ಹತ್ತನೆಯ ಶತಮಾನದ ವೇಳೆಗೆ ಅದ್ವೈತಪಂಥದ ವಿಕೃತಾಭಾಸಗಳೂ ಭಕ್ತಿಮಾರ್ಗದ ಬಗೆಗೆ ತಿರಸ್ಕಾರಗಳೂ ಹುಟ್ಟಿಕೊಂಡಿದ್ದ ಪರಿಸರದಲ್ಲಿ ಅದ್ವೈತದರ್ಶನಕ್ಕೂ ಭಕ್ತಿಸಾಧನೆಗೂ ವಿರೋಧವಿಲ್ಲವೆಂದು ಸಾರಿದ ಅವತಾರಪುರುಷರು, ಶ್ರೀರಾಮಾನುಜರು. ವಿಶಿಷ್ಟಾದ್ವೈತವೆಂಬ ಸಮನ್ವಯಮಾರ್ಗದಲ್ಲಿ ಆಚಾರ್ಯರು ವೇದೋಪನಿಷತ್ಸಾಹಿತ್ಯವನ್ನು ಮಾತ್ರವಲ್ಲದೆ ದ್ರಾವಿಡ ಅನುಭಾವಿಗಳ ಪ್ರಬಂಧವಾಙ್ಮಯವನ್ನೂ ವ್ಯಾಪಕವಾಗಿ ಬಳಸಿಕೊಂಡು ಪ್ರಸಿದ್ಧರಾದರು. ಭಕ್ತರ ಹೃದಯವೇ ದೇವರ ದಿವಾನಖಾನೆ ಎಂದು ಶ್ರೀರಾಮಕೃ?ರು ಒಮ್ಮೆ ವರ್ಣಿಸಿದ್ದರು. ನಾನು ಪತಿತ, ಅನುಕಂಪಾರ್ಹ – ಎಂಬ ನಮ್ರತೆ ಸಾಧನೆಯ ಆರಂಭದಶೆಯಲ್ಲಿ ಉಪಯುಕ್ತವೆನಿಸಿದರೂ, ಪರಿಪಕ್ವದಶೆಯ ಭಕ್ತಿ ಎಷ್ಟು ಜ್ವಲಂತವೂ ಗಾಢವೂ ಆಗಿರುತ್ತದೆಂದರೆ, “ಹರಿಯ ಹೆಸರನ್ನು ಉಚ್ಚರಿಸಿರುವ ನಾನು ಪಾಪಿ […]











