ಖನಕ ವಿದುರರ ಅಪ್ತ ಎನ್ನುವುದು ನನಗೆ ಹೊಸ ವಿಷಯವಾಗಿತ್ತು. ಅವನು ವಾರಣಾವತಕ್ಕೆ ಬಂದುದೇ ಇಲ್ಲವಾದರೆ ಸುರಂಗ ಕೊರೆದವರಾರು? ಅದನ್ನು ಕಲ್ಲುಮಣ್ಣಿನಿಂದ ಮುಚ್ಚಿದವರಾರು? ಮುಚ್ಚುವದೇ ಆದರೆ ಕೊರೆದುದೇಕೆ? ಅಥವಾ ಸುರಂಗಮಾರ್ಗ ಪೂರ್ಣಗೊಳ್ಳಲೇ ಇಲ್ಲವೆ? ಹೀಗೆ ಯೋಚಿಸುತ್ತ ಮಲಗಿದವನಿಗೆ ರಾತ್ರಿ ಯಾವುದೋ ಗಳಿಗೆಯಲ್ಲಿ ನಾನು ಮಾಡಿದ ತಪ್ಪು ಹೊಳೆಯಿತು. ನಾನು ಗೊಲ್ಲರ ಹಟ್ಟಿಯಿಂದ ಬಂದು ನಾಲ್ಕು ದಿನಗಳು ಕಳೆದಿರಬಹುದಷ್ಟೆ. ನನಗೆ ಹಸ್ತಿನಾವತಿಯಿಂದ ಚರನೊಬ್ಬನ ಮೂಲಕ ಒಂದು ಸಂದೇಶ ಬಂತು. ಅದನ್ನು ಸಂದೇಶ ಎನ್ನುವುದಕ್ಕಿಂತಲೂ ಆದೇಶ ಎನ್ನುವುದೇ ಸೂಕ್ತ. ಹಸ್ತಿನಾವತಿಯ ಪ್ರಧಾನ […]
ಅರಗಿನ ಮನೆ
Month : June-2021 Episode : Author : ರಾಧಾಕೃಷ್ಣ ಕಲ್ಚಾರ್