ಚುನಾವಣೆ ಸಮೀಪಿಸಿದಂತೆ ದೇಶದ ವಾತಾವರಣ ಕಾವೇರತೊಡಗಿದೆ. ಯಾರು ಸೇರಿದರು, ಯಾರು ಬೇರೆಯಾದರು ಮೊದಲಾದ ದಿನದಿಂದ ದಿನಕ್ಕೆ ಬದಲಾಗುವ ಆಗು-ಹೋಗುಗಳು ಸುದ್ದಿಯಾಗುತ್ತಿರುತ್ತವೆ. (’ಆಗು’ವುದಕ್ಕಿಂತ ’ಹೋಗು’ವವೇ ಹೆಚ್ಚು.) ದೇಶದ ಆರ್ಥಿಕತೆ ಉನ್ಮುಖವಾಗಿರುವುದನ್ನಂತೂ ಯಾರೂ ಅಲ್ಲಗಳೆಯಲಾರರು. ಆದರೆ ಆರ್ಥಿಕ ಪ್ರಗತಿಯಾದಂತೆಲ್ಲ ಸಾಮಾಜಿಕ ಸಂಘ?ಗಳು ಮರೆಯಾಗುತ್ತವೆಂಬ ನಿರೀಕ್ಷೆ ಈಡೇರಿಲ್ಲ. ಅವೆಲ್ಲ ಭಾವನಾಲೋಕಕ್ಕೆ ಸೇರಿದವೆಂದಿಟ್ಟುಕೊಳ್ಳೋಣ. ಆದರೆ ದೈನಂದಿನ ಬದುಕಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಗ್ಗಂಟಾಗಿಯೇ ಉಳಿದಿರುವುದು ಏಕೆಂಬುದು ಯಕ್ಷಪ್ರಶ್ನೆ. ತಜ್ಞರಿಗೆ ಕೊರತೆಯಿಲ್ಲ, ಯೋಜನೆಗಳಿಗೆ ಕೊರತೆಯಿಲ್ಲ, ಆದರೆ ಸಮಸ್ಯೆಗಳು ನೀಗುವ ಲಕ್ಷಣಗಳಿಲ್ಲ. ಎಲ್ಲ ಸಮಾಜವರ್ಗಗಳಿಗೂ ಸಂಬಂಧಿಸಿದ ರೈತ ಸಮಸ್ಯೆ ಇವುಗಳಲ್ಲಿ ಪ್ರಮುಖವಾದ್ದೆಂಬುದು ನಿಸ್ಸಂಶಯ. ಭೂ-ಸುಧಾರಣೆ – ಹಸಿರುಕ್ರಾಂತಿಯಿಂದ ಸಾಲಮನ್ನಾವರೆಗೆ ಬಗೆಬಗೆಯ ಸಾಹಸಗಳು ಆಗಿವೆ; ಆದರೆ ಸಮಸ್ಯೆ ಮುಂದುವರಿದಿದೆಯೆಂಬುದಕ್ಕೆ ಇತ್ತೀಚಿನ ಪುರಾವೆ ಕಳೆದ ನವೆಂಬರ್ ಅಂತ್ಯದಲ್ಲಿ ದೆಹಲಿಯಲ್ಲಿ ನಡೆದ ರೈತರ ಬೃಹತ್ ಪ್ರದರ್ಶನ. ತಮ್ಮ ಸಮಸ್ಯೆಗಳಿಗೆ ದೃಢಪರಿಹಾರ ಕೋರಿದ ಇಂತಹ ಪ್ರದರ್ಶನಗಳು ಹಿಂದೆಯೂ ನಡೆದಿವೆ. ಸ್ವಲ್ಪ ಸಮಯ ಮುಂಚೆಯ? ಮಹಾರಾ?ದಲ್ಲಿ ನಾಶಿಕದಿಂದ ಮುಂಬಯಿವರೆಗೆ ರೈತರ ಪಾದಯಾತ್ರೆ ನಡೆದಿತ್ತು. ನಾಡಿನ ಅನ್ನದಾತರಾದ ರೈತರು ಹೀಗೆ ಬೀದಿಗೆ ಇಳಿಯಬೇಕಾಗಿ ಬಂದಿದೆಯೆಂಬುದೇ ಚಿಂತೆ ತರಬೇಕಾದ ವಿ?ಯ.
