೧೮೯೬ರ ಆರಂಭದ ತಿಂಗಳುಗಳಲ್ಲಿ ಮಾರ್ಗರೆಟ್ ಯಾವುದೋ ಆವೇಶದಿಂದ ಗ್ರಸ್ತಳಾದಂತೆ ಭಗವದ್ಗೀತೆ ಉಪನಿ?ತ್ತುಗಳು ಮೊದಲಾದ ವಾಙ್ಮಯದ ಗಾಢ ಅಧ್ಯಯನದಲ್ಲಿ ಮುಳುಗಿದಳು. ತಾನು ದೀರ್ಘಕಾಲದಿಂದ ಅರಸುತ್ತಿದ್ದ ಸಮಾಧಾನ ಆ ವ್ಯಾಸಂಗದಿಂದ ಲಭಿಸತೊಡಗಿದೆ ಎಂಬ ಭಾವನೆ ಅವಳಲ್ಲಿ ಉದಿಸಿತ್ತು. ಅದು ಕೇವಲ ಬೌದ್ಧಿಕ ವ್ಯಾಯಾಮವಾಗಿರಲಿಲ್ಲ. ವೇದಾಂತದ ಆಧಾರತತ್ತ್ವಗಳಿಗೆ ಅವಳ ಹೃದಯವೇ ಅನುರಣಿಸತೊಡಗಿತ್ತು. ತನ್ನ ಜೀವನದ ಅಂತಿಮ ಲಕ್ಷ್ಯವೇನೆಂಬುದು ಕಡೆಗೂ ಅವಳಿಗೆ ಗೋಚರಿಸಿತ್ತು. ಹೀಗಾಗಿ ೧೮೯೬ರ ಏಪ್ರಿಲ್ ತಿಂಗಳಲ್ಲಿ ಸ್ವಾಮೀಜಿ ಲಂಡನ್ನಿಗೆ ಮರಳಿದಾಗ ಕಂಡದ್ದು ಪೂರ್ಣ ಪರಿವರ್ತನೆಗೊಳಗಾದ ಹೊಸ ಮಾರ್ಗರೆಟ್ಳನ್ನು. ಹೀಗೆಂದು ಅವಳು ತನ್ನ ಪರೀಕ್ಷಕ ಬುದ್ಧಿವೃತ್ತಿಯನ್ನು ತ್ಯಜಿಸಿದ್ದಳೆಂದೇನಲ್ಲ. ಸ್ವಾಮಿಜೀಯವರಿಗೆ ಬಗೆಬಗೆಯ ಪ್ರಶ್ನೆಗಳನ್ನು ಸಂದೇಹಗಳನ್ನೂ ಒಡ್ಡುತ್ತಲೇ ಇದ್ದಳು. ಇದು ಸ್ವಾಮಿಜೀಯವರಿಗೆ ಅಚ್ಚರಿಯೆಂದೇನೂ ಅನ್ನಿಸಲಿಲ್ಲ. ಏಕೆಂದರೆ ಅವರೂ ಈ ಮಾರ್ಗವನ್ನು ಕ್ರಮಿಸಿದವರ?! ಅವರನ್ನು ಗುರುಮಹಾರಾಜರು ಇಷ್ಟಪಟ್ಟಿದ್ದುದಕ್ಕೆ ಇದೂ ಒಂದು ಕಾರಣವಾಗಿತ್ತು. ಮೊದಮೊದಲಲ್ಲಿ ಮಾರ್ಗರೆಟ್ ಕೇಳುತ್ತಿದ್ದ ಪ್ರಶ್ನೆಗಳು ಬೌದ್ಧಿಕ ಕುತೂಹಲದ ಸ್ತರದಲ್ಲಿ ಇರುತ್ತಿದ್ದವು. ಕ್ರಮೇಣ ಅದು ಆನುಭವಿಕತೆಯ ಕಡೆಗೆ ತಿರುಗುವುದೆಂಬ ಭರವಸೆ ಸ್ವಾಮಿಜೀಯವರಿಗೆ ಇದ್ದಿತು. ಗೋಷ್ಠಿಗಳಲ್ಲಿ ವಾರಕ್ಕೆ ಒಂದು ದಿನವನ್ನು ಸ್ವಾಮಿಜೀ ಪ್ರಶ್ನೋತ್ತರಗಳಿಗಾಗಿಯೇ ಮೀಸಲಿರಿಸಿದ್ದರು. ಆ ಅವಧಿಯಲ್ಲಿ ಅತಿ ಹೆಚ್ಚು ಪ್ರಶ್ನೆಗಳು ಹೊಮ್ಮುತ್ತಿದ್ದುದು ಮಾರ್ಗರೆಟ್ಳಿಂದಲೇ. ಸ್ವಾಮಿಜೀ ಪ್ರತಿಪಾದಿಸುತ್ತಿದ್ದ ವೇದಾಂತದರ್ಶನದ ಸೂಕ್ಷ್ಮತೆಗಳು ಅಲ್ಲಿದ್ದ ಪಾಶ್ಚಾತ್ಯ ಅನುಯಾಯಿಗಳಿಗೆ ಪೂರ್ಣ ಅಪರಿಚಿತವಾಗಿದ್ದ ಸನ್ನಿವೇಶವೂ ಇದ್ದಿತು. ಮಾಯಾವಾದವನ್ನು ಕುರಿತು ಸ್ವಾಮಿಜೀ ಅನೇಕ ಅವಧಿಗಳಲ್ಲಿ ವಿಸ್ತಾರವಾಗಿ ವಾಖ್ಯಾನ ಮಾಡಿದ ಮೇಲೂ ಅದನ್ನು ಗ್ರಹಿಸುವುದು ಪಾಶ್ಚಾತ್ಯರಿಗೆ ಸುಲಭವಿರಲಿಲ್ಲ. ಆ ವೇಳೆಗೇ ಸಾಕ? ಮೂಲಗ್ರಂಥಗಳ ಪರಿಚಯವನ್ನು ಮಾರ್ಗರೆಟ್ ಮಾಡಿಕೊಂಡಿದ್ದರೂ ಅವಳಿಗೂ ಮಾಯಾವಾದ ಸಿದ್ದಾಂತವು ಸುಲಭಗ್ರಾಹ್ಯವೆನಿಸಲಿಲ್ಲ. ಕ್ರಮಕ್ರಮೇಣ ಹೆಚ್ಚಿನ ಸ್ಪ?ತೆ ಮೂಡತೊಡಗಿತು. ಆದರೂ ಸ್ವಾಮಿಜೀ ಮಾಡುತ್ತಿದ್ದ ಮಂಡನೆಗಳಿಗೂ ಭಾರತದ ಸದ್ಯಃ ಸ್ಥಿತಿಗೂ ಹೇಗೆ ತಾಳೆಯಾಗಿರುತ್ತದೆ – ಎಂಬ ಶಂಕೆಯೂ ಮಾರ್ಗರೆಟ್ಳ ಮನಸ್ಸನ್ನು ಕೆಣಕುತ್ತಿದ್ದಿತು.
