ಬೈಂದೂರು ವ್ಯಾಪ್ತಿಯ ರೈತರಿಗೆ ಸಮರ್ಪಕ ನೀರು ಒದಗಿಸುವ ಏತನೀರಾವರಿ ಯೋಜನೆಗೆ ೭೪ ಕೋಟಿ ಅನುದಾನ ನೀಡಿದೆ; ವಿಪರ್ಯಾಸವೇನೆಂದರೆ, ಕಾಲುವೆಯಲ್ಲಿ ಮಾತ್ರ ನೀರಿಲ್ಲ. ೨೦೧೩-೧೪ರ ಬಜೆಟ್ ಸಂದರ್ಭ ಈ ಸೌಪರ್ಣಿಕಾ ಏತನೀರಾವರಿ ಯೋಜನೆ ಮುಕ್ತಾಯಗೊಂಡಿದೆ ಎನ್ನುವ ಹೇಳಿಕೆಯನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದರು. ಯೋಜನೆ ಮುಕ್ತಾಯಗೊಂಡು ೧೦ ವರ್ಷ ಸಮೀಪಿಸುತ್ತಿದ್ದರೂ ಇನ್ನೂ ಕೂಡ ಈ ಭಾಗದ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಮುಗಿದಿಲ್ಲ. ಇನ್ನೂ ಏತನೀರಾವರಿ ಕುರಿತ ಅಧ್ಯಯನದಲ್ಲೂ ಕೂಡ ಸಾಕಷ್ಟು ಗೊಂದಲಗಳಿದ್ದು, ಅಣೆಕಟ್ಟು ನೀರು ಹರಿವಿನ ಕುರಿತು ಸಮರ್ಪಕ ಅಧ್ಯಯನ ನಡೆಸದೆ ಇರುವುದು ಸೌಪರ್ಣಿಕಾ ಏತನೀರಾವರಿ ಬರಡಾಗಲು ಕಾರಣವಾಗಿದೆ.
ನಮ್ಮ ಸನಾತನ ಸಂಸ್ಕöÈತಿಯಲ್ಲಿ ನೀರಿಗೆ ದೈವಿಕ ಸ್ಥಾನವಿದೆ. ಆಧುನಿಕ ಭರಾಟೆಯಲ್ಲಿ ಮಾನವನು ನೀರಿನ ಸಂರಕ್ಷಣೆ ಹಾಗೂ ಅದರ ಉಪಯೋಗದ ಅರಿವಿಲ್ಲದೆ ಬದುಕುತ್ತ ಜಲಸಂಪನ್ಮೂಲದ ಸದ್ಬಳಕೆಯಲ್ಲಿ ಹಿಂದೆ ಉಳಿದಿದ್ದಾನೆ. ಭಾರತದ ಏಳು ಪವಿತ್ರ ನದಿಗಳಲ್ಲಿ ಒಂದಾದ ಕಾವೇರಿ ನದಿಯನ್ನು ಕೊಡಗಿನ ಜನ ಕುಲದೈವದಂತೆ ಪೂಜಿಸುತ್ತಾರೆ. ಹಾಗೆಯೆ ಪೂರ್ವ ಕರ್ನಾಟಕದ ನದಿಗಳಲ್ಲಿ ಒಂದಾದ ವರಾಹಿ ನದಿಯೂ ಕರಾವಳಿಭಾಗದ ಜನತೆಗೆ ದೇವರ ಪ್ರತಿರೂಪವಿದ್ದಂತೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಹೆಬ್ಬಾಗಿಲು ಎಂಬಲ್ಲಿ ವರಾಹಿ ನದಿಯ ಉಗಮವಾಗಿದೆ. ವರಾಹಿಯು ಸೌಪರ್ಣಿಕಾ, ಕೆದಕ, ಚಕ್ರ, ಕುಬ್ಜ ನದಿಗಳೊಂದಿಗೆ ಬೆರೆತು ಅನಂತರ ಪಶ್ಚಿಮ ಸಮುದ್ರವನ್ನು ಸೇರುತ್ತದೆ. ಸರಿಸುಮಾರು ೪೦ ವರ್ಷಗಳ ಹಿಂದೆ ಕುಂದಾಪುರ ಹಾಗೂ ಬ್ರಹ್ಮಾವರದ ಆಸುಪಾಸಿನ ಪ್ರದೇಶಗಳ ರೈತರಿಗೆ ಉಪಯೋಗವಾಗಲೆಂದು, ಆಗಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ೧೯೮೦ರ ಡಿಸೆಂಬರ್ ೩೦ರಂದು ವರಾಹಿಯೋಜನೆಯನ್ನು ಶಂಕುಸ್ಥಾಪನೆಗೊಳಿಸಿದರು. ಈ ಯೋಜನೆಯ ಪ್ರಮುಖ ಉದ್ದೇಶ ಜಲವಿದ್ಯುತ್ ಉತ್ಪಾದನೆಯಾಗಿದ್ದು, ಉತ್ಪಾದನೆಯ ಬಳಿಕ ಹೊರಹೋಗುವ ಸರಿಸುಮಾರು ೧೧೦೦ ಕ್ಯೂಸೆಕ್ ನೀರನ್ನು ಅಣೆಕಟ್ಟುಗಳ ಮೂಲಕ ಕುಂದಾಪುರ ಭಾಗದ ೩೩ ಹಾಗೂ ಉಡುಪಿ ಭಾಗದ ೨೫ ಹಳ್ಳಿಗಳಿಗೆ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸುವ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ನೀಡಿತ್ತು. ಈ ಎರಡು ಯೋಜನೆಗಳೂ ಕರಾವಳಿಭಾಗದ ರೈತರ ಪಾಲಿನ ಆಶಾಕಿರಣವಾಗಬಹುದು ಎನ್ನುವ ಕನಸು ಇಂದಿಗೂ ಕನಸಾಗಿಯೇ ಉಳಿದಿರುವುದು ವಿಷಾದನೀಯ. ರೈತರಿಗೆ ಪ್ರಯೋಜನವಾಗಬೇಕಿದ್ದ ಈ ಯೋಜನೆಯೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಪ್ರಯೋಜನಕರವಾಗುತ್ತಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆಗಿನ ಕೇಂದ್ರಸರ್ಕಾರ ನೀರಾವರಿಗೆ ಉತ್ತೇಜನ ನೀಡುವ ಉದ್ದೇಶದಿಂದ ೨೦೦೩-೨೦೦೪ ಕರ್ನಾಟಕ ನೀರಾವರಿ ನಿಗಮಕ್ಕೆ ಈ ಯೋಜನೆಯನ್ನ ವಹಿಸಲಾಗಿದ್ದು, ಅಂದಿನಿAದ ಇಂದಿನವರೆಗೂ ಯೋಜನೆ ಚುರುಕುಗೊಳ್ಳದೆ ಕಾಮಗಾರಿ ವಿಳಂಬವಾಗಿ ಕರಾವಳಿಭಾಗದ ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಅವಿಭಜಿತ ದಕ್ಷಿಣಕನ್ನಡದ ಬಹುದೊಡ್ಡ ಯೋಜನೆಗಳಲ್ಲಿ ವರಾಹಿಯೋಜನೆಯೂ ಒಂದಾಗಿದ್ದು, ಈ ಮಹತ್ತ್ವಪೂರ್ಣ ಯೋಜನೆಯನ್ನು