
ಭಗವಂತನ ಸಂದೇಶಗಳನ್ನು ಮನುಕುಲಕ್ಕೆ ಹಂಚಿ ತಿಳಿಹೇಳಲೆಂದು ಭಗವಂತನಿಂದಲೇ ಆದೇಶ ಪಡೆದ ಅನೇಕ ಮಹಾಪುರು?ರು, ಸಂತರು, ಸಾಧು ಸಜ್ಜನರು, ಆಚಾರ್ಯಪುರು?ರು ಆಗಾಗ ಈ ದೇಶದಲ್ಲಿ ಹುಟ್ಟಿಬರುತ್ತಾರೆ. ಇವರೆಲ್ಲ ದೈವದ ಸಂದೇಶಗಳನ್ನು ನಮಗಾಗಿ ಹೊತ್ತು ಈ ಬುವಿಯಲ್ಲಿ ಅವತರಿಸಿದ ದೇವದೂತರೆನ್ನಬಹುದು. ಹೀಗೆ ಭಾರತದಲ್ಲಿ ಆಗಿಹೋಗಿರುವ ಮಹಾಮಹಿಮ ಸಂತರು ಅನೇಕ ಸಂಖ್ಯೆಯಲ್ಲಿದ್ದಾರೆ. ಇಂಥವರಲ್ಲಿ ವಿಶೇ?ವಾಗಿ ಭಗವಂತನ ಸನ್ನಿಧಾನವಿರುತ್ತದೆ. ಹೀಗಾಗಿಯೇ ಇಂಥ ಮಹಾಮಹಿಮ ಜೀವರನ್ನು ದೇವತಾಸ್ವರೂಪರು, ದೇವತಾಮೂರ್ತಿಗಳು ಎಂದು ಭಾವಿಸಲಾಗುತ್ತದೆ. ಭಾರತಮಾತೆಯ ಕೊರಳನ್ನು ಆಧ್ಯಾತ್ಮಿಕತೆಯ ದಿವ್ಯತೆಯಿಂದ ಅಲಂಕರಿಸಿ ಕಾಂತಿಯನ್ನು ಪಸರಿಸುತ್ತಿರುವ ಇಂಥ ಸಂತರ ಮಾಲಿಕೆಯಲ್ಲಿ ಶಿರಡಿಯ ಸಾಯಿಬಾಬಾ ಕೂಡ ಒಬ್ಬರು. ಭಾರತೀಯರಿಗೆ ಪ್ರೀತಿಯ ಗುರುವಾಗಿ, ಗುರುದೈವವೆನ್ನಿಸಿಕೊಂಡು ಜನಮಾನಸದಲ್ಲಿ ಇಂದಿಗೂ ನೆಲೆನಿಂತವರು, ಭಕ್ತರಿಂದ ಪೂಜೆ, ಆರಾಧನೆ ಕೈಗೊಳ್ಳುತ್ತಿರುವವರು.
ಯದ್ಯದ್ವಿಭೂತಿಮತ್ಸತ್ತ್ವಂ | ಶ್ರೀಮದೂರ್ಜಿತಮೇವ ವಾ |
ತತ್ತದೇವಾವಗಚ್ಛ ತ್ವಂ | ಮಮ ತೇಜೋಂಶಸಂಭವಮ್ |
ಎಲ್ಲಿ ಹಿರಿದಾದ ಜ್ಞಾನವಿದೆ, ಬಲವಿದೆ, ಬೆಂಬಲವಿದೆ, ಎಲ್ಲಿ ಸಮಾಜವನ್ನು ಮುನ್ನಡೆಸುವ ಉನ್ನತಿಯಿದೆ, ಅಂಥ ವ್ಯಕ್ತಿ ನನ್ನ ವಿಶಿಷ್ಟವಾದ ತೇಜಸ್ಸನ್ನು, ಶಕ್ತಿಯನ್ನು ಹೊತ್ತು ಹುಟ್ಟಿರುತ್ತಾನೆ.