ಗಾಢ ಅಂತರ್ಮಥನದ ಫಲವಾಗಿ ಕೊನೆಗೊಮ್ಮೆ ಮಾರ್ಗರೆಟ್ ’ಸ್ವಾಮಿಜೀ, ದೈವೇಚ್ಛೆ ಇದ್ದಲ್ಲಿ ನಾನೂ ಬಂದು ನಿಮ್ಮ ಪ್ರಯತ್ನಗಳಲ್ಲಿ ಸೇರಿಕೊಳ್ಳುವೆ’ ಎಂದಾಗ ಸ್ವಾಮಿಜೀ ಕೆಲವುಕ್ಷಣ ಮೌನವಾಗಿದ್ದು ಹೇಳಿದುದು ಒಂದೇ ಮಾತನ್ನು: “ನಾನು ಒಬ್ಬ ಸಂನ್ಯಾಸಿ.”
ಹೆಚ್ಚು ಮಾತುಕತೆಯ ಆವಶ್ಯಕತೆ ಇರಲಿಲ್ಲ.
ಅಂತರ್ಯಾನ, ಬಹಿರ್ಯಾನ
ಆನಂತರ ಸ್ವಾಮಿಜೀ ಕೈಗೊಂಡ ಮೂರು ತಿಂಗಳ ಯೂರೋಪ್ ಪ್ರವಾಸ ಒಂದು ’ದಿಗ್ವಿಜಯ’ವೇ ಆಯಿತು. ಪ್ರವಾಸ ಮುಗಿಸಿ ಅವರು ಹಿಂದಿರುಗುವ ವೇಳೆಗೆ ಮಾರ್ಗರೆಟ್ ಮಾತ್ರವಲ್ಲದೆ ಇನ್ನು ಹಲವರೂ ಸೇವಾದೀಕ್ಷೆ ತಳೆದು ಭಾರತಕ್ಕೆ ತೆರಳಲು ನಿಶ್ಚಯಿಸಿದ್ದರು. ಅವರ ಮನೋನಿಶ್ಚಲತೆಯ ಬಗೆಗೆ ಸ್ವಾಮಿಜೀಯವರಲ್ಲಿಯೂ ಭರವಸೆ ಮೂಡಿತ್ತು. ಆದರೂ ಮಾರ್ಗರೆಟ್ಳ ಮನಸ್ಸಿನೊಳಗಣ ತುಮುಲ ಪೂರ್ತಿ ಅಣಗಿರಲಿಲ್ಲ. ಮಾರ್ಗರೆಟ್ ಭಾರತಕ್ಕೆ ತೆರಳಿ ಸಾಧನೆಗೂ ಸೇವೆಗೂ ಅರ್ಪಿತಗೊಳ್ಳುವುದು ವ್ಯವಹಾರ್ಯವೆಂದು ಸ್ವಾಮಿಜೀ ಸೂಚನೆ ನೀಡಿದುದು ೧೮೯೬ರ ನವೆಂಬರ್ ತಿಂಗಳಿನಲ್ಲಿ.
ಅದಾದ ಮೇಲೂ ಮಾರ್ಗರೆಟ್ ಭಾರತಯಾನಕ್ಕೆ ಸನ್ನದ್ಧಳಾಗಲು ಒಂದು ವರ್ಷವೇ ಹಿಡಿಯಿತು.
ವೇದಾಂತದ ಕಕ್ಷೆಯಲ್ಲಿ ಸದಾ ವಿರಕ್ತಿ, ಮುಕ್ತಿ, ಮೋಕ್ಷ – ಇವುಗಳ ಪ್ರಸ್ತಾವಗಳೇ ಮೇಲಿಂದ ಮೇಲೆ ಬರುತ್ತಿದ್ದವು. ಅದರ ಒಂದು ಪರಿಣಾಮವೆಂದರೆ ಅಭ್ಯುದಯಸಾಧನೆಯಲ್ಲಿ ತಮ್ಮದೂ ಪಾತ್ರವಿದೆಯೆಂದು ಜನಸಾಮಾನ್ಯರಿಗೆ ಅನ್ನಿಸುತ್ತಿರಲಿಲ್ಲ. ಶಿಕ್ಷಣದ ಉನ್ನತೀಕರಣ ಮೊದಲಾದ ವಿಧಾನಗಳ ಮೂಲಕ ಸಮಾಜವನ್ನು ಶಕ್ತಿವಂತವಾಗಿಸಬೇಕು ಎಂದು ಸ್ವಾಮಿಜೀ ನಿರಂತರವಾಗಿ ಸಾರುತ್ತಿದ್ದುದು ಮೇಲಣ ಭೂಮಿಕೆಯಲ್ಲಿ.
ಭಾರತಕ್ಕೆ ಬಂದ ಕೆಲವೇ ವರ್ಷಗಳಲ್ಲಿ ನಿವೇದಿತಾರವರು ಎಷ್ಟು ಮುಖಗಳಲ್ಲಿ ಏಕಕಾಲಕ್ಕೆ ಕ್ರಿಯಾಶೀಲರಾದರೆಂದು ನೆನೆದರೆ ವಿಸ್ಮಯವಾಗುತ್ತದೆ. ಬೇರೆಯವರ ಕಲ್ಪನೆಯಲ್ಲಿಯೆ ಇರದಿದ್ದ ಜನಜಾಗರಣವಿಧಾನಗಳಲ್ಲಿ ಅವರು ಸತ್ವರರಾದರು. ಇಡೀ ದೇಶದ ಜನರ, ಅದರಲ್ಲಿಯೂ ತರುಣರ ಮನಃಪಟಲದ ಮುಂದೆ ಒಂದು ರಾ?ಧ್ವಜದ ಚಿತ್ರವು ಅಚ್ಚೊತ್ತಿದ್ದರೆ ಅದು ಒಂದು ಶಾಶ್ವತ ಪ್ರೇರಣಸ್ಥಾನ ಆದೀತೆಂಬ ಯೋಚನೆ ಅವರಿಗೆ ಬಹು?ಃ ೧೯೦೪ರ ವೇಳೆಗೆ ಬಂದಿದ್ದಿರಬೇಕು. ಹೊರಗಿನ ಸನ್ನಿವೇಶಗಳು ಬದಲಾದರೂ ಜನರ ಅಂತರಂಗದಲ್ಲಿ ಧ್ಯೇಯನಿ?ಯ ಸಾತತ್ಯಕ್ಕೆ ಇಂಬುಗೊಡಬಲ್ಲದ್ದು ರಾಷ್ಟ್ರಧ್ವಜ.