ನಂಬಿಕೊಂಡು ಇಲ್ಲಿನ ಜನತೆ ಬ್ರಹ್ಮಾವರ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆಯನ್ನು ಕೂಡ ಆರಂಭಿಸಿದ್ದರು. ವರಾಹಿಯೋಜನೆಯೂ ಅಂದುಕೊಂಡಂತೆ ಸರಿಯಾದ ಸಮಯಕ್ಕೆ ಪೂರ್ಣಗೊಂಡಿದ್ದಿದ್ದರೆ, ಸಕ್ಕರೆ ಕಾರ್ಖಾನೆ ಯಶಸ್ವಿಯಾಗಿ ಸಂಭ್ರಮಾಚರಣೆ ಆಚರಿಸುತ್ತಿತ್ತು. ಈ ಯೋಜನೆಯೂ ಆಮೆಗತಿಯಲ್ಲಿ ಸಾಗಿದ್ದ ಪರಿಣಾಮ ಬ್ರಹ್ಮಾವರದ ಕಾರ್ಖಾನೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಿತ್ತು. ಇತ್ತ ಈ ಭಾಗದ ರೈತರು ಪೂರೈಕೆ ಮಾಡಿದ ಕಬ್ಬಿಗೂ ಹಣಸಿಗದೆ ಈ ಭಾಗದ ಜನರು ಸರ್ಕಾರದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡರು. ಇತ್ತ ೨೦೧೫ರಲ್ಲಿ ವರಾಹಿ ಎಡದಂಡೆಯ ಮೂಲಕ ನೀರು ಸಾಗಿಸುವ ಯೋಜನೆ ಪ್ರಾರಂಭಗೊAಡು, ಯೋಜನೆಯ ಅನುಸಾರವಾಗಿ ೪೪ ಕಿ.ಮೀ ಅಂದರೆ ಸರಿಸುಮಾರು ಶಂಕರನಾರಾಯಣ ಹೊಳೆಯಿಂದ ಕಾವ್ರಾಡಿಯವರೆಗೂ ಈ ಯೋಜನೆ ಪ್ರಗತಿ ಹೊಂದಬೇಕಿತ್ತು. ಆದರೆ ಸರ್ಕಾರ ಇದರ ಬದಲಾಗಿ ೧೮ ಕಿ.ಮೀ ಬಲದಂಡೆ ಯೋಜನೆ ಮಾಡುವ ಮುಖಾಂತರ, ಈ ಭಾಗದ ಕೃಷಿ ಭೂಮಿಗಳಿಗೆ ನೀರಿನ ಪ್ರಯೋಜನವಾಗಲಿದೆ ಎಂದು ಆಶ್ವಾಸನೆ ನೀಡಿತ್ತು. ಇದನ್ನೇ ನಂಬಿದ ಈ ಭಾಗದ ರೈತರು ವರಾಹಿಯೋಜನೆಯ ಬಲದಂಡೆ ನಿರ್ಮಿಸಲು ತಮ್ಮ ಭೂಮಿಯನ್ನು ಕೂಡ ಬಿಟ್ಟುಕೊಟ್ಟಿದ್ದರು. ಇಂದಿಗೂ ಕೆಲ ರೈತರ ಭೂಪಹಣಿ ಪತ್ರದಲ್ಲಿ ಕರ್ನಾಟಕದ ನೀರಾವರಿ ಯೋಜನೆ ಎಂದೇ ಉಲ್ಲೇಖಿತವಾಗಿದೆ. ಈ ಯೋಜನೆಯ ಕುರಿತು Comptroller and Auditor General of India ವರದಿಯೊಂದನ್ನು ನೀಡಿದ್ದು, ವಿಳಂಬಗತಿಯ ಯೋಜನೆಯಿಂದ ಯಾವುದೇ ಕಾರ್ಯಸಾಧನೆಯಾಗಿಲ್ಲ, ಕೇವಲ ೮ ಕಾಮಗಾರಿ ಮುಗಿಯಲು ಆರು ವರ್ಷ ತಗುಲಿದ್ದು, ಕಾಮಗಾರಿ ಪೂರ್ಣಕ್ಕೂ ಮುನ್ನವೇ ೨೩೪ ಕೋಟಿಯಿಂದ ೨೮೭ ಕೋಟಿಗೆ ಏರಿಕೆಯಾಗಿ, ಟೆಂಡರ್ ಪ್ರಕ್ರಿಯೆ ಸರಿಯಾಗಿಲ್ಲವೆಂದು ಆ ಸಿ.