ಅಣ್ಣನ ಬೋರ್ವೆಲ್ ಇರುವುದು ಅವನ ಮನೆಯ ಹಿಂದೆಯೇ. ನಮ್ಮದು ನಮ್ಮ ಮನೆಯಿಂದ ಫರ್ಲಾಂಗಿನಷ್ಟು ದೂರ. ಅಲ್ಲಿಂದ ನೀರು ತರುವುದು ಕಷ್ಟ. ಇದಕ್ಕಾಗಿ ನಾವು ಕುಡಿಯುವ ನೀರಿಗೆ ಪಂಚಾಯತಿಯ ನೀರನ್ನು ಆಶ್ರಯಿಸಬೇಕಾಗಿದೆ ಅಂತ ಬಂದೆ’ ಎಂದ. ನಾನು ಅವನಿಂದ ಅರ್ಜಿ ಕೊಡಿಸಿ ಪಿ.ಡಿ.ಓ. ಅವರಲ್ಲಿ ಮಂಜೂರು ಮಾಡಿ ‘ನಾಳೆಯೇ ಕೆಲಸ ಪ್ರಾರಂಭಿಸಿ’ ಎಂದಿದ್ದೆ. ಅವರು ಒಪ್ಪಿ ಪ್ಲಂಬಿಗ್ನ ವ್ಯವಸ್ಥೆ ಮಾಡಿಸಲು ಲಿಂಗಪ್ಪನನ್ನು ಕರೆದು ‘ನಾಳೆ ಇವರಿಗೆ ಪೈಪುಲೈನ್ ಹಾಕು’ ಎಂದು ನನ್ನ ಎದುರಿನಲ್ಲೇ ಆದೇಶಿಸಿದ್ದರು. ಆಗ ಲಿಂಗಪ್ಪ ‘ಸರ್ […]
ನೀರು ಬಂತು ನೀರು
Month : May-2024 Episode : Author : ಡಾ.ನಾ.ಮೊಗಸಾಲೆ