
೧. ಅಂತ್ಯ ಪ್ರೊಫೆಸರ್ ಸುದರ್ಶನ್ ಹಲವಾರು ವರ್ಷಗಳಿಂದ ಕಾಲಸಿದ್ಧಾಂತದ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. “ನಾನು ಕಾಲದ ಕುರಿತಂತೆ ಬಹಳ ಪ್ರಮುಖ ವಿಷಯವೊಂದನ್ನು ಕಂಡುಹಿಡಿದಿದ್ದೇನೆ” – ಅವರು ಒಂದು ದಿನ ತಮ್ಮ ಮಗಳೊಂದಿಗೆ ನುಡಿದರು. “ಕಾಲ ಎಂಬುದು ಒಂದು ಕಾರ್ಯಕ್ಷೇತ್ರ. ನಾನು ಕಂಡುಹಿಡಿದಿರುವ ಈ ಯಂತ್ರವು ಕಾಲವನ್ನು ಹಿಂದಕ್ಕೆ ತಿರುಗಿಸುವ ಶಕ್ತಿ ಪಡೆದಿದೆ.” ಯಂತ್ರದ ಗುಂಡಿಯೊಂದನ್ನು ಅದುಮುತ್ತಾ ಅವರು ಮಾತು ಮುಂದುವರಿಸಿದರು – “ಈಗ ಕಾಲವು ಹಿಂದಕ್ಕೆ ಚಲಿಸಲಿದೆ….” “ಚಲಿಸಲಿದೆ….. ಹಿಂದಕ್ಕೆ ಕಾಲವು ಈಗ” ಮುಂದುವರಿಸಿದರು – ಮಾತು […]