ಕೆರೆಗಳು ಅತ್ಯಂತ ಹಳೆಯದಾದ ಮಾನವನಿರ್ಮಿತ ರಚನೆ. ಕೆರೆಅಂಗಳ, ಹಳ್ಳಗಳು, ತೂಬು, ಕೋಡಿ, ಕಾಲುವೆಗಳು, ಅಚ್ಚುಕಟ್ಟು ಮುಂತಾದ ಅನೇಕ ಅಂಗಗಳನ್ನೊಳಗೊಂಡ ಕೆರೆವ್ಯವಸ್ಥೆ ಬಹೋಪಯೋಗಿ. ಮುಖ್ಯವಾಗಿ ನೀರಾವರಿ, ಕುಡಿಯುವ ನೀರು, ಅಂತರ್ಜಲಮಟ್ಟ ಕಾಪಾಡುವಿಕೆ, ಮೀನುಗಾರಿಕೆ, ಫಲವತ್ತಾದ ಹೂಳು, ಮರಳು, ಇಟ್ಟಿಗೆ ಹಾಕಲು ಮಣ್ಣು….. ಮುಂತಾದ ಹತ್ತು-ಹಲವು ರೀತಿಯಲ್ಲಿ ಕೆರೆಗಳು ಉಪಯುಕ್ತವಾಗಿವೆ. ಆದುದರಿಂದಲೇ ನಮ್ಮ ಪೂರ್ವಿಕರು ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಹೆಚ್ಚಿನ ಮಹತ್ತ್ವ ನೀಡಿದ್ದರು. ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಕೃಷಿಆಧಾರಿತ ಜೀವನಾಧಾರಗಳ ಕೇಂದ್ರಬಿಂದುಗಳು ಕೆರೆಗಳೇ ಆಗಿದ್ದು, ಇವು ಸಮುದಾಯದ ಆಸ್ತಿಗಳು. […]












