ಯಸ್ಯ ನಾಸ್ತಿ ನಿಜಾ ಪ್ರಜ್ಞಾ ಕೇವಲಂ ತು ಬಹುಶ್ರುತಃ |
ಸ ನ ಜಾನಾತಿ ಶಾಸ್ತ್ರಾರ್ಥಂ ದರ್ವೀ ಪಾಕರಸಾನಿವ ||
– ಮಹಾಭಾರತ
“ಯಾರಿಗೆ ಸ್ವಯಂಪ್ರಜ್ಞೆ ಇಲ್ಲದೆ ಪುಸ್ತಕಗಳ ಓದು ಮಾತ್ರ ಇರುತ್ತದೆಯೋ ಅಂತಹವರಿಗೆ ಶಾಸ್ತ್ರಗ್ರಂಥಗಳ ನಿಜವಾದ ಅರ್ಥ ಗೋಚರಿಸಲಾರದು. ಒಳ್ಳೆಯ ಅಡುಗೆಯ ರುಚಿಯನ್ನು ನಾಲಿಗೆಯು ಗ್ರಹಿಸಬಲ್ಲದೇ ಹೊರತು ಅಡುಗೆಯಾಗುತ್ತಿದ್ದ? ಹೊತ್ತೂ ರಸ್ಯಪದಾರ್ಥಗಳ ಜೊತೆಯಲ್ಲಿಯೇ ಇರುವ ಸೌಟು ಅಲ್ಲ.”
ಪುಸ್ತಕಪಾಂಡಿತ್ಯವೇ ಸರ್ವಸ್ವವೆಂದು ಭ್ರಮಿಸಿದ್ದ ಪಂಡಿತನೊಬ್ಬ ಒಬ್ಬ ಸಾಧುವಿನ ದರ್ಶನಕ್ಕಾಗಿ ಹೋದ. ಸಾಧುವು ಸಕ್ಕರೆಯಿಂದ ಮಾಡಿದ್ದ ಸುಂದರ ಪು?ಕೃತಿಯನ್ನು ಪಂಡಿತನ ಮುಂದೆ ಇರಿಸಿದ. ಪಂಡಿತನು ಅದರ ಅಂದದಿಂದ ಆಕರ್ಷಿತನಾಗಿ ಹೀಗೂ ಹಾಗೂ ತಿರುಗಿಸಿ ನೋಡುತ್ತಲಿದ್ದ. ಸಾಧುವು ಮುಗುಳ್ನಕ್ಕು ಆ ಗೊಂಬೆಯನ್ನು ಎರಡು ಚೂರು ಮಾಡಿ ಒಂದನ್ನು ತಿನ್ನುವಂತೆ ಪಂಡಿತನ ಕೈಗಿತ್ತು ಇನ್ನೊಂದನ್ನು ತಾನು ತಿಂದ. ಅನಂತರ ಪಂಡಿತನೂ ಉಳಿದ ಚೂರನ್ನು ತಿಂದ; ಅವನ ಮುಖ ಈಗ ಉಲ್ಲಾಸಮಯವಾಯಿತು. ಸಾಧುವು ಪಂಡಿತನಿಗೆ ಹೇಳಿದ:
“ಇ? ವ? ನೀನು ಸಾಧಿಸಿದುದೆಲ್ಲ ಈ ಹೂವಿನ ಆಕೃತಿಯಂತೆ. ಅದನ್ನು ನಾನು ನಿನಗಿತ್ತಾಗ ನೀನು ಅದರ ಅಂದವನ್ನು ಮೆಚ್ಚಿದೆಯೇ ಹೊರತು ಅದನ್ನು ತಿಂದು ಸವಿಯಬೇಕೆಂದು ನಿನಗೆ ಅನ್ನಿಸಲಿಲ್ಲ. ಕೇವಲ ಗ್ರಂಥಪಾಂಡಿತ್ಯವು ಈ ಹೂವಿನ ಆಕೃತಿಯಂತೆ. ಧ್ಯಾನಮಾರ್ಗದಿಂದ ಶಾಸ್ತ್ರಗ್ರಂಥಗಳ ಸಾರವನ್ನು ಕಂಡುಕೊಳ್ಳುವುದೇ ಗಮ್ಯವಾಗಬೇಕು. ಗ್ರಂಥಗಳ ಪರಮಪ್ರಯೋಜನವೆಂದರೆ ನಿನ್ನನ್ನು ಧ್ಯಾನಮಾರ್ಗದಲ್ಲಿ ನೆಲೆಗೊಳಿಸುವುದು. ಇನ್ನು ಮುಂದೆಯಾದರೂ ನಿನ್ನಲ್ಲಿ ಇಂತಹ ಅಂತರ್ಮುಖತೆ ಏರ್ಪಡಲಿ.”
ಭಗವಾನ್ ರಮಣಮಹರ್ಷಿಗಳ ಸೂಕ್ತಿ ಇದು: “ಕೇವಲ ಬೇರೆಯವರ ಮುಂದೆ ಪ್ರದರ್ಶಿಸುವುದಕ್ಕ? ಕೆಲಸಕ್ಕೆ ಬರುವ ಗ್ರಂಥಜ್ಞಾನದಿಂದ ಆತ್ಮಾನುಭವಕ್ಕೆ ಏನೂ ಪ್ರಯೋಜನವಾಗದು. ಅಂತಹ ಗ್ರಂಥಮಾತ್ರನಿ?ರ ಮಾತುಗಳನ್ನು ಕೇಳುವವರಿಗೂ ಅವುಗಳು ವ್ಯರ್ಥವಾದವೆಂಬುದು ತಿಳಿದಿರುತ್ತದೆ. ಅದಕ್ಕಾಗಿಯೆ ಶ್ರೀರಾಮಕೃ? ಪರಮಹಂಸರು `ಕೇವಲ ಶಾಸ್ತ್ರವಿ?ಯಕ ಶು?ಪ್ರಸಂಗಗಳಿಂದ ದೈವವು ಗೋಚರಿಸದು. ದೈವಸಾಕ್ಷಾತ್ಕಾರಕ್ಕಾಗಿ ಹೃದಯ ತಪಿಸಿದಲ್ಲದೆ ಬರಿಯ ವಾಗ್ವಿಲಾಸವು ಭ್ರಮೆಗ? ದಾರಿಮಾಡೀತು. ಮಾತುಗಳ ವೈಖರಿಯಿಂದ ಭಗವಂತನನ್ನು ವಂಚಿಸಲಾಗದು’ ಎಂದಿರುವುದು.”