ರೈತರು ಹಿಂಸಾಚರಣೆಯಲ್ಲಿ ತೊಡಗುವ ಸ್ವಭಾವದವರಲ್ಲ. ಬೇರೆಬೇರೆ ಪ್ರಾಂತಗಳಲ್ಲಿ ರೈತರದು ಬೇರೆಬೇರೆ ಸಮಸ್ಯೆಗಳಿವೆ. ಹೀಗಾಗಿ ಅನ್ಯವರ್ಗಗಳಂತೆ ರೈತರದು ರಾ?ಮಟ್ಟದ ಪ್ರಬಲ ಸಂಘಟನೆ ಏರ್ಪಟ್ಟಿಲ್ಲ. ಆ ದಿಶೆಯಲ್ಲಿ ಪ್ರಯತ್ನಕ್ಕೆ ತೊಡಗಿದ ಆಚಾರ್ಯ ಎನ್.ಜಿ. ರಂಗಾ, ಚೌಧರಿ ಚರಣ್ಸಿಂಗ್ ಮೊದಲಾದವರು ಕ್ರಮೇಣ ಪಕ್ಷರಾಜಕೀಯ ಕ್ಷೇತ್ರಕ್ಕೆ ಹೊರಳಿದರು. ಅಲ್ಲಿಂದೀಚೆಗೆ ಉತ್ತರಪ್ರದೇಶದಲ್ಲಿ ಮಹೇಂದ್ರಸಿಂಗ್ ತಿಕಾಯತ್, ಮಹಾರಾ?ದಲ್ಲಿ ಶರದ್ ಜೋಶಿ ಮೊದಲಾದವರು ಆರಂಭಿಸಿದ ಸಂಘಟನಪ್ರಯತ್ನಗಳೂ ಕೆಲಕಾಲಾನಂತರ ಹಿಂಬದಿಗೆ ಸರಿದವು. ಉದ್ಯಮ ಕಾರ್ಮಿಕರಂತೆಯೊ ಬ್ಯಾಂಕ್ ನೌಕರರಂತೆಯೊ ಪದೇಪದೇ ಸಮಯ ಹಾಳುಮಾಡಿಕೊಂಡು ಆಗಾಗ ಮು?ರ ನಡೆಸುವ ಕ್ಷಮತೆಯಾದರೂ ರೈತರಲ್ಲಿ ಎಲ್ಲಿದೆ? ಅಧಿಕ ಸಂಖ್ಯೆಯ ಸಣ್ಣ ರೈತರ ಹಿಡುವಳಿ ಮೂರು ಎಕರೆಗೂ ಕಡಮೆ.
ಏತನ್ಮಧ್ಯೆ ಸಾಮಾಜಿಕ ಪರಿಸ್ಥಿತಿಯೂ ಬದಲಾಗಿ ಒಂದ? ಶಿಕ್ಷಣ ಪಡೆದ ರೈತ ತರುಣರು ನಗರಗಳಿಗೆ ವಲಸೆಹೋಗತೊಡಗಿದರು; ಕೃಷಿಕ್ಷೇತ್ರ ಇನ್ನ? ಸೊರಗಿತು.
ರೈತರ ಸಮಸ್ಯೆಗಳು ಗಂಭೀರಸ್ವರೂಪದವು; ಅವರ ನಿತ್ಯದ ಬದುಕಿಗೆ ನೇರ ಸಂಬಂಧಿಸಿದವು. ಕ?ಪಟ್ಟು ಬೆಳೆದುದಕ್ಕೆ ಸರಿಯಾದ ಧಾರಣೆ ದೊರಕದು; ಉತ್ಪಾದನೆಯ ವೆಚ್ಚ ದಿನೇದಿನೇ ಏರುತ್ತ ಸಾಗಿದೆ. ಹೀಗಿದ್ದೂ ಅಲ್ಪಬೆಲೆಗೂ ಕೊಳ್ಳುವವರಿಲ್ಲದೆ ತಂದ ಟೊಮೆಟೊವನ್ನು ಬೀದಿಯಲ್ಲಿ ಸುರಿದು ವಾಪಸಾಗುವುದೂ ಕಬ್ಬನ್ನು ಮಿಲ್ ಕೊಳ್ಳದ ಕಾರಣ ಬೆಳೆಗೇ ಬೆಂಕಿ ಕೊಡುವುದೂ ವಿರಳವಲ್ಲ. ಇದುವರೆಗೆ ಜಾರಿಯಾದ ’ಸಾಲಮನ್ನಾ’ಗಳ ಪ್ರಯೋಜನ ವಾಸ್ತವವಾಗಿ ಯಾರಿಗೆ ಎ? ಮಾತ್ರ ತಾಗಿದೆಯೆಂದು ಲೆಕ್ಕ ಮಾಡಿದವರಿಲ್ಲ. ಬರ-ನೆರೆಗಳಿಗಂತೂ ಕೊನೆಮೊದಲಿಲ್ಲ. ತಮ್ಮ ಸಮಸ್ಯೆಗಳು ಒಂದ? ಮಟ್ಟಿಗಾದರೂ ಪರಿಹಾರವಾದಾವೆಂಬ ಭರವಸೆಯನ್ನೇ ರೈತರು ಕಳೆದುಕೊಳ್ಳುವಂತಾಗಿದೆ. ಹೀಗಾಗಿಯೇ ಈಗ್ಗೆ
ಮೂರು ದಶಕಗಳ ಹಿಂದೆ ಕೇಳರಿಯದಿದ್ದ ಆತ್ಮಹತ್ಯೆಯ ಪ್ರಕರಣಗಳು ಈಗ ಸುದ್ದಿಯೇ ಅಲ್ಲವೆಂಬ? ಮಾಮೂಲೆನಿಸಿಬಿಟ್ಟಿವೆ.
