
ಶ್ರೀರಾಮಮಂದಿರ ನಿರ್ಮಾಣವು ನಿಸ್ಸಂದೇಹವಾಗಿ ಅಯೋಧ್ಯೆ ಮಾತ್ರವಲ್ಲದೇ ಸಂಪೂರ್ಣ ಉತ್ತರಪ್ರದೇಶದ ಆರ್ಥಿಕ ಬೆಳವಣಿಗೆಯ ವೇಗವರ್ಧಕವಾಗಿ ಹೊರಹೊಮ್ಮುತ್ತಿದೆ. ಇದು ವಿವಿಧ ಕ್ಷೇತ್ರಗಳಲ್ಲಿ ಹೊಸಅಲೆಯನ್ನು ಸೃಷ್ಟಿಸಿದ್ದು, ಆರ್ಥಿಕ ಸಮೃದ್ಧಿಯ ಹೊಸಯುಗಕ್ಕೆ ನಾಂದಿ ಹಾಡಿದೆ. ಹೀಗೆ ಅಯೋಧ್ಯೆಯು ಮುಂದಿನ ಪೀಳಿಗೆಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿ ವಿಕಸನಗೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ. ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣವು ಭಾರತದ ಇತಿಹಾಸದ ಮಹತ್ತ್ವದ ಕ್ಷಣವಾಗಿದೆ. ಇದು ಕೇವಲ ಕಟ್ಟಡದ ನಿರ್ಮಾಣವಲ್ಲ, ಬದಲಿಗೆ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಪುನರುಜ್ಜೀವನದ ಪ್ರತೀಕವಾಗಿದೆ. ಮಂದಿರ ನಿರ್ಮಾಣವು ಭಾರತದ […]