ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಸೂರಜ್ ಶಾಪಿಂಗ್ ಅದೂ ಇದೂ ಅಂತ ಬ್ಯುಸಿ ಆದ. ಬರಬರುತ್ತ ಅನನ್ಯಳಿಗೆ ಮೆಸೇಜ್ ಮಾಡುವುದು, ಕಾಲ್ ಮಾಡುವುದು ಕಡಮೆಯಾಯಿತು. ಇದರಿಂದ ಅನನ್ಯಳಿಗೆ ಏನೋ ಖಾಲಿ ಖಾಲಿ ಅನ್ನಿಸತೊಡಗಿತು. ಯಾವುದರಲ್ಲೂ ಮನಸ್ಸಿಲ್ಲ ತಾನು ಸೂರಜ್ನನ್ನು ಅಷ್ಟೊಂದು ಹಚ್ಚಿಕೊಂಡುಬಿಟ್ಟಿದ್ದೀನಾ ಅನ್ನೋ ಸಂದೇಹ ಕಾಡತೊಡಗಿತು. ಅವಳಿಗೇ ಅರಿವಿಲ್ಲದಂತೆ ಸೂರಜ್ ಮೇಲೆ ಪ್ರೀತಿ ಹುಟ್ಟಿಕೊಂಡಿತ್ತು. ಅವನನ್ನು ತಿರಸ್ಕರಿಸಿ ತಪ್ಪು ಮಾಡಿದೆ ಎನಿಸತೊಡಗಿತು. ಸೂರಜ್ಗೆ ಈಗಲೂ ನನ್ನ ಮೇಲೆ ಪ್ರೀತಿ ಇದೆ, ಅವನು ನನ್ನನ್ನು ಖಂಡಿತಾ ಒಪ್ಪಿಕೊಳ್ಳುತ್ತಾನೆ, ಅವನ […]
ತಿರುಗುಬಾಣ
Month : November-2024 Episode : Author : ಪೂರ್ಣಿಮಾ ರವಿ