ಹೀಗೆ ಶ್ರೀಕೃಷ್ಣನು ತನ್ನ ಗೀತೋಪದೇಶದಲ್ಲಿ ಸ್ಫುಟಪಡಿಸಿದ್ದಾನೆ. ಈ ಮಾತು ಸತ್ಯಸ್ಯ ಸತ್ಯವೆಂಬುದು ಸಾಯಿಬಾಬಾ ಗುರುವರ್ಯರನ್ನು ನಂಬಿ ಆರಾಧಿಸುವವರಿಗೆ ಅರಿವಾಗದಿರುವುದಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ. ಗುರುವೇ ದೇವರು, ದೇವರೇ ಗುರು ಎಂಬ ಸಮೀಕರಣ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಬೆರೆತುಕೊಂಡಿದೆ. ಗುರುವಿನ ಮಹಿಮೆ ಮೇರೆಯಿಲ್ಲದುದು. ಸದ್ಗುರುವಾದವರು ಆಧ್ಯಾತ್ಮಿಕ ಸತ್ಸಂಗದ ಅಮೃತಧಾರೆಯನ್ನು ತಾವೂ ಸವಿಯಬಲ್ಲರು, ತಮ್ಮ ಶಿ?ರಿಗೂ ಉಣಬಡಿಸಬಲ್ಲರೆಂಬ ಸತ್ಯದ ಮಾತಿದೆ. ಸದ್ಗುರುವಾದವರು ಸಮಾಜದಲ್ಲಿ ಉತ್ತಮ ಮೌಲ್ಯಾತ್ಮಕ ಜೀವನವನ್ನು ಪುನಃಸ್ಥಾಪಿಸಬಲ್ಲವರು. ಈ ಎಲ್ಲ ಮಾತುಗಳೂ ಮೂರ್ತರೂಪ ತಾಳಿದಂತೆ ಸದ್ಗುರು ಸಾಯಿಬಾಬಾ ಜನತೆಗೆ ಒದಗಿಬಂದವರಾಗಿದ್ದಾರೆ.
ಅನೇಕ ಮಹಾತ್ಮರ, ಸಾಧುಸಂತರ, ಅವಧೂತರ, ಅವತಾರಪುರು?ರ ಜನ್ಮವೃತ್ತಾಂತದ ಬಗ್ಗೆ ನಿಖರವಾಗಿ, ಸ್ಪ?ವಾಗಿ ಗೊತ್ತಿಲ್ಲದೆ ಹೋಗುತ್ತದೆ. ಅಲೌಕಿಕವಾದ ತೇಜಸ್ಸನ್ನು ಲೌಕಿಕ ಬದುಕಿನೊಂದಿಗೆ ಸಂಕಲಿಸಬೇಕಾದಾಗ ಮಾನವನಲ್ಲಿ ಸಹಜವಾಗಿ ಕುತೂಹಲದ, ಚಿಂತನೆಯ ಸ್ವಭಾವ ಗರಿಗೆದರಿ ಪ್ರಶ್ನೆಗಳನ್ನು ಕೇಳುವುದೂ ಸಹಜವೇ ಆಗಿದೆ. ಹಾಗೆಯೇ ಸಾಯಿಬಾಬಾ ಎಂದರೆ ಯಾರವರು? ಎಲ್ಲಿಂದ ಬಂದವರು? ಅವರ ಜನ್ಮವೃತ್ತಾಂತ ಏನು? – ಇತ್ಯಾದಿ ಕುತೂಹಲದ ಅಂಶಗಳೂ ಗರಿಗೆದರಿ ಪ್ರಶ್ನಿಸುವುದೂ ಸ್ವಾಭಾವಿಕವೇ. ಆದರೆ ಸಾಯಿಬಾಬಾರವರ ಜನ್ಮಸ್ಥಳ ಯಾವುದು, ಅವರ ಮೊದಲಿನ ಹೆಸರೇನಾಗಿತ್ತು, ಎಲ್ಲಿಂದ ಬಂದವರು – ಇತ್ಯಾದಿ ವಿವರಗಳಿಗೆ ಯಾವ ಸ್ಪ?ವಾದ ಉಲ್ಲೇಖ, ದಾಖಲೆಗಳೂ ಇದುವರೆಗೆ ದೊರೆತಿಲ್ಲ. ಈ ವಿ?ಯಗಳಿಗೆ ಬಾಬಾರವರನ್ನೇ ಕೆಲವು ಭಕ್ತರು ಪ್ರಶ್ನಿಸಿದಾಗಲೂ ಯಾವುದೇ ಸೂಕ್ತ ಸ್ಪಂದನೆ ದೊರೆತಿಲ್ಲವೆಂದೇ ಇತಿಹಾಸದ ಪುಟಗಳಲ್ಲಿ ಉಕ್ತವಾಗಿದೆ.
