ಕವಿಗಳ ಕಥೆಗಳಲ್ಲಿ ಪದ್ಯಗಳದ್ದೇ ಪ್ರಾಮುಖ್ಯ. ಒಬ್ಬೊಬ್ಬ ಕವಿಯ ಪದ್ಯವೂ ಒಂದೊಂದು ರೀತಿ. ಪ್ರತಿಯೊಬ್ಬ ಕವಿಯೂ ಅವನ ಮನೋಭಾವಕ್ಕೆ ತಕ್ಕಂತೆ ಪದ್ಯಗಳನ್ನು ಬರೆಯುತ್ತಾನೆ. ಪದ್ಯಕ್ಕೆ ಛಂದಸ್ಸು ಮೊದಲ ಅಲಂಕಾರ. ಆ ಬಳಿಕ ಅದರಲ್ಲಿ ಇರುವ ಪ್ರಾಸ-ಅನುಪ್ರಾಸ ಮೊದಲಾದವು ಇನ್ನಷ್ಟು ಶೋಭೆಯನ್ನು ಕೊಡುವಂತಹವು. ಅವೆಲ್ಲಕ್ಕಿಂತ ಮುಖ್ಯವಾಗಿ ಅದರಲ್ಲಿ ಇರುವಂತಹ ಅರ್ಥದ ಮಹತ್ತ್ವ. ಒಂದು ಸರಳವಾದ ವಾಕ್ಯವನ್ನೇ ಕವಿಯಾದವನು ಹೇಳಿದಾಗ ಅದು ಬೇರೆಯದೇ ರೀತಿಯಲ್ಲಿ ವಿಶೇಷವಾಗಿ ಸಂತಸವನ್ನು ಕೊಡುವಂತೆ ಇರುತ್ತದೆ. ಆ ಕಾರಣದಿಂದಲೇ “ಕಿವಿಯಿಂದೀಂಟಿಸುವರ್ ಸಮಸ್ತ ರಸಮಂ” (ಕಿವಿಯಿಂದಲೇ ಎಲ್ಲ ರಸವನ್ನೂ […]










