
ಇಂದ್ರಜಾಲ ಪ್ರದರ್ಶನ ಎಂಬ ಮೂವತ್ತನೆಯ ಉಪಾಖ್ಯಾನ ಬಳಿಕ ರಾಜನು ಸಿಂಹಾಸನವನ್ನು ಏರಲು ತೊಡಗಿದಾಗ ಮತ್ತೊಂದು ಗೊಂಬೆಯು “ಭೋಜರಾಜನೆ, ವಿಕ್ರಮನಂತೆ ಔದಾರ್ಯಾದಿ ಗುಣಗಳಿದ್ದವನೇ ಈ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಯೋಗ್ಯನು, ಮತ್ತೊಬ್ಬನಲ್ಲ” ಎಂದಿತು. ರಾಜನು ವಿಕ್ರಮನ ಔದಾರ್ಯ ಗುಣವೃತ್ತಾಂತವನ್ನು ಹೇಳುವಂತೆ ಕೇಳಿದಾಗ ಗೊಂಬೆಯು ಕಥೆಯನ್ನು ಆರಂಭಿಸಿತು. ಒಮ್ಮೆ ರಾಜನಾದ ವಿಕ್ರಮನು ಎಲ್ಲಾ ಸಾಮಂತರಾಜಕುಮಾರರೊಡನೆ ಮಾತನಾಡುತ್ತಾ ಸಿಂಹಾಸನದಲ್ಲಿ ಕುಳಿತುಕೊಂಡಿದ್ದನು. ಆಗ ಐಂದ್ರಜಾಲಿಕನೊಬ್ಬ ಬಂದು ರಾಜನಿಗೆ ನಮಸ್ಕರಿಸಿ “ಎಲೈ ದೇವನೆ, ನೀನು ಸಕಲಕಲೆಗಳನ್ನು ಬಲ್ಲವನು. ನಿನ್ನ ಹತ್ತಿರ ಬಂದು ಅನೇಕ ಐಂದ್ರಜಾಲಿಕರು ಲೀಲಾಜಾಲವಾಗಿರುವ […]