ಪೌರುಷೋಜ್ಜೀವನ
ನಿವೇದಿತಾರವರ ಮನಸ್ಸು ವೇಗವಾಗಿ ಪಕ್ವಗೊಳ್ಳುತ್ತಿದೆ ಎನಿಸಿದಾಗ ಒಮ್ಮೆ ಸ್ವಾಮಿಜೀ ಆಕೆಗೆ ಹೇಳಿದರು: “ನಮ್ಮ ವಿಶಿಷ್ಟ ಅಧ್ಯಾತ್ಮ ಸಾಧನ ಪದ್ಧತಿಯನ್ನು ಪ್ರಚುರಗೊಳಿಸಬೇಕೆಂಬುದಷ್ಟೇ ನನ್ನ ಗುರಿಯಲ್ಲ. ಎಲ್ಲ ವಿಧಾನಗಳಿಂದಲೂ ಭಾರತದೇಶವನ್ನು ಪೌರುಷಮಯಗೊಳಿಸುವುದನ್ನು ನನ್ನ ಜೀವಿತಕಾರ್ಯವೆಂದು ನಾನು ಭಾವಿಸಿದ್ದೇನೆ.” ಈ ಸ್ಫುಟೀಕರಣವು ನಿವೇದಿತಾರವರಿಗೆ ಎಷ್ಟು ಆನಂದ ತಂದಿತೆಂಬುದನ್ನು ಹೇಳುವ ಆವಶ್ಯಕತೆಯಿಲ್ಲ. ತನ್ನ ಅಂತರಂಗದ ಭಾವನೆಗಳಿಗೇ ಸ್ವಾಮಿಜೀ ಶಬ್ದರೂಪ ಕೊಡುತ್ತಿದ್ದಾರೆ ಎನಿಸಿತು. ಇದು ಒಮ್ಮೆಗೇ ಆಗುವ ಕಾರ್ಯ ಅಲ್ಲವೆಂದು ತಾಳ್ಮೆಯಿಂದ ಹೆಜ್ಜೆಹೆಜ್ಜೆಯಾಗಿ ಮುಂದುವರಿಯುವುದು ಅನಿವಾರ್ಯವೆಂದೂ ಸ್ವಾಮಿಜೀ ಎಚ್ಚರಿಸದಿರಲಿಲ್ಲ. ಮಹಿಳೆಯರ ಏಳ್ಗೆ ಮೊದಲಾದ ಲಕ್ಷ್ಯಸಾಧನೆಗಳನ್ನು ಇಡೀ ಸಮಾಜವು ಏಕಾಏಕಿ ಸ್ವೀಕರಿಸುವ ಪರಿಸರ ಆಗ ಇರಲಿಲ್ಲ. ವಾಸ್ತವವಾಗಿ ಇಂತಹ ಅಭ್ಯುದಯಪಥಕ್ಕೆ ಸಮಾಜವನ್ನು ಅಣಿಗೊಳಿಸಿದುದರಲ್ಲಿ ಮಹತ್ತ್ವದ ಪಾತ್ರ ನಿರ್ವಹಿಸಿದವರು ಸ್ವಾಮಿಜೀ ಮತ್ತು ನಿವೇದಿತಾ ಅಂತಹವರೇ. ಸಾರ್ವಜನಿಕ ನೈರ್ಮಲ್ಯದ ಆವಶ್ಯಕತೆ ಕುರಿತೂ ಮಠದ ಸ್ವಾಮಿಗಳೊಡನೆ ನಿವೇದಿತಾ ಗಲ್ಲಿಗಲ್ಲಿಗಳಿಗೆ ಹೋಗಿ ಆರೋಗ್ಯಪೋಷಕ ಕ್ರಮಗಳನ್ನು ಜನರಿಗೆ ಬೋಧಿಸಬೇಕಾಯಿತು. ಈ ಯೂರೋಪಿನ ಮಹಿಳೆ ತಾನೇ ಪೊರಕೆ ಹಿಡಿದು ಗುಡಿಸುವುದನ್ನು ಕಂಡ ಮೇಲಂತೂ ಸ್ಥಳೀಯರಿಗೆ ಆಕೆಯ ತಾದಾತ್ಮ್ಯಭಾವನೆಯ ಬಗೆಗೆ ಶಂಕೆ ಉಳಿಯಲಿಲ್ಲ. ಹೆಚ್ಚುಹೆಚ್ಚು ಜನ ಉತ್ಸಾಹದಿಂದ ಕೈಜೋಡಿಸತೊಡಗಿದರು. ಪ್ಲೇಗ್ ಆಘಾತ ತಗುಲಿದಾಗಲಂತೂ ಆಕೆ ’ಓವರ್ಟೈಮ್’ ಕೆಲಸ ಮಾಡಬೇಕಾಯಿತು.
ಸ್ವಾಮಿಜೀಯವರ ಅನುಚರಣೆ ಮತ್ತಿತರ ಚಟುವಟಿಕೆಗಳ ನಡುವೆ ನಿವೇದಿತಾರವರ ಆಂತರಂಗಿಕ ಕಾಲಿ ಉಪಾಸನೆ ಹೆಚ್ಚುಹೆಚ್ಚು ತೀವ್ರಗೊಳ್ಳುತ್ತಿತ್ತು. ಅವರ ಪ್ರಸಿದ್ಧವಾದ ’ಮಹಾಮಾತೆ ಕಾಲಿ’ ಪ್ರಬಂಧ ಸಂಗ್ರಹ ಸಿದ್ಧಗೊಂಡದ್ದು ಅದೇ ದಿನಗಳಲ್ಲಿ. ಅವರ ಏಕಾಂತಸಾಧನೆ ಪ್ರಖರಗೊಂಡಂತೆಲ್ಲ ಅವರು ಸ್ವಾಮಿಜೀಯವರಿಂದ ಬೋಧನೆಯ ರೂಪದಲ್ಲಿ ಗ್ರಹಿಸಿದ್ದ ಆಧಾರತತ್ತ್ವಗಳು ಅನುಭವಗಮ್ಯವಾಗತೊಡಗಿದವು.
