
ಒಂದಾನೊಂದು ಕಾಡಿನಲ್ಲಿ ಮಾವಿನ ಮರ ಮತ್ತು ಹಲಸಿನ ಮರ ಎರಡು ಅಕ್ಕಪಕ್ಕದಲ್ಲಿ ಬೆಳೆದಿದ್ದವು. ಮಾವಿನ ಮರವು ತನ್ನ ಸಿಹಿಯಾದ ಹಣ್ಣುಗಳ ಬಗ್ಗೆ ಗರ್ವದಿಂದ ಇತರ ಪ್ರಾಣಿಗಳನ್ನು ತಾತ್ಸಾರದಿಂದ ಕಾಣುತ್ತಿತ್ತು. ಮಾವಿನ ಮರದ ಈ ಸ್ವಭಾವದಿಂದ ಎಲ್ಲಾ ಪ್ರಾಣಿಗಳು ಬೇಸತ್ತಿದ್ದವು. ಯಾವ ಪ್ರಾಣಿಗಳೂ ಮಾವಿನ ಮರದ ಸ್ನೇಹ ಮಾಡಿರಲಿಲ್ಲ. ಅದೇ ಹಲಸಿನ ಮರವು ಎಲ್ಲ ಪ್ರಾಣಿಗಳೊಂದಿಗೆ ಸ್ನೇಹದಿಂದ, ಮಮತೆಯಿಂದ ವರ್ತಿಸುತ್ತಿತ್ತು. ಹಲಸಿನ ಮರದ ಸ್ವಭಾವಕ್ಕೆ ಕಾಡಿನ ಪ್ರಾಣಿಗಳು ಮನಸೋತಿದ್ದವು. ಪಕ್ಷಿಗಳು ಹಾಗೂ ಜೇನುನೊಣಗಳು ತಮ್ಮ ಗೂಡನ್ನು ಕಟ್ಟಿಕೊಂಡಿದ್ದವು. ಹೀಗೆ […]