
ಸಾಮಾಜಿಕ ಕಾರ್ಯಗಳಿಗೆ ಮಹತ್ತ್ವ ನೀಡಿದ ರಾಮಾನುಜಾಚಾರ್ಯರು ಕೆರೆನಿರ್ಮಾಣದಂತಹ ಜನೋಪಯೋಗಿ ಕೆಲಸಗಳನ್ನೂ ಮಾಡಿದ್ದಾರೆ. ಮೇಲುಕೋಟೆ ಸಮೀಪದ ತೊಂಡನೂರಿನ ಕೆರೆ ಅದಕ್ಕೊಂದು ಉದಾಹರಣೆ. ಸಮಾಜವಿರಲಿ ಅಥವಾ ಜನಜೀವನವಿರಲಿ, ನಿಂತ ನೀರಾಗುವುದು ಸಾಧ್ಯವಿಲ್ಲ. ಸದಾ ಹರಿವು ಅಥವಾ ಚಲನೆ ಅದರ ಲಕ್ಷಣ. ಈ ಹರಿವು ಅಥವಾ ಚಲನೆ ಬದಲಾವಣೆ-ಪರಿವರ್ತನೆಗಳ ಇನ್ನೊಂದು ರೂಪವಾಗಿರುತ್ತದೆ. ಸಹಸ್ರಮಾನಗಳ ಇತಿಹಾಸವಿರುವ ಭಾರತದ ಸಂಸ್ಕೃತಿ-ನಾಗರಿಕತೆಗಳನ್ನು ಗಮನಿಸಿದರೆ ಜನರ ಧಾರ್ಮಿಕ ನಂಬಿಕೆ-ಆಚರಣೆಗಳಲ್ಲಿ ಆಗಿಂದಾಗ ಸಾಕ? ಬದಲಾವಣೆಗಳು ಆದುದನ್ನು ಗುರುತಿಸಲಾಗಿದೆ. ಜಗತ್ತಿನ ಅತ್ಯಂತ ಪ್ರಾಚೀನ ಸಾಹಿತ್ಯವೆಂದು ಪರಿಗಣಿಸಲ್ಪಟ್ಟಿರುವ ಋಗ್ವೇದದಲ್ಲಿರುವ ದೇವತೆಗಳಿಗೂ ಇಂದು […]