ದೇಶೋನ್ನತಿಗೆ ಪ್ರೋತ್ಸಾಹನ
ಖ್ಯಾತ ವಿಜ್ಞಾನಿ ಜಗದೀಶ ಚಂದ್ರ ಬೋಸ್ ಅವರು ವಿದ್ಯುತ್ ತರಂಗಗಳನ್ನು ಕುರಿತೂ ಸಸ್ಯಗಳಲ್ಲಿಯೂ ಜೀವವಿದೆಯೆಂಬ ತಮ್ಮ ಆವಿ?ರಣವನ್ನು ಕುರಿತೂ ಲಂಡನ್ನಿನಲ್ಲಿಯೂ ಪ್ಯಾರಿಸಿನಲ್ಲಿಯೂ ಜಾಗತಿಕ ಮಟ್ಟದ ಶ್ರೇಷ್ಠ ವಿಜ್ಞಾನಿಗಳ ಸಮ್ಮುಖದಲ್ಲಿ ಪ್ರದರ್ಶನ ನೀಡಿ ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರರಾದದ್ದು ಸುವಿದಿತ. ಪ್ಯಾರಿಸಿನ ವಿದ್ವತ್ ಪರಿಷತ್ತಿನಲ್ಲಿ (೧೯೦೦) ಸ್ವಾಮಿ ವಿವೇಕಾನಂದರು ಉಪಸ್ಥಿತರಿದ್ದು ಬೋಸ್ರವರ ಸಂಶೋಧನೆ ಉಂಟುಮಾಡಿದ ಸಂಚಲನವನ್ನು ತಮ್ಮ ಕಣ್ಣುಗಳಿಂದಲೇ ನೋಡಿ ಭಾರತೀಯರೊಬ್ಬರಿಂದ ಇಂತಹ ಉನ್ನತ ಸಾಧನೆ ಆದುದರ ಬಗೆಗೆ ಸ್ವಾಮಿಜೀ ರೋಮಾಂಚನಗೊಂಡರು. ಜನಾಂಗೀಯ ಭಾವನೆಯ ಹಲವರು ಪಾಶ್ಚಾತ್ಯರು ಬೋಸ್ರವರ ಬಗೆಗೆ ಅನುದಾರವಾಗಿ ನಡೆದುಕೊಂಡಾಗ ಅವರು ಧೈರ್ಯಗೆಡದಂತೆ ಅವರನ್ನು ಹುರಿದುಂಬಿಸಿದವರು ನಿವೇದಿತಾ. ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಬೋಸ್ರವರು ವಿಶ್ವವಿದ್ಯಾಲಯವು ಪಕ್ಷಪಾತ ತೋರಿ ಪಾಶ್ಚಾತ್ಯರಿಗೆ ನೀಡುತ್ತಿದ್ದ ವೇತನದ ಮೂರರಲ್ಲೆರಡು ಭಾಗದ?ನ್ನೇ ನೀಡುತ್ತಿದ್ದಾಗ ಬೋಸ್ ಪ್ರತಿಭಟನೆಯಾಗಿ ಸಂಬಳವನ್ನೇ ನಿರಾಕರಿಸಿ ಬಗೆಬಗೆಯ ಬವಣೆಗಳನ್ನು ಅನುಭವಿಸುತ್ತಿದ್ದಾಗ ಅವರಿಗೆ ನಿರಂತರ ಬೆಂಬಲವಾಗಿ ನಿಂತಿದ್ದವರು ನಿವೇದಿತಾ. ಜಗದೀಶಚಂದ್ರ ಬೋಸ್ರವರ ಸಾಧನೆಯ ಉನ್ನತಿಯನ್ನು ಕುರಿತು ಪ್ರಸಾರ ಮಾಡುವುದರಲ್ಲಿಯೂ ನಿವೇದಿತಾರವರ ಮುಖ್ಯ ಪಾತ್ರ ಇದ್ದಿತು. ಬೋಸ್ರವರು ಹೆಚ್ಚಿನ ಪ್ರಮಾಣದ ಬರಹದಲ್ಲಿ ತೊಡಗಬೇಕೆಂದು ಸದಾ ಪ್ರೋತ್ಸಾಹಿಸುತ್ತಿದ್ದವರು ನಿವೇದಿತಾ.
ವಿಜ್ಞಾನಿ ಜಗದೀಶಚಂದ್ರ ಬೋಸ್ ಅವರ ಅದ್ಭುತ ಸಾಧನೆಗಳಿಗೆ ಪ್ರಭಾವಿ ವರ್ಗಗಳ ಗಮನವನ್ನು ಸೆಳೆದದ್ದು, ಸ್ವಾಮಿಜೀಯವರ ಸಲಹೆಯಂತೆ ಜೆಮ್ಶೆಡ್ಜೀ ಟಾಟಾ ಅವರು ಸ್ಥಾಪಿಸಲು ಸಂಕಲ್ಪಿಸಿದ್ದ ವಿಜ್ಞಾನಸಂಸ್ಥೆಯ ಪರವಾಗಿ ಪ್ರಚಾರ ನಡೆಸಿದುದು – ಇವು ನಿವೇದಿತಾರವರ ಚರಿತ್ರಾರ್ಹ ಕೊಡುಗೆಗಳೆಂಬ ಪರಿಗಣನೆಗೆ ಅರ್ಹವಾಗಿವೆ.
ವಿಜ್ಞಾನಿ ಜಗದೀಶಚಂದ್ರ ಬೋಸ್ ೧೯೧೭ರ ಅಂತ್ಯದಲ್ಲಿ ತಮ್ಮದೇ ವಿಜ್ಞಾನ ಶೋಧಸಂಸ್ಥಾನವನ್ನು ಸ್ಥಾಪಿಸಿದ ಸಂದರ್ಭದಲ್ಲಿ ಅವರು ಹೃದಯ ತುಂಬಿ ಹೇಳಿದರು: “ನನ್ನ ವೈಜ್ಞಾನಿಕ ಶೋಧಕಾರ್ಯದಲ್ಲಿ ಅತಿಶಯವಾಗಿ ಬೆಂಬಲಿಸಿ ನನ್ನನ್ನು ಋಣಿಯಾಗಿಸಿದವರು ನಿವೇದಿತಾ. ಅವರನ್ನು ಭಗವತಿ ಎಂದೇ ನಾನು ಕರೆಯಬಯಸುತ್ತೇನೆ. ಆ ಶ್ರೇಷ್ಠ ಮಹಿಳಾಮಣಿಗೆ ನಾನು ಸದಾ ಕೃತಜ್ಞನಾಗಿರುವೆ. ನನ್ನ ಈ ಶೋಧಸಂಸ್ಥಾನದ ಸ್ಥಾಪನೆಗಾಗಿ ನಿವೇದಿತಾರವರು ಅದೆಷ್ಟು ಬಗೆಯಾಗಿ ಶ್ರಮಿಸಿದರೆಂಬುದನ್ನು ಬಲ್ಲವನು ನಾನು ಮಾತ್ರ.”
ಆ ವಿಜ್ಞಾನಮಂದಿರದ ಒಂದು ಪಾರ್ಶ್ವದಲ್ಲಿ ಕೈಯಲ್ಲಿ ದೀವಿಗೆಯನ್ನು ಹಿಡಿದ ಸ್ತ್ರೀ ಮೂರ್ತಿಯೊಂದರ ಶಿಲ್ಪವನ್ನು ನಿವೇದಿತಾರವರ ನೆನಪಿಗಾಗಿ ಪ್ರತಿಷ್ಠೆ ಮಾಡಲಾಯಿತು.
