ಛಲಬಿಡದ ತ್ರಿವಿಕ್ರಮನು ಮತ್ತೊಂದು ಸಲ ಹೆಣವನ್ನು ಹೆಗಲಮೇಲೆ ಹಾಕಿಕೊಂಡು ಶ್ಮಶಾನದ ಕಡೆಗೆ ಹೊರಟನು. ಆಗ ಹೆಣದಲ್ಲಿದ್ದ ಬೇತಾಳನು ಅವನ ಮಾರ್ಗಾಯಾಸ ಕಳೆಯಲೆಂದು ಈ ಕಥೆಯನ್ನು ಹೇಳಿದನು – ಅನಂಗಪುರವೆಂಬ ನಗರದಲ್ಲಿ ವೀರಬಾಹು ಎಂಬ ರಾಜನು ಆಳುತ್ತಿದ್ದನು. ಅದೇ ನಗರದಲ್ಲಿ ಅರ್ಥದತ್ತನೆಂಬ ತುಂಬಾ ಧನಿಕನಾದ ವರ್ತಕನಿದ್ದನು. ಅವನಿಗೆ ಧನದತ್ತನೆಂಬ ಮಗನೂ, ಮದನಸೇನೆಯೆಂಬ ಮಗಳೂ ಇದ್ದರು. ಅವರಿಬ್ಬರೂ ಪ್ರಾಪ್ತವಯಸ್ಕರಾಗಿದ್ದರು. ಒಮ್ಮೆ ಮದನಸೇನೆಯು ಸಖಿಯರೊಂದಿಗೆ ವಿಹಾರಕ್ಕೆಂದು ಉದ್ಯಾನಕ್ಕೆ ಹೋಗಿದ್ದಳು. ಅಲ್ಲಿ ಧರ್ಮದತ್ತನೆಂಬ ವರ್ತಕ ಯುವಕನೊಬ್ಬನು ಸುಂದರಿಯಾದ ಅವಳನ್ನು ಕಂಡು ಮೋಹಗೊಂಡನು. ಅವಳಿಲ್ಲದೆ […]












