ಒಂದುಕಾಲದಲ್ಲಿ ಕೆರೆಗಳ ಊರಾಗಿದ್ದ ಬೆಂಗಳೂರು ಆಧುನಿಕತೆಯ ಓಟದಲ್ಲಿ ನೀರಿನ ಮೂಲಗಳನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತಾ ಸ್ಪರ್ಧೆಗೆ ಬಿದ್ದಿತು. ಉತ್ತಮಸ್ಥಿತಿಯಲ್ಲಿರುವ ಕೆರೆಗಳನ್ನು ಕಾಣುವುದೇ ಅಸಾಧ್ಯ ಎನ್ನುವ ಕಾಲಘಟ್ಟಕ್ಕೆ ಬಂದು ನಿಂತಿತು. ಆದರೆ ಪ್ರಕೃತಿ ಎಂದಿಗೂ ಮಾನವನ ಹಾಗೆ ಅಲ್ಲ. ವಿಷವನ್ನುಣಿಸಿದ ಮಾನವನಿಗೆ ಅಮೃತವನ್ನೇ ನೀಡಲು ಪ್ರಯತ್ನಿಸುತ್ತದೆ. ಇದನ್ನು ಅರಿತ ಬೆಂಗಳೂರಿನ ಪುಟ್ಟೇನಹಳ್ಳಿ ಕೆರೆಯ ಸುತ್ತಮುತ್ತಲಿನವರು ಕೆರೆಯನ್ನು ಮತ್ತೆ ಸುಸ್ಥಿತಿಗೆ ತರುವ ಪ್ರಯತ್ನಮಾಡಿ ಗೆಲವನ್ನು ಸಾಧಿಸಿದ್ದಾರೆ. ಕೆರೆಯೊಂದನ್ನು ಪುನಶ್ಚೇತನಗೊಳಿಸಿ ಕಾಪಾಡಿಕೊಂಡು ಬರುತ್ತಿರುವ ಆಸಕ್ತ ಕಾರ್ಯಕರ್ತರ ಸಾಹಸದ ಕುರಿತು ಒಂದು ನುಡಿಚಿತ್ರ ಇಲ್ಲಿದೆ. […]













