ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ದಾತೃಯಾಚಕಯೋರ್ಭೇದಃ ಕರಾಭ್ಯಾಮೇವ ದರ್ಶಿತಃ |

ಏಕಸ್ಯ ಗಚ್ಛತಾಧಸ್ತಾದುಪರ್ಯನ್ಯಸ್ಯ ತಿಷ್ಠತಾ ||

– ಬೃಹತ್ಕಥಾ

“ಕೆಳಗೆ ಮುಂದಕ್ಕೆ ಮೇಲ್ಮುಖವಾಗಿ ಚಾಚಿರುವ ಕೈಯಿಂದ, ಮತ್ತು ಮೇಲಿರುವ ಇನ್ನೊಬ್ಬನ ಕೈ ಕೆಳಮುಖವಾಗಿ ಚಾಚಿರುವುದರಿಂದ – ಹೀಗೆ ದಾನಿಗೂ ಯಾಚಕನಿಗೂ ನಡುವಣ ವ್ಯತ್ಯಾಸವಿರುವುದು ಕೈಗಳ ವಿನ್ಯಾಸದಲ್ಲಷ್ಟೆ.”

ವೈಶ್ವಿಕ ವ್ಯವಸ್ಥೆಯ ದೃಷ್ಟಿಯಿಂದ ಪರಿಶೀಲಿಸುವಾಗ ಕೊಡುವವನು, ತೆಗೆದುಕೊಳ್ಳುವವನು ಎಂಬ ರೀತಿಯ ಭೇದಗಣನೆಗೆ ಹೆಚ್ಚು ಅರ್ಥವಿರದೆಂದು ಸೂಚಿಸಲು ಮೇಲಣ ಉಕ್ತಿ ಹೊರಟಿದೆ.

ಒಂದು ಊರಿನಲ್ಲಿ ಸಜ್ಜನನೊಬ್ಬನಿದ್ದ. ಕೊಡುಗೈ ದಾನಿ ಎಂದು ಅವನ ಪ್ರಸಿದ್ಧಿ ಇದ್ದಿತು. ದಾನ ಕೊಡುವಾಗ ಸಹಜವಾಗಿ ಅವನ ಕೈ ಮೇಲೆ ಇರುತ್ತಿತ್ತು. ಆದರೆ ಅವನು ಎಂದೂ ದಾನ ಪಡೆಯುವವರನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಕಣ್ಣು ಮುಚ್ಚಿರುತ್ತಿತ್ತು. ಒಮ್ಮೆ ಮಿತ್ರನೊಬ್ಬ ಕೇಳಿದ – “ಯಜಮಾನರೆ, ನೀವು ಇಷ್ಟೆಲ್ಲ ಭಾರಿ ಪ್ರಮಾಣದಲ್ಲಿ ದಾನ ಮಾಡುತ್ತೀರಿ. ಆದರೆ ನಿಮ್ಮ ಕಣ್ಣು ಸದಾ ಕೆಳಮುಖವಾಗಿಯೆ ಇರುತ್ತದಲ್ಲ? ಹೀಗೆ ಪಡೆಯುವವರ ಪರಿಚಯ ನಿಮಗೆ ಆಗುವುದೇ ಇಲ್ಲ. ಕೆಲವರು ಎರಡು ಸಲ ದಾನವನ್ನು ತೆಗೆದುಕೊಂಡರೂ ನಿಮಗೆ ತಿಳಿಯಲು ಅವಕಾಶವಾಗುವುದಿಲ್ಲ.” ಇದಕ್ಕೆ ಸಜ್ಜನ ಉತ್ತರಿಸಿದ: “ನಿಜವಾಗಿ ದಾನ ಕೊಡುವವನು ಬೇರೆಯೇ ಇದ್ದಾನೆ – ಅವನು ಭಗವಂತ. ನಾನು ನಿಮಿತ್ತ, ಮಾಧ್ಯಮ ಮಾತ್ರ. ಆದರೆ ಜನರು ನನ್ನನ್ನು ದಾನಿಯೆಂದು ಕರೆಯುತ್ತಾರೆ. ಅದರಿಂದ ನನಗೆ ತುಂಬಾ ನಾಚಿಕೆಯಾಗುತ್ತದೆ. ಹೀಗಾಗಿ ಕಣ್ಣನ್ನು ಎತ್ತರಿಸಿ ನೋಡಲು ನನಗೆ ಮನಸ್ಸಾಗುವುದಿಲ್ಲ.”

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