ರೈತರಾದರೋ ತಮ್ಮ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಹಿಂದೆಬಿದ್ದಿಲ್ಲ. ಮಿಶ್ರತಳಿಗಳ ಅಳವಡಿಕೆ, ಸಾವಯವ ಕೃಷಿತಂತ್ರ ಪ್ರಯೋಗಗಳು – ಎಲ್ಲವನ್ನೂ ಸಾಧಿಸಿದ್ದಾರೆ. ಬೇಳೆಕಾಳುಗಳು, ತರಕಾರಿ, ಹಣ್ಣುಹಂಪಲು ಬೆಳೆಗಳ ಪ್ರಮಾಣವೂ ಗುಣಮಟ್ಟವೂ ಹೆಚ್ಚಿವೆ. ಆದರೆ ಯುಕ್ತ ಬೆಲೆ ರೈತರ ಕೈಹತ್ತುತ್ತಿಲ್ಲ. ಈ ಬೆಳೆಗಳ ಜೀವಿತಾವಧಿಯೇ ಪರಿಮಿತ. ಹೀಗಾಗಿ ನ? ತಪ್ಪಿದ್ದಲ್ಲ. ರೈತರಿಗೆ ವಿಮೆಯ ಸೌಕರ್ಯಗಳಿಲ್ಲ.
ಈಗಿನ ಸನ್ನಿವೇಶದಲ್ಲಿ ರೈತರಿಗೆ ಉತ್ಪಾದನ ವೆಚ್ಚದ ಅರ್ಧದ? ಪ್ರಮಾಣದ g ಣ z ಆವಶ್ಯಕತೆ ಇದೆ ಎಂದು ಕಳೆದ ಏಳೆಂಟು ವ?ಗಳಿಂದ v ಜ g ದಿ U ಸೂಚಿಸಿವೆ. ಅನ್ಯಕ್ಷೇತ್ರಗಳಿಗೆ ಸಬ್ಸಿಡಿ ನೀಡುವಲ್ಲಿ ಕಾಣುವ ಉತ್ಸಾಹ ರೈತರಿಗೆ ನೀಡುವಲ್ಲಿ ತೋರುತ್ತಿಲ್ಲ. ಸರ್ಕಾರ ಈಗ ನೀಡುತ್ತಿರುವ ನೆರವುಹಣದ ಸಿಂಹಪಾಲು ಅಕ್ಕಿ- ಗೋದಿಗಳಿಗೇ ಸಂದಾಯವಾಗುತ್ತಿದೆ. ಬಿತ್ತನೆಬೀಜ ಖರೀದಿಯಿಂದ ಬೆಳೆಯ ಮಾರಾಟದ ವರೆಗೆ ಪ್ರತಿ ಹಂತದಲ್ಲಿಯೂ ರೈತರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಮಧ್ಯಸ್ಥಗಾರರಿಂದ ಈ ಸ್ಥಿತಿಯಲ್ಲಿ ಶೋ?ಣೆಗೆ ಅವಕಾಶ ಹೇಳಿಮಾಡಿಸಿದಂತೆ ಇದೆ.
ಎಲ್ಲ ಸರ್ಕಾರಗಳ ಆದ್ಯತೆಯೂ ಉದ್ಯಮಕ್ಷೇತ್ರದತ್ತಲೂ ನಗರವಾಸಿಗಳತ್ತಲೂ ನೆಟ್ಟಿರುತ್ತದೆ. ಯು.ಪಿ.ಎ. ಅಧಿಕಾರಾವಧಿಯಲ್ಲಿ ಔದ್ಯಮಿಕ ಕ್ಷೇತ್ರ ರೂ. ಮೂರು ಲಕ್ಷ ಕೋಟಿ ಹೆಚ್ಚಳವನ್ನು ತನ್ನದಾಗಿಸಿಕೊಂಡಿತ್ತು. ಆದರೆ ಅದೇಕೋ ರೈತರ ಬವಣೆಗಳು ನೀಗುತ್ತಿಲ್ಲ.
ಎನ್.ಡಿ.ಎ. ಸರ್ಕಾರವು ರೈತರ ಬಿತ್ತನೆಬೀಜದ ಮತ್ತು ಗೊಬ್ಬರದ ಲಭ್ಯತೆಯನ್ನು ಸುಗಮಗೊಳಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಭೂಗುಣಪರೀಕ್ಷಣೆಯ ಉಚಿತಸೇವೆ, ಸಹಕಾರಿ ವ್ಯವಸ್ಥೆಗಳಿಗೆ ಪ್ರೋತ್ಸಾಹನ, ’ಇನಾಮ್’ ಮಾರುಕಟ್ಟೆ ವಿನ್ಯಾಸ ಮೊದಲಾದ ಇತ್ತೀಚಿನ ಕ್ರಮಗಳು ರೈತರ ಸ್ಥಿತಿಗತಿಗಳ ಮೇಲೆ ಸತ್ಪರಿಣಾಮ ಬೀರುವ ಸೂಚನೆಗಳು ಕಂಡಿವೆ. ಇನ್ನೂ ದೃಢತರ ಪ್ರಯತ್ನಗಳ ಆವಶ್ಯಕತೆಯೂ ಇದೆ.