ಸಮಾಜದೊಡನೆ ಐಕ್ಯಾತ್ಮ; ಭಾರತೀಯತೆಯ ಉದ್ದೀಪನ
ದಿನಗಳೆದಂತೆ ನಿವೇದಿತಾ ಕೋಲ್ಕತಾ ಆಸುಪಾಸಿನ ಗ್ರಾಮೀಣ ಪ್ರದೇಶಗಳಿಗೆ ಹೋಗುವುದು, ಅಲ್ಲಿಯ ಸ್ಥಳೀಯರೊಡನೆ ಬೆರೆಯುವುದು – ಇದು ಅವರ ದಿನಚರಿಯೇ ಆಯಿತು. ತಾನು ಸೇವೆ ಮಾಡಬಯಸಿದ್ದ ಪ್ರದೇಶದ ಒಂದೊಂದು ವೈಶಿಷ್ಟ್ಯವನ್ನು ಪೂರ್ಣವಾಗಿ ಮೈಗೂಡಿಸಿಕೊಳ್ಳುವುದು ಅವರ ಆಶಯವಾಗಿತ್ತು.
ಭಾರತದ ಮತ್ತು ಭಾರತೀಯರ ಬಗೆಗೆ ನಿವೇದಿತಾ ಅವರು ಬೆಳೆಸಿಕೊಂಡಿದ್ದ ಏಕಾತ್ಮ ಭಾವನೆ ರವೀಂದ್ರನಾಥ ಠಾಕೂರರ ಮೇಲೂ ದಟ್ಟ ಪ್ರಭಾವವನ್ನು ಬೀರಿತು. ನಿವೇದಿತಾರವರು ಕೇವಲ ಪ್ರವಾಸಿಗರಾಗಿಯೊ ಒಂದಷ್ಟು ಕಾಲವ್ಯಯದ ಉದ್ದೇಶದಿಂದಲೋ ಬಂದವರಲ್ಲವೆಂಬುದು ಅವರಿಗೆ ಮನವರಿಕೆಯಾಗಲು ತಡವಾಗಲಿಲ್ಲ.
ರವೀಂದ್ರನಾಥರಂತೆ ನಿವೇದಿತಾರವರ ಹಿಂದೂಧರ್ಮ ಶ್ರೇ?ತೆಯ ಪ್ರತಿಪಾದನೆಯಿಂದ ಪ್ರಭಾವಗೊಂಡವರು ರವೀಂದ್ರರ ಬಂಧುವೇ ಆಗಿದ್ದ ಮತ್ತು ಅಲ್ಪಕಾಲದಲ್ಲಿ ನಾಡಿ ಅಗ್ರಶ್ರೇಣಿಯ ಕಲಾವಿದರೆನಿಸಿದ ಅಬನೀಂದ್ರನಾಥ ಠಾಕೂರರು.
ಭಾರತೀಯ ಚಿತ್ರಕಲೆ ಮತ್ತು ಶಿಲ್ಪಕಲೆಗಳಿಗೆ ಪ್ರಾಚೀನ ಗ್ರೀಕ್ ಮತ್ತು ರೋಮನ್ ಕಲೆಯೇ ಪ್ರೇರಕವಾಗಿದ್ದಿತು. ಎಂಬ ಭಾವನೆ ಭಾರತದ ಕಲಾವಿದವಲಯಗಳಲ್ಲಿ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಚಲಿತವಾಗಿತ್ತು. ಈ ಕಲ್ಪನೆಗೆ ಆಧಾರವಿಲ್ಲವೆಂಬ ತಥ್ಯವು ಬಹುಮುಖ ಪ್ರತಿಭೆಯ ವಿವೇಕಾನಂದರಿಗೆ ಗೋಚರವಾಗಿತ್ತು. ವಿವೇಕಾನಂದರ ಪರಾಮರ್ಶನೆಯಿಂದ ಪ್ರಭಾವಿತರಾದ ನಿವೇದಿತಾ ಭಾರತೀಯ ಕಲೆಗಳ ಇತಿಹಾಸವನ್ನು ಆಳವಾಗಿ ಅಭ್ಯಾಸ ಮಾಡಿದರು; ಈ ವಿ?ಯ ಕುರಿತು ಹಲವು ಉಪನ್ಯಾಸಗಳನ್ನೂ ನೀಡಿದರು. ಈ ವಿ?ಯ ಕುರಿತ ವಿವೇಕಾನಂದರ ಚಿಂತನೆಯನ್ನು ಮುಂದುವರಿಸಿ ಪ್ರಚಾರ ಮಾಡುವುದು ತಮ್ಮ ಹೊಣೆಗಾರಿಕೆಯೆಂದೇ ನಿವೇದಿತಾ ಭಾವಿಸಿದರು.
ಅಬನೀಂದ್ರನಾಥರು ನಿವೇದಿತಾರವರ ಮೊದಲ ಭೇಟಿಯಿಂದಲೇ ಪುಲಕಗೊಂಡರು. ಶುಭ್ರವಸ್ತ್ರಧಾರಿಣಿ ರುದ್ರಾಕ್ಷಮಾಲೆ ಧರಿಸಿದ್ದ ನಿವೇದಿತಾ ತಮ್ಮ ಕಣ್ಣಿಗೆ ಓರ್ವ ತಪಸ್ವಿನಿಯಾಗಿ ಕಂಡರೆಂದು ಅಬನೀಂದ್ರನಾಥರು ದಾಖಲೆಮಾಡಿದ್ದಾರೆ. ನಿವೇದಿತಾರವರ ಮಾತುಗಳಂತೂ ಭಾರತೀಯ ಕಲಾವಿದಸಮೂಹಕ್ಕೆ ಅದರ ನಿಜ ವಾರಸಿಕೆಯನ್ನು ನೆನಪು ಮಾಡುವ ಋಷಿವಾಣಿಯಂತೆಯೇ ಭಾಸವಾಯಿತು.
ಕ್ರಮೇಣ ಅಬನೀಂದ್ರನಾಥ ಮತ್ತು ಸಂಗಡಿಗರ ಚಿಂತನೆ ಮತ್ತು ಕುಂಚಗಾರಿಕೆಯ ಶೈಲಿಯೇ ಬದಲಾಯಿತು; ವಸ್ತುಗಳ ಆಯ್ಕೆಯಲ್ಲಿಯೂ ನಿರೂಪಣವಿನ್ಯಾಸದಲ್ಲಿಯೂ ಅಪ್ಪಟ ಭಾರತೀಯ ಮೌಲ್ಯಗಳು ಬಿಂಬಿತವಾಗತೊಡಗಿದವು. ಅಲ್ಪಕಾಲದಲ್ಲಿ ಇವರದೇ ಒಂದು ವಿಶಿ? ಪ್ರಸ್ಥಾನವೆನಿಸಿ ’ಬೆಂಗಾಲ್ ಸ್ಕೂಲ್ ಆಫ್ ಆರ್ಟ್’ ಎಂದು ಪ್ರಸಿದ್ಧಿ ಪಡೆಯಿತು.