ಎ.ಜಿ ವರದಿ ನೀಡಿತ್ತು. ಬಜೆಟ್ಗೂ ಮುನ್ನ ಮುಖ್ಯಮಂತ್ರಿಯವರು ವರಾಹಿ ಏತನೀರಾವರಿಯ ಮೂಲಕ ವರುಣತೀರ್ಥ ಕೆರೆಯನ್ನು ತುಂಬಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದರೆ ಈ ಬಾರಿಯ ಬಜೆಟ್ನಲ್ಲಿ ವರಾಹಿ ಏತನೀರಾವರಿ ಪಟ್ಟಿಯನ್ನು ಕೈಬಿಡುವ ಮೂಲಕ ಕರಾವಳಿಭಾಗದ ಜನತೆಯಲ್ಲಿ ಮತ್ತೆ ನಿರಾಶೆ ಮೂಡಿಸಿದ್ದಾರೆ. ಒಟ್ಟಾರೆ ವರಾಹಿಯೋಜನೆಯೂ ವಿಳಂಬಗೊಳ್ಳುತ್ತಿರುವ ಹಿನ್ನೆಲೆ ಕರಾವಳಿಭಾಗದ ರೈತಾಪಿ ವರ್ಗಕ್ಕೆ ಸಾಕಷ್ಟು ತೊಂದರೆಯಾಗುತ್ತಿದ್ದು, ಈ ಸಮಸ್ಯೆಯನ್ನು ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಏತನೀರಾವರಿಗೆ ಪುನರ್ಜನ್ಮ ನೀಡಬೇಕಿದೆ
ಈ ಬಾರಿ ಮಳೆಯ ಪ್ರಮಾಣ ಕಡಮೆಯಾಗಿದ್ದು, ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕರಾವಳಿ ಜನತೆಗೂ ನೀರಿನ ಸಮಸ್ಯೆ ಉಂಟಾಗಿದೆ. ಒಂದು ವೇಳೆ ವರಾಹಿಯೋಜನೆ ಸಮರ್ಪಕವಾಗಿ ಪೂರ್ಣಗೊಂಡಿದ್ದಿದ್ದರೆ ಕರಾವಳಿಭಾಗದ ಜನರಿಗೆ ನೀರಿನ ಸಮಸ್ಯೆ ನಿವಾರಣೆಯಾಗುತ್ತಿತ್ತು. ಉದಾಹರಣೆಗೆ ಕಳೆದ ಮೇ ತಿಂಗಳಲ್ಲಿ ಸೌಪರ್ಣಿಕಾ ಏತನೀರಾವರಿ ಯೋಜನೆ ಕಾಲುವೆ ನೀರಿಲ್ಲದೆ ಬರಡು ಕಾಲುವೆಯಾಗಿ ಕಾಣಸಿಗುತ್ತಿತ್ತು. ಬೈಂದೂರು ವ್ಯಾಪ್ತಿಯ ರೈತರಿಗೆ ಸಮರ್ಪಕ ನೀರು ಒದಗಿಸುವ ಏತನೀರಾವರಿ ಯೋಜನೆಗೆ ೭೪ ಕೋಟಿ ಅನುದಾನ ನೀಡಿದೆ; ವಿಪರ್ಯಾಸವೇನೆಂದರೆ, ಕಾಲುವೆಯಲ್ಲಿ ಮಾತ್ರ ನೀರಿಲ್ಲ. ೨೦೧೩-೧೪ರ ಬಜೆಟ್ ಸಂದರ್ಭ ಈ ಸೌಪರ್ಣಿಕಾ ಏತನೀರಾವರಿ ಯೋಜನೆ ಮುಕ್ತಾಯಗೊಂಡಿದೆ ಎನ್ನುವ ಹೇಳಿಕೆಯನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದರು. ಯೋಜನೆ ಮುಕ್ತಾಯಗೊಂಡು ೧೦ ವರ್ಷ ಸಮೀಪಿಸುತ್ತಿದ್ದರೂ ಇನ್ನೂ ಕೂಡ ಈ ಭಾಗದ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಮುಗಿದಿಲ್ಲ. ಇನ್ನೂ ಏತನೀರಾವರಿ ಕುರಿತ ಅಧ್ಯಯನದಲ್ಲೂ ಕೂಡ ಸಾಕಷ್ಟು ಗೊಂದಲಗಳಿದ್ದು, ಅಣೆಕಟ್ಟು ನೀರು ಹರಿವಿನ ಕುರಿತು ಸಮರ್ಪಕ ಅಧ್ಯಯನ ನಡೆಸದೆ ಇರುವುದು ಸೌಪರ್ಣಿಕಾ ಏತನೀರಾವರಿ ಬರಡಾಗಲು ಕಾರಣವಾಗಿದೆ. ಇತ್ತ ಸೌಪರ್ಣಿಕಾ ನದಿ ಹರಿವನ್ನು ನಿಲ್ಲಿಸಿದ್ದ ಪರಿಣಾಮವಾಗಿ ಮಾವಿನಗುಳಿ ಪ್ರದೇಶದ ಜನರಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಕೆಲ ಮಾಧ್ಯಮಗಳ ವರದಿ ಪ್ರಕಾರ ಕಳೆದ ಎಂಟು ವರ್ಷಗಳಿಂದ ಏತನೀರಾವರಿ ಮೂಲಕವೇ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ವಿತರಣೆ ಮಾಡಲಾಗುತ್ತಿದೆ. ನೀರು ವಿತರಣಾಕೇಂದ್ರದ ಮೂಲಕ ಹರಿಯುವ ನೀರಿನ ಸಾಮರ್ಥ್ಯ ೩.೧೫ ಕ್ಯೂಸೆಕ್ ಆಗಿದ್ದು ಬಡಾಕೆರೆ, ಹಕ್ಲಾಡಿ, ವಂಡ್ಸೆ, ಹರ್ಕೂರು, ಆಲೂರು, ನಾರ್ಕಳಿ, ಕುಂದಬಾರಂದಾಡಿ, ನೂಜಾಡಿ ಗ್ರಾಮಗಳು ಫಲಾನುಭವಿಗಳಾಗಿದ್ದು, ಇಲ್ಲಿನ ಭಾಗದ ಕೃಷಿಕರೇ ನೀರಿಗಾಗಿ ಒದ್ದಾಡುವ ಪರಿಸ್ಥಿತಿ ಬಂದಿದೆ. ಕೃಷಿಯನ್ನೇ ಕೇಂದ್ರ ಬಿಂದುವನ್ನಾಗಿಸಿ ಅನುಷ್ಠಾನಕ್ಕೆ ತಂದ ವರಾಹಿನೀರಾವರಿ ಯೋಜನೆ ಇಂದಿಗೂ ಕೂಡ ರೈತರಿಗೆ ಆಶಾಕಿರಣವಾಗದೆ ಸರ್ಕಾರದ ಖಜಾನೆ ತುಂಬಿಸುವ ಯೋಜನೆಯಾಗಿಬಿಟ್ಟಿದೆ. ಇತ್ತೀಚಿಗಷ್ಟೇ ವಿಧಾನಪರಿಷತ್ತಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವರಾಹಿನೀರಾವರಿ ಯೋಜನೆಯನ್ನು ೨೦೨೫ರ ಒಳಗಾಗಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು, ಆದರೆ ಇತ್ತ ಬಜೆಟ್ನಲ್ಲಿ ಏತನೀರಾವರಿಯನ್ನೇ ಕೈಬಿಡಲಾಗಿದ್ದು, ಕಾಂಗ್ರೆಸ್ ಸರ್ಕಾರದ ಈ ನಡೆ ಅನೇಕ ಸಂಶಯಗಳಿಗೆ ಕಾರಣವಾಗಿದೆ. ಬೈಂದೂರು ಹಾಗೂ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಮಳೆಗಾಲದ ಸಮಯ ಗುಡ್ಡ ಕುಸಿದು ಕಾಲುವೆಗಳು ಸಂಪೂರ್ಣ ಹದಗೆಟ್ಟು ಹೋಗಿರುತ್ತದೆ. ಈ ಹಿಂದೆ ಅನೇಕ ಬಾರಿ ಇಂತಹ ಘಟನೆಗಳು ನಡೆದಿದ್ದು, ಕಾಲುವೆ ಸಮೀಪದ ಸಾರ್ವಜನಿಕರು ಇಂದಿಗೂ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ಕೃಷಿಭೂಮಿಗೆ ನೀರು ಹರಿವು ಕಾಣದೆ, ಸುತ್ತಮುತ್ತಲಿನ ಕಲ್ಲು ಕ್ವಾರಿಗಳಲ್ಲಿ ನೀರು ತುಂಬಿಕೊಂಡಿರುತ್ತದೆ. ಯೋಜನೆಯ ಉದ್ದೇಶ ಒಳ್ಳೆಯದಾಗಿದ್ದರೂ ಅದರ ಗುರಿಯನ್ನು ತಲಪಲು ಸರ್ಕಾರಗಳು ಇಂದಿಗೂ ಪರದಾಡುತ್ತಿವೆ.
ಒಂದೊಮ್ಮೆ ಗಮನಿಸಿದರೆ ಈ ಯೋಜನೆಯಲ್ಲಿ ನೀರಿನ ಹರಿವಿಗಿಂತ ಹಣದ ಹರಿವೇ ಜಾಸ್ತಿಯಾದಂತೆ ಕಾಣುತ್ತಿದೆ. ರೈತರು ಭಾರತದೇಶದ ಬೆನ್ನೆಲುಬು ಎನ್ನುವ ಮಾತಿದೆ, ಇದೀಗ ಸರ್ಕಾರ ಬಜೆಟ್ನಲ್ಲಿ ಏತನೀರಾವರಿಯನ್ನು ಕೈಬಿಟ್ಟು ರೈತರ ಬೆನ್ನೆಲುಬನ್ನೇ ಮುರಿಯುವಂತಹ ಕೆಲಸಕ್ಕೆ ಕೈಹಾಕಿದಂತಿದೆ. ಹಿಂದಿನ ಬಿಜೆಪಿ ಸರ್ಕಾರ ಜಲ ಜೀವನ್ಮಿಷನ್ ಮೂಲಕ ಗ್ರಾಮೀಣಭಾಗದ ಜನರಿಗೆ ನೀರನ್ನು ಸರಬರಾಜು ಮಾಡುವಲ್ಲಿ ಯಶಸ್ವಿಯಾಗಿತ್ತು. ಇಂತಹ ಅನೇಕ ಮಹತ್ತ÷್ವಪೂರ್ಣ ಯೋಜನೆಗಳ ಬಗ್ಗೆಯೂ ಇಂದಿನ ಸರ್ಕಾರ ಅವಲೋಕಿಸಬೇಕಿದೆ. ತಕ್ಷಣವೇ ರಾಜ್ಯಸರ್ಕಾರ ವರಾಹಿ ಏತನೀರಾವರಿ ಯೋಜನೆಗೆ ಉತ್ತೇಜನ ನೀಡಬೇಕಿದೆ.