ಅಪಾರ ಸಂಖ್ಯೆಯ ಭಕ್ತರು ಅಂದೂ ಇಂದೂ ಇರುವ ಸಾಯಿಬಾಬಾ ಅವರು ತಮ್ಮ ಅಸಂಖ್ಯ ಭಕ್ತರಿಂದ ಒಬ್ಬ ಸಂತ, ಫಕೀರ, ಸದ್ಗುರು, ಅವತಾರಪುರು? ಎಂದೆಲ್ಲ ಕರೆಯಿಸಿಕೊಂಡವರು. ಅವರ ಭಕ್ತರಲ್ಲಿ ಮುಸ್ಲಿಮರೂ ಬಹುಸಂಖ್ಯೆಯಲ್ಲಿದ್ದರು, ಹಿಂದೂಗಳೂ ಕೂಡ ಅಪಾರಸಂಖ್ಯೆಯಲ್ಲಿದ್ದರು. ಇಂದಿಗೂ ಅದು ಹೀಗೆಯೇ ಇದೆ. ಅವರು ಬದುಕಿದ್ದಾಗಲೂ, ಇಂದಿನವರೆಗೂ ಕೂಡ ಬಾಬಾರವರು ಜನ್ಮತಃ ಮುಸ್ಲಿಮರೋ ಹಿಂದೂವೋ ಎಂಬುದು ನಿಶ್ಚಿತವಾಗಿ ತಿಳಿದುಬಂದಿಲ್ಲ. ಒಟ್ಟಿನಲ್ಲಿ ಭಾರತದ ಜನರಿಗೆ ಅವರೊಬ್ಬ ಆಧ್ಯಾತ್ಮಿಕ ಗುರು ದುಃಖ ಕ?ಗಳನ್ನು ಪರಿಹರಿಸುವ ಕರುಣಾಮಯಿ ಗುರು ಎಂದೇ ಖ್ಯಾತನಾಮರಾಗಿದ್ದಾರೆ.
ಇ?ಲ್ಲದೆ ಜನರು ಇವರನ್ನು ದತ್ತಾತ್ರೇಯನ ಮತ್ತು ಶಿವನ ಅವತಾರವೆಂದೂ ಭಾವಿಸಿ ಆರಾಧಿಸುತ್ತಾರೆ. ಸಾಯಿಬಾಬಾರ ನಿಜ ನಾಮಧೇಯವೂ ತಿಳಿದುಬಂದಿಲ್ಲ. ’ಸಾಯಿ’ ಎಂಬುದು ಅವರಿಗೆ ಜನರಿಂದಲೇ ಕೊಡಲ್ಪಟ್ಟ ನಾಮಧೇಯ. ’ಸಾಯಿ’ ಎನ್ನುವ ಪದವು ಪರ್ಶಿಯದ ಭಾ?ಯಲ್ಲಿ ಸೂಫಿ ಸಂತರುಗಳಿಗೆ ಕೊಡುತ್ತಿದ್ದ ಒಂದು ಬಿರುದು ಆಗಿತ್ತು. ಆ ಭಾ?ಯಲ್ಲಿ ’ಸಾಯಿ’ ಎಂದರೆ ’ಬಡವ್ಯಕ್ತಿ’ ಎಂದರ್ಥ. ಬಂಜಾರಾ ಭಾ?ಯಲ್ಲಿ ’ಸಾಯಿ’ ಎಂದರೆ ’ಒಳ್ಳೆಯ’ ಎಂಬ ಅರ್ಥವಿದೆ. ’ಬಾಬಾ’ ಎಂದರೆ ಭಾರತೀಯ ಭಾ?