ಈ ಕಲೆಯ ಸೂಕ್ಷ್ಮ ಆಯಾಮಗಳನ್ನು ಸಾರ್ವಜನಿಕರಿಗೆ ಉಪನ್ಯಾಸಗಳ ಮೂಲಕ ಪರಿಚಯ ಮಾಡಿಸುವ ಕೆಲಸವನ್ನು ನಿವೇದಿತಾ ತಾನಾಗಿ ವಹಿಸಿಕೊಂಡರು. ಭಾರತೀಯ ಚಿತ್ರಕಲೆ-ಶಿಲ್ಪಕಲೆಗಳಲ್ಲಿ ಬಳಕೆಯಾಗುವ ಹತ್ತಾರು ಪ್ರತೀಕಗಳ ಮತ್ತು ಸಂಕೇತಗಳ ಅರ್ಥವ್ಯಾಪ್ತಿಯು ಪಾಶ್ಚಾತ್ಯ ಕಲಾಭಿಜ್ಞರಿಗೂ ನಿವೇದಿತಾರಿಂದ ತಿಳಿಯಿತು.
ಅಬನೀಂದ್ರನಾಥರ ಮತ್ತು ಅವರ ಶಿ?ರಾದ ನಂದಲಾಲ್ ಬೋಸ್ ಮೊದಲಾದವರ ಕಲಾನಿರ್ಮಿತಿಗಳು ಆಧುನಿಕ ಭಾರತದ ಕಲಾಸಾಧನೆಯ ಉತ್ತುಂಗ ನಿದರ್ಶನಗಳೆಂದು ಇಂದಿಗೂ ಖ್ಯಾತವಾಗಿವೆ.
ಪಾಶ್ಚಾತ್ಯ ಕಲಾವಿದೆಯೊಬ್ಬರು ತನ್ನ ದೇಶಕ್ಕಾಗಿ ಸಂಗ್ರಹಿಸಲು ಅಜಂತಾ ಗುಹಾ ಶಿಲ್ಪಗಳಲ್ಲಿನ ಚಿತ್ರಗಳ ಪ್ರತಿಕೃತಿಗಳನ್ನು ರಚಿಸುವುದಕ್ಕಾಗಿ ಬಂದಿದ್ದುದು ತಿಳಿದೊಡನೆ ಅವರಿಗೆ ನೆರವಾಗಲು ನಂದಲಾಲ್ ಬೋಸ್ ಮತ್ತು ಇನ್ನೂ ಒಬ್ಬೊಬ್ಬರನ್ನು ಅವರಲ್ಲಿಗೆ ನಿವೇದಿತಾ ತಮ್ಮದೇ ವೆಚ್ಚದಲ್ಲಿ ಕಳಿಸಿದರು. ಭಾರತೀಯ ಕಲೆಯ ಶ್ರೇಷ್ಠತೆಯು ಸರಿಯಾಗಿ ಪ್ರತಿನಿಧಿತವಾಗಬೇಕೆಂಬ ಅವರ ಶ್ರದ್ಧೆ ಅಷ್ಟು ಗಾಢವಾಗಿದ್ದಿತು.
ಮೌಲಿಕ ಬರಹ
ಅದೇ ದಿನಗಳಲ್ಲಿ ಪ್ರಸಿದ್ಧ ಇತಿಹಾಸಕಾರ ರಮೇಶಚಂದ್ರದತ್ತ ಅವರ ಒಡನಾಟವೂ ನಿವೇದಿತಾರವರಿಗೆ ದೊರೆತದ್ದರ ಒಂದು ಸ್ಮರಣೀಯ ಫಲಿತವೆಂದರೆ ಇಂದಿಗೂ ಮೌಲ್ಯವಂತವೆನಿಸಿರುವ The Web of Indian Life ಶೀರ್ಷಿಕೆಯ ಸುಂದರ ಸಮೀಕ್ಷಾತ್ಮಕ ಗ್ರಂಥವನ್ನು ನಿವೇದಿತಾರವರು ಬರೆದದ್ದು.
ಕ್ಷಾಮಪರಿಹಾರ ಕಾರ್ಯದ ಶ್ರಮದಿಂದಾಗಿ ನಿವೇದಿತಾರ ಆರೋಗ್ಯ ಕುಸಿದಿತ್ತು; ಮಲೇರಿಯಾ ಸೊಂಕೂ ತಗಲಿದ್ದಿತು. ೧೯೦೭ರ ಆರಂಭದಲ್ಲಿ ಆರೈಕೆ ಮತ್ತು ಹವಾ ಬದಲಾವಣೆಗಾಗಿ ನಿವೇದಿತಾರವರಿಗೆ ಕೊಲ್ಕತಾ ಸಮೀಪದ ಡಂಡಂನಲ್ಲಿ ವಾಸ್ತವ್ಯವನ್ನು ಹಿತೈಷಿಯೊಬ್ಬರ ಬಂಗಲೆಯಲ್ಲಿ ಏರ್ಪಡಿಸಲಾಯಿತು.
ಆ ವಿಶ್ರಾಂತಿಯ ಒಂದು ಫಲವೆಂದರೆ ನಿವೇದಿತಾರವರು ಹಿಂದೆಯೇ ಬರೆಯಲು ಆರಂಭಿಸಿದ್ದ ‘The Master As I Saw Him’ ಗ್ರಂಥದ ಬರವಣಿಗೆಯನ್ನು ಪೂರ್ಣಗೊಳಿಸಿದರು. ಸ್ವಾಮಿಜೀಯವರ ಒಡನಾಟದ ಮತ್ತು ಚಿಂತನೆಗಳ ವಿರಳ ಮಾಹಿತಿಗಳನ್ನೂ ಒಳನೋಟಗಳನ್ನೂ ಒಳಗೊಂಡ ಆ ಗ್ರಂಥವು ಈಗಲೂ ಸ್ವಾಮಿಜೀಯವರನ್ನು ಕುರಿತ ಅಪೂರ್ವ ಗ್ರಂಥಗಳಲ್ಲಿ ಒಂದೆನಿಸಿದೆ.
