುತ್ತದೆ, ತನ್ನನ್ನು ಅರ್ಥಮಾಡಿಕೊಳ್ಳುವವರನ್ನೂ ಅರ್ಥಮಾಡಿಕೊಳ್ಳುವುದಾಗುತ್ತದೆ. ಯಾರನ್ನೋ ದೂರವಿಡುವುದು, ಯಾರನ್ನೋ ಹತ್ತಿರವಿಟ್ಟುಕೊಳ್ಳುವುದು ಇತ್ಯಾದಿ ಅಪಸವ್ಯಗಳು ಇಲ್ಲವಾಗುತ್ತವೆ. ಅದೊಂದು ಮಲೆನಾಡಿನ ಪುಟ್ಟ ಹಳ್ಳಿ. ಒಂಟಿ ಮನೆಗಳು. ಅವು ಪರಸ್ಪರ ಕಣ್ಣಳತೆಯಲ್ಲೂ ಇಲ್ಲ, ಕೂಗಳತೆಯಲ್ಲೂ ಇಲ್ಲ. ಅದೊಂದು ಮನೆಯ ಯಜಮಾನರಿಗೆ ಇಬ್ಬರು ಮಕ್ಕಳು. ದೊಡ್ಡವ ತುಂಬ ಓದಿ ದೂರದ ಮಹಾನಗರದಲ್ಲಿ ಕೈತುಂಬಾ ಪಗಾರದ ನೌಕರಿ ಮಾಡಿಕೊಂಡಿದ್ದಾನೆ. ನಿವೃತ್ತಿ ತನಕವಂತೂ ಐಷಾರಾಮಿ ಬದುಕನ್ನು ಬಾಳಲು ಅಡ್ಡಿಯಿಲ್ಲ. ಅನಂತರವೂ ಬರುವ ರೊಕ್ಕವೂ ಕಡಮೆಯದೇನಲ್ಲ. […]