
ವೇತಾಲಸಿದ್ಧಿಲಾಭ ಎಂಬ ಮೂವತ್ತೊಂದನೆಯ ಉಪಾಖ್ಯಾನ ರಾಜನು ತಾನು ಬಾಯಿಬಿಟ್ಟರೆ ಮೌನಭಂಗವಾಗಬಹುದೆಂಬ ಭಯದಿಂದ ಸುಮ್ಮನಿದ್ದನು. ಮತ್ತೆ ಬೇತಾಳನು: ರಾಜನ್! ನೀನು ಭಯದಿಂದ ಕಥೆಯನ್ನು ಹೇಳಲಾರೆ. ಇರಲಿ, ನಾನೇ ಒಂದು ಕಥೆಯನ್ನು ಹೇಳುವೆ. ಕಥೆಯ ಕೊನೆಯಲ್ಲಿ ಒಂದು ಪ್ರಶ್ನೆಯನ್ನೂ ಕೇಳುವೆ. ನೀನು ಅದಕ್ಕೆ ಉತ್ತರವನ್ನು ಹೇಳಬೇಕು. ಆದರೆ ನೆನಪಿಟ್ಟುಕೋ, ಉತ್ತರ ತಿಳಿದಿದ್ದರೂ ಮೌನಭಂಗದ ಭಯದಿಂದ ನೀನು ಹೇಳದಿದ್ದರೆ ತತ್ಕ್ಷಣವೇ ನಿನ್ನ ತಲೆ ಸಿಡಿದು ಸಾವಿರ ಚೂರಾಗುವುದು ಎಂದು ಹೇಳಿದನು. ಪುನಃ ಭೋಜರಾಜನು ಸಿಂಹಾಸನದಲ್ಲಿ ಕುಳಿತುಕೊಳ್ಳಲು ಬಂದಾಗ ಮತ್ತೊಂದು ಗೊಂಬೆಯು ಅವನನ್ನು […]