ಏತನ್ಮಧ್ಯೆ ಹಿಂದೂಗಳಿಗೂ ಮುಸ್ಲಿಮರಿಗೂ ನಡುವೆ ಬಿರುಕನ್ನು ಹೆಚ್ಚಿಸುವ ಬ್ರಿಟಿಷ್ ಸರ್ಕಾರದ ಬಗೆಬಗೆಯ ತಂತ್ರಗಳು ಮುಂದುವರಿದಿದ್ದವು. ಆಗ ಎಂದರೆ ೧೯೦೭ರ ದಿನಗಳಲ್ಲಿ ಅಂಕುರರೂಪದಲ್ಲಿದ್ದ ಮುಸ್ಲಿಂ ತುಷ್ಟೀಕರಣ ಯೋಜನೆಗಳು ದಿನಗಳು ಕಳೆದಂತೆ ಅಳತೆಮೀರಿ ಬೆಳೆಯುವ ಸಂಭವವನು ಆಗಲೇ ಗುರುತಿಸಿ ಅರವಿಂದರು ಹಿಂದೂ ಸಮಾಜವನ್ನು ನಿರಂತರ ಎಚ್ಚರಿಸುತ್ತಿದ್ದರು.
ಅದೇ ದಿನಗಳಲ್ಲಿ ಸ್ವಾಮಿಸ್ವರೂಪಾನಂದ, ಸ್ವಾಮಿ ವಿರಜಾನಂದ ಮೊದಲಾದವರ ತಂಡದ ಶ್ರಮದ ಫಲಿತವಾಗಿ ಸ್ವಾಮಿಜೀ ಸಮಗ್ರ ಗ್ರಂಥಶ್ರೇಣಿ ಪ್ರಕಾಶನಗೊಂಡದ್ದು ಒಂದು ಮೈಲಿಗಲ್ಲು ಎನ್ನಬಹುದು. ಆ ಮೊದಲ ಆವೃತ್ತಿಗೆ ನಿವೇದಿತಾರವರು ಬರೆದ ಮುನ್ನುಡಿ ಮಾರ್ಮಿಕವಾಗಿತ್ತು. ಅದರಲ್ಲಿ ಅವರು ಹೀಗೆಂದಿದ್ದರು:
“ಹಿಂದುತ್ವದ ಸಂಬಂಧದ ಸರ್ವಾಂಗೀಣ ವಿಚಾರಸಂಹಿತೆ ಮೊದಲಬಾರಿಗೆ ಇಲ್ಲಿ ಸಂಗ್ರಹಗೊಂಡಿದೆ. ಭವಿಷ್ಯತ್ ಕಾಲದಲ್ಲಿ ಮಕ್ಕಳಿಗೂ ಜಿಜ್ಞಾಸುಗಳಿಗೂ ಹಿಂದೂಧರ್ಮದ ಸ್ಫಟಿಕೋಪಮ ರೂಪವನ್ನು ತಿಳಿಸಿಕೊಡಲು ಬೇಕಾಗುವ ಆಕರಗ್ರಂಥ ಇದಾಗಿದೆ. ವೇದಯುಗದಿಂದ ಸಾಂಪ್ರತಕಾಲದವರೆಗಿನ ದೀರ್ಘಕಾಲ ತನ್ನ ಮೇಲ್ಮೈಯನ್ನು ಉಳಿಸಿಕೊಂಡಿರುವ ಧರ್ಮದ ನಿರ್ಭೀತವೂ ಯುಗಾನುಕೂಲಿಯೂ ಆದ ಪ್ರತಿಪಾದನೆಯ ಆವಶ್ಯಕತೆ ಇದ್ದಿತು. ಇದನ್ನು ಸ್ವಾಮಿಜೀಯವರ ಉಪನ್ಯಾಸಗಳು ಲಭ್ಯವಾಗಿಸಿವೆ. ರಾಷ್ಟ್ರಪ್ರೇಮ, ಗುರುಪ್ರೇಮ, ಮಾತೃಭೂಮಿ ಪ್ರೇಮ – ಈ ಮೂರು ಜ್ಯೋತಿಗಳನ್ನು ಒಳಗೊಂಡ ದೀಪವೊಂದು ೧೮೯೩ ಸೆಪ್ಟೆಂಬರ್ ೧೯ರಿಂದ ೧೯೦೨ ಜುಲೈ ೪ರ ವರೆಗಿನ? ಕಡಮೆ ಅವಧಿಯಲ್ಲಿ ವಿವೇಕಾನಂದರ ರೂಪದಲ್ಲಿ ಬೆಳಗಿತು. ಅದು ಭಾರತಕ್ಕೂ ಇಡೀ ವಿಶ್ವಕ್ಕೂ ಮಾರ್ಗದರ್ಶಕವಾಗಿರಲಿ.”
ಸ್ವಾತಂತ್ರ್ಯಾಂದೋಲನಕ್ಕೆ ಚೇತರಿಕೆಯನ್ನು ತರುವುದರಲ್ಲಿ ನಿವೇದಿತಾರವರು ಎಷ್ಟು ಬಗೆಯಾಗಿ ಶ್ರಮಿಸಿದರೆಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ. ಕೆಲವೇ ವರ್ಷಗಳಲ್ಲಿ ನಿವೇದಿತಾ ಮಾಡಿದ ಸಾಧನೆಗಳು ಗಾತ್ರದಲ್ಲಿ, ಗುಣದಲ್ಲಿ – ಎರಡೂ ಆಯಾಮಗಳಲ್ಲಿ ಇತಿಹಾಸಾರ್ಹವೆನಿಸುತ್ತದೆ.
ಅರವಿಂದರು ತಾವು ಮನಸ್ಸಿನ ಅಂತರಾಳದಲ್ಲಿ ನಿರ್ಣಯಿಸಿಕೊಂಡಿದ್ದಂತೆ ಬಡೌದೆಯನ್ನು ತ್ಯಜಿಸಿ ಬಂಗಾಳಕ್ಕೆ ಹಿಂದಿರುಗಿ ಸ್ವಾತಂತ್ರ್ಯಪರ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯಗೊಳ್ಳುವ ನಿರ್ಧಾರಕ್ಕೆ ತೀವ್ರತೆಯನ್ನು ತಂದಿತ್ತವರು ನಿವೇದಿತಾ.
ಅರವಿಂದರನ್ನು ಸದಾ ಹೆಚ್ಚು ಸಕ್ರಿಯಗೊಳಿಸಲು ಪ್ರಯತ್ನಶೀಲರಾಗಿದ್ದವರು ನಿವೇದಿತಾ. ಆ ಹಿನ್ನೆಲೆಯಲ್ಲಿ ಅರವಿಂದರು ಬಂದ ಅತ್ಯಲ್ಪ ಕಾಲದಲ್ಲಿಯೇ ಸಮೂಲ ರಾಷ್ಟ್ರೀಯತೆಯ ವ್ಯಾಖ್ಯಾನ, ಪ್ರಖರ ಬರಹ, ಭೂಗತ ಕಾರ್ಯಕರ್ತರ ಸಂಘಟನೆ, ಪತ್ರಿಕಾಪ್ರಕಟಣೆ – ಹೀಗೆ ಎಲ್ಲ ದಿಕ್ಕುಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡದ್ದು ನಿವೇದಿತಾರವರಲ್ಲಿ ರೋಮಾಂಚನ ಉಂಟುಮಾಡಿತು. ಅರವಿಂದರು ಪ್ರವರ್ತಿಸಿದ ಅಧ್ಯಾತ್ಮಾಧಿಷ್ಠಿತ ರಾಷ್ಟ್ರೀಯತೆ ಮತ್ತು ಪೂರ್ಣಸ್ವರಾಜ್ಯ ಸೂತ್ರಿಕರಣಗಳಂತೂ ವಿವೇಕಾನಂದರ ಬೋಧೆಗಳ ತಾತ್ಮಿಕ ಮುಂದುವರಿಕೆಯೆಂದೇ ಎನಿಸಿದೆ.
