
ಯಾರು ಮಾಹಿತಿ ಕೊಟ್ಟಿದ್ದರೋ ದೈವ ಎದ್ದು ನಿಲ್ಲುವ ಹೊತ್ತಿಗೆ ಮಾಧ್ಯಮದ ಮಂದಿ ಕೂಡ ಬಂದು ಸೇರಿದ್ದರು. ಬಹಳ ದೊಡ್ಡ ಸಭೆ. ಯಾರೋ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಇನ್ಯಾರೋ ಫೋಟೋ ತೆಗೆಯುತ್ತಿದ್ದರು. ಮಕ್ಕಳಂತೂ ತಮ್ಮತಮ್ಮ ಮೊಬೈಲುಗಳನ್ನು ಹಿಡಿದು ಚಿತ್ರೀಕರಣಕ್ಕೆ ತಕ್ಕ ಆಯಕಟ್ಟಿನ ಸ್ಥಳ ಹುಡುಕುತ್ತಿದ್ದರು. ಮಹಾದೇವ ಯಾರನ್ನೂ ಗಮನಿಸುತ್ತಿರಲಿಲ್ಲ. ತನ್ನ ಪಾಡಿಗೆ ತಾನಿದ್ದ. ದೈವ ಆವೇಶ ಸುರುವಾಗಿ ಎದ್ದು ನಿಲ್ಲುವ ಸ್ವಲ್ಪ ಮೊದಲು ಡಾ. ಅವನಿ ಕೂಡ ಅಲ್ಲಿಗೆ ಆಗಮಿಸಿದ್ದಳು. ಅವಳು ಚಾವಡಿಮನೆಯ ಒಳಗಿನಿಂದ ಮಹಾದೇವನನ್ನು ನೋಡುತ್ತ ಉಮ್ಮಳಿಸಿ […]