ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಡಿಸೆಂಬರ್ 2020 > ‘ಅಲೆ’ಯಲ್ಲವೀ ನಡೆಯು ವಿಧಿಯ ಸೆಳೆಯು

‘ಅಲೆ’ಯಲ್ಲವೀ ನಡೆಯು ವಿಧಿಯ ಸೆಳೆಯು

ಸಂಪಾದಕೀಯ   

ಸದಾ ಚಲನಶೀಲವಾಗಿರುವ ರಾಜಕಾರಣದಲ್ಲಿ ಇದು ಅಂತಿಮ ಸಮರ, ಇದು ಭವಿಷ್ಯವನ್ನು ನಿರ್ಧರಿಸುವ ಘಳಿಗೆ – ಎಂಬಂತಹ ಘೋಷಣೆಗಳನ್ನು ಜನ ಅದೆಷ್ಟು ಸಲ ಕೇಳಿದ್ದಾರೆಂದರೆ ಈಗ ಅವು ಹಾಸ್ಯಾಸ್ಪದವೆಂದೇ ಎನಿಸುವ ಸ್ಥಿತಿಯುಂಟಾಗಿದೆ.  ಅಮೆರಿಕದ ಚುನಾವಣೆಗಿಂತ ಮಹತ್ತ್ವದ್ದೆಂಬಂತೆ ಬಿಹಾರ ಚುನಾವಣೆಯ ಭವಿತವ್ಯ ಕುರಿತು ದಿನಗಳಗಟ್ಟಲೆ ವಿಶ್ಲೇಷಣೆಗಳು ನಡೆದದ್ದೂ ನಡೆದದ್ದೆ! ಫಲಿತಾಂಶಘೋಷಣೆಯ ಹಿಂದಿನ ದಿನವೂ ‘ಈ ಚುನಾವಣೆಯಿಂದ ಎನ್.ಡಿ.ಎ. ಹಿನ್ನಡೆ ಆರಂಭವಾಗುತ್ತದೆ’, ‘ಮಹಾಮೈತ್ರಿಕೂಟದ ಸಾರಥಿ ತೇಜಸ್ವಿ ಯಾದವ್ ಬಹುಮತ ಗಳಿಸಲಿದ್ದಾರೆ’ ವಗೈರೆ ಭವಿಷ್ಯವಾಣಿಗಳು ಮತದಾನೋತ್ತರ ಸಮೀಕ್ಷೆಗಳವರೆಗೆ ಮೆರೆದವು. ಬಿಹಾರದಲ್ಲಿ ಮಾತ್ರವಲ್ಲದೆ ಉಪಚುನಾವಣೆಗಳು ನಡೆದ ಅನ್ಯ ಉತ್ತರ ರಾಜ್ಯಗಳಲ್ಲಿಯೂ ಭಾಜಪ ದಾಪುಗಾಲಿಟ್ಟಿತು. ಕರ್ನಾಟಕದ ವಿಧಾನಸಭೆಯ ಚುನಾವಣೆಯಲ್ಲಂತೂ ಬಯಲಾಟ ‘ಅಬ್ಸರ್ಡ್ ಪ್ಲೇ’ಗಳನ್ನೂ ಹಿಂದಿಕ್ಕಿತು: ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಡಿ ತುಂಬಿಸಿಕೊಂಡರೆ, ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೊನ್ನಾದೇವಿಯ ಬಲಗಡೆಯಿಂದ ಹೂ ಬಿದ್ದಿದೆಯೆಂದು ವಿಡಿಯೋ ಪ್ರಚಾರಕ್ಕೂ ಇಳಿದರು. ಹಿಂದೆಯೆಲ್ಲ ಶಿರಾ ತನ್ನ ಭದ್ರಕೋಟೆಯೆಂದು ಕಾಂಗ್ರೆಸ್ ವಿಶ್ವಾಸದಿಂದಿರುತ್ತಿತ್ತು. ಅಭ್ಯರ್ಥಿಗಳ ಮತ್ತು ಪಕ್ಷವರಿಷ್ಠರ ಭ್ರಮನಿರಸನಕ್ಕೆ ಕೆಲವೇ ಗಂಟೆಗಳು ಸಾಕಾದವು. ಸೋಲಿನ ಹೊರೆ ನಾನು ಹೊರುತ್ತೇನೆ ಎಂದರು ಕಾಂಗ್ರೆಸ್ ಅಧ್ಯಕ್ಷರು. ಆ ಶ್ರಮವೂ ಅವರಿಗೇಕೆಂದು ಜನರೇ ತಾವಾಗಿ ಅದನ್ನು ಅವರ ಹೆಗಲಿಗೇರಿಸಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲೂ ಭಾಜಪದ್ದೇ ಮೇಲುಗೈಯಾಯಿತು. ಪದವೀಧರ ಕ್ಷೇತ್ರವೂ ಭಾಜಪದ ತೆಕ್ಕೆಗೆ ಸೇರಿತು. ಅಲ್ಲಿಂದೀಚಿನ ಪುರಸಭೆ, ಪಟ್ಟಣ ಪಂಚಾಯಿತಿಗಳ ಬಹುತೇಕ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳೂ ಭಾಜಪಾ ಕೈವಶವಾಗಿವೆ. 97 ಅಧ್ಯಕ್ಷ ಸ್ಥಾನಗಳಲ್ಲಿ ಭಾಜಪಾ ಪ್ರಾಥಮ್ಯ ಪಡೆದಿದ್ದರೆ, 26 ಕಡೆಗಳಲ್ಲಿ ಪಾಲುದಾರ ಪಕ್ಷವಾಗಿದೆ. ವಿರೋಧಪಕ್ಷಗಳ ಅಬ್ಬರ ಹಾಗೂ ಹಲವು ಮಾಧ್ಯಮಗಳ ಮತ್ತು ಸಮೀಕ್ಷಕರ ಲೆಕ್ಕಾಚಾರಗಳಿಗೂ ನೆಲಮಟ್ಟದ ವಸ್ತುಸ್ಥಿತಿಗೂ ನಡುವಣ ಕಂದರ ಎಷ್ಟು ಅಗಲ-ಆಳದ್ದೆಂದೂ ಗಮನಿಸಬಹುದು. ಇದನ್ನು ಅಲೆ ಎನ್ನಬೇಕೆ, ಮಹಾಪೂರ ಎನ್ನಬೇಕೆ?

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