ಶಿವಾಜಿ ಉತ್ಸವ
೧೯೦೬ರ ಜೂನ್ ೪ರಂದು ಕೋಲ್ಕತಾದ ಪುರಭವನದಲ್ಲಿ ನಡೆದ ಅಭೂತಪೂರ್ವ ಶಿವಾಜಿ ಉತ್ಸವ ಅತ್ಯಂತ ಸಂಭ್ರಮದಿಂದ ನಡೆಯುವಂತೆ ತಮ್ಮ ತರುಣ ಅನುಯಾಯಿಗಳ ಮೂಲಕ ಶ್ರಮಿಸಿದವರು ನಿವೇದಿತಾ. ಆ ಸಂದರ್ಭಕ್ಕೆಂದೆ ವಿಶೇ?ವಾದ ಕವಿತೆಯೊಂದನ್ನು ರಚಿಸುವಂತೆ ರವೀಂದ್ರನಾಥ ಠಾಕೂರರನ್ನು ಪ್ರೇರಿಸಿದವರೂ ನಿವೇದಿತಾರವರೇ. ನಿವೇದಿತಾ ಅನುಯಾಯಿ ತಂಡದವರು ಆ ಉತ್ಸವ ಸಂದರ್ಭದಲ್ಲಿ ಒಂದು ಸ್ಮರಣೀಯ ಸ್ವದೇಶೀ ಪ್ರದರ್ಶನವನ್ನು ಏರ್ಪಡಿಸಿದ್ದರು.
ಶಿವಾಜಿ ಉತ್ಸವಾಚರಣೆಯೇ ಆ ದಿನಗಳಲ್ಲಿ ವಿಶೇಷವೆನಿಸುತ್ತಿತ್ತು. ಅದನ್ನು ಒಂದು ರಾಷ್ಟ್ರೀಯ ಉತ್ಸವವನ್ನಾಗಿ ಪ್ರಚಲಿತಗೊಳಿಸಿದ್ದವರೇ ಲೋಕಮಾನ್ಯ ತಿಲಕರು. ಬ್ರಿಟಿಷರ ’ಒಡೆದು ಆಳುವ’ ಪ್ರವೃತ್ತಿಗೆ ಸವಾಲಾಗಿ ಕಲ್ಪಿತವಾಗಿದ್ದುದು ಅದು. ಅಲ್ಪಕಾಲದಲ್ಲಿ ಅದು ಪಶ್ಚಿಮಭಾರತದಲ್ಲಿ ಅಭೂಪೂರ್ವ ಬಂಗಾಳದಲ್ಲಿ ನಡೆಸುವ ಲೋಕಮಾನ್ಯ ತಿಲಕರ ಮನಸ್ಸಿನಲ್ಲಿ ಶಿವಾಜಿಯನ್ನು ಓರ್ವ ರಾಷ್ಟ್ರಪುರುಷನಾಗಿ ಬಿಂಬಿಸುವ ಯೋಚನೆಯಷ್ಟೆ ಬ್ರಿಟಿಷರ ವಿಭಜಕ ಧೋರಣೆಗೆ ವಿರುದ್ಧವಾಗಿ ರಾಷ್ಟ್ರದ ಏಕತೆಯನ್ನು ಎತ್ತಿಹಿಡಿಯುವ ಸಂಕಲ್ಪವೂ ಪ್ರಯೋಜನವಾಗಿದ್ದಿತು.
ಆ ಉತ್ಸವವನ್ನು ಯಶಸ್ವಿಗೊಳಿಸಲು ನಿವೇದಿತಾ ಅತ್ಯುತ್ಸಾಹದಿಂದ ಶ್ರಮಿಸಿದುದು ಸ್ವಾಭಾವಿಕ.
ಲೋಕಮಾನ್ಯ ತಿಲಕರು, ಸುರೆಂದ್ರನಾಥ ಬ್ಯಾನರ್ಜಿ, ಬಿಪಿನ್ ಚಂದ್ರಪಾಲ್, ರವೀಂದ್ರನಾಥ ಠಾಕೂರರು – ಈ ಎಲ್ಲ ಅಪ್ರತಿಮ ನಾಯಕರೂ ಒಂದು ವೇದಿಕೆಯಲ್ಲಿ ಸಮಾವೇಶಗೊಂಡಿದ್ದರೆಂದರೆ ಇನ್ನು ಅಲ್ಲಿ ಹೊಮ್ಮಿದ್ದ ಸಂಭ್ರಮೋತ್ಸಾಹವನ್ನು ಮಾತುಗಳಿಂದ ವರ್ಣಿಸಲಾದೀತೇ?
ತಿಲಕರ ಅಂತರಂಗದ ಭಾವನೆಯನ್ನೇ ಠಾಕೂರರು ತಾವೇ ಹಾಡಿದ ತಮ್ಮ ಕವಿತೆಯಲ್ಲಿ ನಿವೇಶಗೊಳಿಸಿದ್ದರು, ಹೀಗೆ:
ಮರಾಠಿರ ಸಾಥೇ ಆಜಿ ಹೇ ಬಂಗಾಲೀ
ಏಕಸಂಘೇ ಚಲೋ ಮಹೋತ್ಸವೇ ಸಾಜೀ
ಸಮಾವೇಶಕ್ಕೆ ತಿಲಕರನ್ನು ಸ್ವಾಗತಿಸಿದವರು ಸ್ವಯಂ ನಿವೇದಿತಾರವರೇ.
ವೇದಿಕೆಗೆ ಅಲಂಕರಣವಾಗಿ, ಶಿವಛತ್ರಪತಿಯು ಸಮರ್ಥ ರಾಮದಾಸರ ಸನ್ನಿಧಿಯಲ್ಲಿ ದೇವಿ ಭವಾನಿಗೆ ವಂದಿಸುತ್ತಿರುವುದರ ಆಳೆತ್ತರದ ಭವ್ಯ ಮೂರ್ತಿ ಇದ್ದಿತು. ಉತ್ಸವಾನಂತರ ರಾಜಬೀದಿಗಳಲ್ಲಿ ಅದರ ಭವ್ಯ ಮೆರವಣಿಗೆಯೂ ನಡೆಯಿತು.
(ಸಶೇಷ)