ಕಳೆದ (೨೦೨೩) ಜುಲೈ ೧೪ರಂದು ಶ್ರೀಹರಿಕೋಟಾದ ಸತೀಶ್‌ಧವನ್ ವೇದಿಕೆಯಿಂದ ಯಶಸ್ವಿಯಾಗಿ ಉಡ್ಡಯನಗೊಂಡ ಇಸ್ರೋ-ನಿರ್ಮಿತ ಚಂದ್ರಯಾನ-೩ ಬಾಹ್ಯಾಕಾಶ ನೌಕೆ ಈ ಪ್ರೌಢಕ್ಷೇತ್ರದಲ್ಲಿ ಭಾರತದ ವಿಜ್ಞಾನಿಗಳ ಮೇಲ್ಮಟ್ಟದ ಸಾಧನೆಯನ್ನು ಅಸಂದಿಗ್ಧವಾಗಿ ಸಾಕ್ಷ್ಯಪಡಿಸಿದೆ. ಹಾಗೆ ನೋಡಿದರೆ ಇದು ಭಾರತದ ಮೊದಲ ಅಥವಾ ಏಕೈಕ ಸಾಧನೆಯೇನಲ್ಲ. ಇಸ್ರೋ ೪೨೪ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಪ್ರಥಮ ಪ್ರಯತ್ನದಲ್ಲಿಯೆ ಮಂಗಳಗ್ರಹದ ಕಕ್ಷೆಯನ್ನು ಪ್ರವೇಶಿಸಿದ ಮೊತ್ತಮೊದಲ ದೇಶ ಭಾರತವೇ. ಇದುವರೆಗೆ ನಿಷ್ಕ್ರಿಯವೆಂದೂ ವಾಸಯೋಗ್ಯವಲ್ಲವೆಂದೂ ಭಾವಿಸಲಾಗಿದ್ದ ಚಂದ್ರನಲ್ಲಿ ನೀರಿನ ಮತ್ತು ಮಂಜುಗಡ್ಡೆಯ ಇರುವಿಕೆಯನ್ನು ಸಾಬೀತುಪಡಿಸಿರುವುದು ಭಾರತ. ಇದೀಗ ಭಾರತ ನಡೆಸಿರುವ ಸೂರ್ಯಶಿಕಾರಿಯಿಂದಲೂ ಅಭೂತಪೂರ್ವ ಮಾಹಿತಿ ಲಬ್ಧವಾಗುವುದು ನಿಶ್ಚಿತ. ನಮ್ಮ ವಿಜ್ಞಾನಿಗಳ ಅನುಪಮ ಸಾಧನೆಗೆ ಆಬಾಲವೃದ್ಧರಾಗಿ ದೇಶವೆಲ್ಲ ಸಂಭ್ರಮಿಸುತ್ತಿರುವುದು ಸಹಜ.
ಬಾಹ್ಯಾಕಾಶ ವಿಜ್ಞಾನ: ಭಾರತದ ಅನುಪಮ ಸಾಧನೆ
Month : October-2023 Episode : Author :