ಇಪ್ಪತ್ತನೇ ಶತಮಾನದ ಮೊದಲ ದಶಕದಲ್ಲಿ ಪ್ರಖರ ರಾಷ್ಟ್ರೀಯತಾಭಾವನೆಯ ಪ್ರತಿಪಾದನೆಗೂ ಹಿಂದೂಧರ್ಮದ ಅನನ್ಯತೆಗೂ ಎಲ್ಲ ಜೀವನಕ್ಷೇತ್ರಗಳಲ್ಲಿಯೂ ಭಾರತೀಯತೆ ಹೊಮ್ಮಬೇಕೆಂಬ ನಿಲವಿಗೂ ಅಪೂರ್ವ ದೋಹದ ನೀಡಿದವರು ಸೋದರಿ ನಿವೇದಿತಾ. ಹತ್ತು-ಹನ್ನೆರಡು ವರ್ಷಗಳ ಅಲ್ಪ ಕಾಲಾವಧಿಯಲ್ಲಿ ಭಾರತದ ನವೋತ್ಥಾನಪ್ರಕ್ರಿಯೆಗೆ ನಿವೇದಿತಾರಿಂದ ದೊರೆತ ಪ್ರಸ್ಫುರಣವು ಭಾರತದ ಈಚಿನ ಇತಿಹಾಸದ ಒಂದು ಸುವರ್ಣಖಚಿತ ಪರ್ವ. ಈ ವರ್ಷ (೨೦೧೭) ನಿವೇದಿತಾರವರ ೧೫೦ನೇ ಜನ್ಮವರ್ಷಪರ್ವ. ಅದರ ನಿಮಿತ್ತ ನಿವೇದಿತಾರವರ ಜೀವನಗಾಥೆಯ ಪ್ರಮುಖ ಮಜಲುಗಳನ್ನು ಸ್ಮರಿಸುವ ಈ ಲೇಖನಮಾಲೆ. ನಿವೇದಿತಾರವರನ್ನು ಹಿಂದುತ್ವದ ಕ್ರಾಂತಿಕಾರಕ ಪ್ರತಿಪಾದಕರಲ್ಲಿ ಅಗ್ರಶ್ರೇಣಿಯವರೆಂದು ವರ್ಣಿಸುವುದು […]
ಗುರುಸನ್ನಿಧಿಯ ಬಳಿಸಾರಿದ `ನಿವೇದಿತೆ’
Month : October-2017 Episode : ಸಾರ್ಧಶತಾಬ್ದ ಸ್ಮರಣೆ Author : ಎಸ್.ಆರ್. ರಾಮಸ್ವಾಮಿ