ಭಾಷೆಯೊಂದು ಇಲ್ಲವೇ ಇಲ್ಲ ಎನ್ನುವಷ್ಟು ಜನಬಳಕೆಯಿಂದ ದೂರವಾದಾಗ ಅದು ಮತ್ತೆ ಜನರ ನಡುವೆ ಉಪಸ್ಥಾಪಿಸಲ್ಪಡಬಹುದು ಎಂಬ ಭರವಸೆಗೆ ಎರಡು ಭಾಷಾ ಆಂದೋಲನಗಳು ನಮ್ಮ ಮುಂದೆ ಜೀವಂತಸಾಕ್ಷಿಗಳಾಗಿ ನಿಂತಿವೆ. ಅಂದಮೇಲೆ ಕನ್ನಡದ ಬಗೆಗೆ ಆತಂಕಪಡಬೇಕಾದ ಅನಿವಾರ್ಯತೆ ಇಲ್ಲ. ಸವಾಲು ಇದ್ದೇ ಇದೆ. ಅದನ್ನು ಭರವಸೆಯ ನೆಲೆಯಲ್ಲಿ ಹೇಗೆ ನಿರ್ವಹಿಸಬೇಕೆಂಬುದನ್ನು ಯೋಚಿಸಬೇಕಷ್ಟೆ. ಕನ್ನಡದ ಸ್ಥಿತಿ ಅತೀವ ನಿರಾಶಾದಾಯಕ ಎಂಬ ಮಾತು ಎಲ್ಲರ ಅಭಿಪ್ರಾಯವಾಗಿ ಅಭಿವ್ಯಕ್ತಿಯನ್ನು ಪಡೆದುಕೊಳ್ಳುತ್ತಿರುವ ಸನ್ನಿವೇಶದಲ್ಲಿ ಆ ಕುರಿತು ಯೋಚಿಸುವುದು ಸಂಗತವೆನಿಸುತ್ತದೆ. ಭಾಷೆಯು ಒಂದು ಕಾಲದ ಅನಿವಾರ್ಯತೆಯಾಗಿ ಹುಟ್ಟುಪಡೆಯುತ್ತದೋ […]
ಕನ್ನಡ ಎದೆಯಲಿ ಕುಣಿಕುಣಿದಾಡಲು…
Month : November-2024 Episode : Author : ನಾರಾಯಣ ಶೇವಿರೆ