೧೮೯೬ರ ಆರಂಭದ ತಿಂಗಳುಗಳಲ್ಲಿ ಮಾರ್ಗರೆಟ್ ಯಾವುದೋ ಆವೇಶದಿಂದ ಗ್ರಸ್ತಳಾದಂತೆ ಭಗವದ್ಗೀತೆ ಉಪನಿ?ತ್ತುಗಳು ಮೊದಲಾದ ವಾಙ್ಮಯದ ಗಾಢ ಅಧ್ಯಯನದಲ್ಲಿ ಮುಳುಗಿದಳು. ತಾನು ದೀರ್ಘಕಾಲದಿಂದ ಅರಸುತ್ತಿದ್ದ ಸಮಾಧಾನ ಆ ವ್ಯಾಸಂಗದಿಂದ ಲಭಿಸತೊಡಗಿದೆ ಎಂಬ ಭಾವನೆ ಅವಳಲ್ಲಿ ಉದಿಸಿತ್ತು. ಅದು ಕೇವಲ ಬೌದ್ಧಿಕ ವ್ಯಾಯಾಮವಾಗಿರಲಿಲ್ಲ. ವೇದಾಂತದ ಆಧಾರತತ್ತ್ವಗಳಿಗೆ ಅವಳ ಹೃದಯವೇ ಅನುರಣಿಸತೊಡಗಿತ್ತು. ತನ್ನ ಜೀವನದ ಅಂತಿಮ ಲಕ್ಷ್ಯವೇನೆಂಬುದು ಕಡೆಗೂ ಅವಳಿಗೆ ಗೋಚರಿಸಿತ್ತು. ಹೀಗಾಗಿ ೧೮೯೬ರ ಏಪ್ರಿಲ್ ತಿಂಗಳಲ್ಲಿ ಸ್ವಾಮೀಜಿ ಲಂಡನ್ನಿಗೆ ಮರಳಿದಾಗ ಕಂಡದ್ದು ಪೂರ್ಣ ಪರಿವರ್ತನೆಗೊಳಗಾದ ಹೊಸ ಮಾರ್ಗರೆಟ್ಳನ್ನು. ಹೀಗೆಂದು ಅವಳು […]