ಯಲ್ಲಿ ತಂದೆಯ ತಂದೆಯ (ತಾತ) ಸ್ಥಾನ ಅಥವಾ ಹಿರಿಯರು ಎಂಬ ಅರ್ಥವಿದೆ. ಹೀಗಾಗಿ ’ಸಾಯಿಬಾಬಾ’ ಎಂದರೆ ’ಒಳ್ಳೆಯ ಗುರು’, ’ಪವಿತ್ರ ಗುರು’, ’ಸಂತ ಪಿತಾಮಹ’ ಎಂಬೆಲ್ಲ ಅರ್ಥಗಳು ಹೊಮ್ಮುತ್ತವೆ. ’ಸಾಯಿ’ ಎಂದರೆ ’ದೈವ’ ಎಂಬ ಅರ್ಥವೂ ಇದೆ. ಪ್ರಥಮ ಬಾರಿಗೆ ಅವರು ಶಿರಡಿಗೆ (ಮಹಾರಾ?ದ ಒಂದು ಗ್ರಾಮ) ಬಂದಾಗ ಅಲ್ಲಿಯ ’ಖಂಡೋಬಾ’ ದೇವಳದ ಆಗಮಿಕ ಅರ್ಚಕರು ಅವರನ್ನು ಕಂಡು ’ಯಾ ಸಾಯಿ’ ಎಂದು ಉದ್ಗರಿಸಿದರಂತೆ. (ಯಾ ಸಾಯಿ = ಬನ್ನಿ, ಸುಸ್ವಾಗತ ಎಂಬರ್ಥದಲ್ಲಿ). ಅಂದಿನಿಂದ ಅವರ ಹೆಸರು ’ಸಾಯಿಬಾಬಾ’ ಎಂದೇ ನೆಲೆನಿಂತುಬಿಟ್ಟಿತು. ’ಸಾಯಿ ಸಚ್ಚರಿತ್ರೆ’ ಗ್ರಂಥದಲ್ಲಿ ದಾಖಲಾಗಿರುವ ಪ್ರಕಾರ ಸಾಯಿಬಾಬಾ ತಮ್ಮ ೧೬ನೇ ವಯಸ್ಸಿನಲ್ಲಿ ಶಿರಡಿ ಪ್ರವೇಶ ಮಾಡಿದರು. ಶಿರಡಿ ಗ್ರಾಮವು ಈಗಿನ ಮಹಾರಾ? ರಾಜ್ಯದ ಅಹಮದ್ನಗರ ಜಿಲ್ಲೆಯಲ್ಲಿದೆ.
’ಶಿರಡಿ’ಗೂ ಸಾಯಿಬಾಬಾರಿಗೂ ನಂಟಾಗಿ ಶಿರಡಿಯು ಅವರ ಹೆಸರಿಗೆ ಮುಂದೆ ಅಂಟಿಕೊಂಡುಬಿಟ್ಟಿತು. ಹದಿಹರೆಯದ ಸಾಯಿಬಾಬಾ ಶಿರಡಿಗೆ ಬಂದು ಖಂಡೋಬಾ ದೇವಳದ ಹತ್ತಿರದ ಒಂದು ಬೇವಿನ ಮರದಡಿಯಲ್ಲಿ ಧ್ಯಾನಸ್ಥರಾಗಿ ಕುಳಿತಿದ್ದುದನ್ನು ಶಿರಡಿಯ ನಿವಾಸಿಗಳು ಕಂಡರು. ಚಿಕ್ಕ ವಯಸ್ಸಿನ, ತೇಜೋಮಯನಾಗಿದ್ದ ಈ ಬಾಲಕನಾರೆಂದು ತಿಳಿಯಲು ಗ್ರಾಮಸ್ಥರು ಕುತೂಹಲಗೊಂಡರು. ಅ? ಎಳೆಯ ವಯಸ್ಸಿನಲ್ಲಿಯೇ ಗಾಳಿ, ಮಳೆ, ಇರುಳು ಹಗಲೆನ್ನದೆ ಯಾವ ಹವೆಯ ವೈಪರೀತ್ಯಕ್ಕೂ ಹೆದರದೆ ಒಂದೇ ಸಮನೆ ಧ್ಯಾನಮಗ್ನನಾಗಿರುತ್ತಿದ್ದ ಈತನನ್ನು ಕಂಡು