ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಸಂದರ್ಶನ

ಸಂದರ್ಶನ

ಭಾರತ ಇಂದು ಜೀವಂತವಾಗಿ ಉಳಿದುಕೊಂಡಿದ್ದರೆ ಅದು ಹಳ್ಳಿಗಳಿಂದಾಗಿ ಮಾತ್ರ. : ಸೀತಾರಾಮ ಕೆದಿಲಾಯ

ಭಾರತ ಇಂದು ಜೀವಂತವಾಗಿ ಉಳಿದುಕೊಂಡಿದ್ದರೆ ಅದು ಹಳ್ಳಿಗಳಿಂದಾಗಿ ಮಾತ್ರ. : ಸೀತಾರಾಮ ಕೆದಿಲಾಯ

‘ದೇಶ ನೋಡು, ಕೋಶ ಓದು’ ಎಂದು ಒಂದು ಗಾದೆ ಹೇಳಿದರೆ, ಇನ್ನೊಂದು ‘ಸ್ವಾನುಭವವೇ ಸರ್ವೊತ್ತಮ ಗುರು’ ಎನ್ನುತ್ತದೆ. ’ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ’ ಎಂಬ ಮಾತು ಕೂಡ ಅನುಭವಕ್ಕಿರುವ ಉನ್ನತ ಸ್ಥಾನವನ್ನು ತಿಳಿಸುತ್ತದೆ. ಒಬ್ಬ ವ್ಯಕ್ತಿ ಸುಮಾರು ಐದು ವರ್ಷಗಳ ಕಾಲ, ಇಡೀ ದೇಶದ ಯಾವುದೇ ಪ್ರಾಂತವನ್ನು ಬಿಡದೆ, ೨೭ ಸಾವಿರ ಕಿ.ಮೀ.ಗಳಷ್ಟು ಪಾದಯಾತ್ರೆ ನಡೆಸಿ ಬಂದರೆಂದರೆ ನಂಬುತ್ತೀರಾ? ಅವರೇ ರಾ.ಸ್ವ. ಸಂಘದ ಸೇವಾಪ್ರಮುಖರಾಗಿದ್ದ ಸೀತಾರಾಮ ಕೆದಿಲಾಯರು. ತಮ್ಮ ಪಾದಯಾತ್ರೆಯ ಅವಧಿಯಲ್ಲಿ ಅವರು ಭೇಟಿ ಮಾಡಿದ ಜನ, […]

ಅಡಿಗರು ಒಬ್ಬ ‘ಕವಿಗಳ ಕವಿ’ – ಡಾ. ಕೆ.ವಿ. ತಿರುಮಲೇಶ್

ಅಡಿಗರು ಒಬ್ಬ 'ಕವಿಗಳ ಕವಿ’  - ಡಾ. ಕೆ.ವಿ. ತಿರುಮಲೇಶ್

ವೃತ್ತಿಜೀವನವನ್ನು ದೂರದ ಹೈದರಾಬಾದ್‌ನಲ್ಲಿ ಕಳೆದವರು ಮತ್ತು ಆನಂತರ ಅಲ್ಲೇ ನೆಲೆಸಿದವರಾಗಿದ್ದರೂ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಬಗೆಗೆ ನಿರಂತರ ಸ್ಪಂದಿಸುತ್ತಿರುವವರು ಕವಿ-ಸಾಹಿತಿ ಮತ್ತು ಭಾಷಾಶಾಸ್ತ್ರಜ್ಞ ಡಾ| ಕೆ.ವಿ. ತಿರುಮಲೇಶ್. ಅವರು ಕವಿ ಗೋಪಾಲಕೃಷ್ಣ ಅಡಿಗರಿಂದ ಆರಂಭಗೊಂಡ ನವ್ಯಸಾಹಿತ್ಯ ಚಳವಳಿಯಿಂದ ಪ್ರಭಾವಿತರಾಗಿ ಬರೆಯಲು ಆರಂಭಿಸಿ ಮುಂದೆ ಬಹುಎತ್ತರಕ್ಕೆ ಬೆಳೆದವರು. ಇಂಗ್ಲಿಷ್ ಸೇರಿದಂತೆ ಪಾಶ್ಚಾತ್ಯ ಸಾಹಿತ್ಯ ಮತ್ತು ಚಿಂತನಪ್ರಣಾಳಿಗಳನ್ನು ವಿಪುಲವಾಗಿ ಓದಿಕೊಂಡಿರುವ ತಿರುಮಲೇಶ್ ಪತ್ರಿಕಾ ಅಂಕಣ ಸೇರಿದಂತೆ ವಿವಿಧ ಕಡೆ ಆ ಕುರಿತು ಅಪಾರವಾಗಿ ಬರೆದಿದ್ದಾರೆ. ಕನ್ನಡ ಕಾವ್ಯ, ಸಾಹಿತ್ಯಗಳಲ್ಲಿ […]

ನಮಗೆ ಬೇಕಾಗಿರುವುದು `ಥಿಂಕ್ ಇನ್ ಇಂಡಿಯ’, `ಥಾಟ್ ಇನ್ ಇಂಡಿಯ’ : ಡಾ. ಹರೀಶ್ ಹಂದೆ 

ನಮಗೆ ಬೇಕಾಗಿರುವುದು `ಥಿಂಕ್ ಇನ್ ಇಂಡಿಯ’, `ಥಾಟ್ ಇನ್ ಇಂಡಿಯ’ : ಡಾ. ಹರೀಶ್ ಹಂದೆ 

`ಸ್ಟಾರ್ಟ್‌ಅಪ್’ ಎನ್ನುವ ಪರಿಕಲ್ಪನೆಯೂ ಇಲ್ಲದ ೧೯೯೦ರ ದಶಕದಲ್ಲಿ ಖರಗ್‌ಪುರದ ಐ.ಐ.ಟಿ.ಯಲ್ಲಿ ಇಂಜಿನಿಯರಿಂಗ್ ಮಾಡಿ , ಅಮೆರಿಕದ ಮೆಸ್ಸಾಚ್ಯುಸೆಟ್ಸ್‌ನಲ್ಲಿ ಪಿಎಚ್.ಡಿ. ಮುಗಿಸಿದವರು ಕನ್ನಡಿಗ ಡಾ. ಹರೀಶ್ ಹಂದೆ. ’ವೈಟ್‌ಕಾಲರ್ ಜಾಬ್’ ಅವರಿಗಾಗಿ ಕಾಯುತ್ತಿದ್ದರೂ , ಅವರು ಮಾತ್ರ ಆಯ್ದುಕೊಂಡದ್ದು ಭಾರತದ ಹಳ್ಳಿಮೂಲೆಗಳ ಬಡತನ. ಕೇವಲ ಒಂದು ಸಾವಿರ ರೂಪಾಯಿಗಳನ್ನು ಬಂಡವಾಳವಾಗಿ ಕೈಯಲ್ಲಿ ಇಟ್ಟುಕೊಂಡು, ಕಡುಬಡವನೂ ಟೆಕ್ನಾಲಜಿಯನ್ನು ಸಮರ್ಥವಾಗಿ ಬಳಸಿಕೊಳ್ಳಬಲ್ಲ, , ಆತನಲ್ಲೂ ಬೌದ್ಧಿಕ ಸಾಮರ್ಥ್ಯವಿದೆ ಎಂದು ತೋರಿಸಹೊರಟರು. ಸಾಮಾಜಿಕ ಸೇವಾಸಂಸ್ಥೆ ’ಸೆಲ್ಕೋ’ವನ್ನು ಸ್ಥಾಪಿಸುವುದರ ಮೂಲಕ ಪುನರ್ಬಳಕೆ ಇಂಧನಮೂಲದ ಮಹತ್ತ್ವವನ್ನು […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