
ಮನುಷ್ಯನ ಬಾಳಿಗೊಂದು ಧ್ಯೇಯ ಇರಬೇಕು. ಗುರಿಯಿಲ್ಲದ ಬದುಕು ಚುಕ್ಕಾಣಿಯಿಲ್ಲದ ನಾವೆಯಂತೆ. ಪ್ರವಾಹದಲ್ಲಿ ಕೊಚ್ಚಿಹೋಗುವ ತರಗೆಲೆಯಂತೆ. ನದಿಗೆ ತನ್ನ ಮೂಲಸೆಲೆಯಾದ ಸಮುದ್ರವನ್ನು ಸೇರುವುದೇ ಗುರಿ. ಅದೇ ನದಿಯಲ್ಲಿ ತೇಲಿಹೋಗುವ ಯಾವ ವಸ್ತುವಿಗೂ ಗುರಿ ಎಂಬುದಿಲ್ಲ. ನದಿ ತನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಹೋಗುತ್ತದೆಯೇ ವಿನಾ, ತಾನು ಬಯಸಿದ ಗುರಿಯನ್ನು ಸೇರುವುದಿಲ್ಲ. ಆದ್ದರಿಂದ ನಮ್ಮ ಗುರಿ ಯಾವುದು, ಗುರಿ ಸೇರಲು ದಾರಿ ಯಾವುದು ಎಂಬುದನ್ನು ಮೊದಲು ನಿಶ್ಚಯಿಸಬೇಕು. ಗುರಿ ಸೇರುವ ಪ್ರಯತ್ನವನ್ನು ಸಾಧನೆ ಎನ್ನುತ್ತಾರೆ. ಗುರಿಯಿಲ್ಲದ ಪ್ರಯತ್ನವನ್ನು, ಕೃತ್ಯವನ್ನು ಸಾಧನೆ […]