
ಖ್ಯಾತ ಸಿತಾರ್‌ಪಟು ರವಿಶಂಕರರ ವಿದ್ಯಾಭ್ಯಾಸದ ಮೊದಲ ದಿನಗಳು. ಅವರು ಅದೇ ತಾನೆ ಗುರುವಿನ ಬಳಿ ವಿದ್ಯೆ ಕಲಿಯಲು ಬಂದಿದ್ದರು. ಗುರುಗಳು ಪ್ರಥಮ ಪಾಠವನ್ನು ಹೇಳಿಕೊಡುತ್ತಿದ್ದರು. ರವಿಶಂಕರರಿಗೆ ಎಷ್ಟು ಪ್ರಯತ್ನಿಸಿದರೂ ನುಡಿಸಲು ಆಗುತ್ತಿರಲಿಲ್ಲ. ಗುರುವಿಗೆ ತುಂಬ ಕೋಪಬಂದಿತು. ಚೆನ್ನಾಗಿ ಬೈದರು. ಚಿಕ್ಕಂದಿನಿಂದ ಯಾರಿಂದಲೂ ಒಂದು ಮಾತನ್ನೂ ಕೇಳದಿದ್ದ ರವಿಶಂಕರರು ಇದರಿಂದ ಗಾಬರಿಗೊಳ್ಳುವ ಬದಲು ಕೋಪಗೊಂಡರು. ಗುರು ಅವರನ್ನು ಛೇಡಿಸುತ್ತ “ಹೋಗು, ಕೈಗಳಿಗೆ ಬಳೆ ತೊಟ್ಟುಕೊಂಡು ಬಾ, ಸ್ವಲ್ಪವೂ ಶಕ್ತಿ ಇಲ್ಲ. ಇಂಥ ಸಣ್ಣ ಪಾಠವನ್ನೂ ಸರಿಯಾಗಿ ಕಲಿಯದಿದ್ದ ಮೇಲೆ […]