ಆಶ್ಚರ್ಯ, ಗೌರವ ಬೆರೆತ ಮನಸ್ಸುಗಳಿಂದ ಈ ಹುಡುಗನನ್ನು ಉಪಚರಿಸಲು ಮುಂದಾದರು. ಯಾರು ಈ ಬಾಲಕ? ಎಲ್ಲಿಂದ ಬಂದಾತ? ಏನು ಜನ್ಮವೃತ್ತಾಂತ? ಯಾರ ಪುತ್ರ? – ಎಂಬಿತ್ಯಾದಿ ಗ್ರಾಮಸ್ಥರ ಕುತೂಹಲಭರಿತ ನೂರೆಂಟು ಪ್ರಶ್ನೆಗಳಿಗೆ ಆ ಬಾಲಕ ಉತ್ತರಿಸಲು ಮುಂದಾಗಲಿಲ್ಲ. ಬರಿಯ ಮಂದಸ್ಮಿತದ ಶುಭ್ರನಗೆಯೊಂದೇ ಅವರಿಗೆಲ್ಲ ದೊರೆತ ಉತ್ತರವಾಗಿತ್ತು.
ಕೆಲಕಾಲ ಅಲ್ಲಿಯೆ ತಂಗಿದ್ದ ಬಾಬಾರನ್ನು ಜನ ಬಂದು ಸಂಧಿಸುತ್ತಿದ್ದರೆನ್ನಲಾಗಿದೆ. ಆದರೆ ಸಮಾಜದಲ್ಲಿ ವಿಚಿತ್ರ ಮನೋಭಾವನೆಯ ಜನರೂ ಇರುತ್ತಾರೆ. ಎಲ್ಲಿಂದಲೋ ಬಂದು ಅರಳೀಕಟ್ಟೆಯ ಧ್ಯಾನಮೌನಗಳಲ್ಲಿ ಕುಳಿತಿರುವ ಈ ತರುಣ ಹುಚ್ಚನಿರಬೇಕೆಂದು ಕೆಲವು ಜನರು ಭಾವಿಸಿ ಅವರೆಡೆಗೆ ಕಲ್ಲುಗಳನ್ನು ತೂರಿ ಹಿಂಸಿಸಿದ್ದೂ ನಡೆಯಿತು. ಮೌನವೇ ಅವರಿಗೂ ಉತ್ತರವಾಗಿದ್ದು, ಬಾಬಾ ಬೇರೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿರಲಿಲ್ಲ. ಆದರೆ ಅಲ್ಲಿದ್ದಾಗ ಅಲ್ಲಿನ ಖಂಡೋಬಾ ದೇವಾಲಯದ ಅರ್ಚಕರಾದ ಮಹಾಲ್ಸಾಪತಿ ಮತ್ತು ದೈವಭಕ್ತಿಭೀರು ಎನಿಸಿದ್ದ ಬಯಿಜಾಬಾಬಯಿ ಇಬ್ಬರೂ ತರುಣ ಬಾಬಾರನ್ನು ಅಕ್ಕರೆಯಿಂದ ನೋಡಿಕೊಂಡರು. ’ಯಾ ಸಾಯಿ’ ಎಂದು ಉದ್ಗರಿಸುತ್ತ ಮೊತ್ತಮೊದಲು ಸಾಯಿ ಎಂದು ತೇಜಸ್ವೀ ಬಾಲಕನನ್ನು ಕರೆದವರೇ ಮಹಾಲ್ಸಾಪತಿ. ಸ್ವಲ್ಪ ಕಾಲ ಮಾತ್ರವೇ ಇಲ್ಲಿದ್ದ ಬಾಬಾರವರು ಕೆಲವು ಪವಾಡಗಳನ್ನು ಮೆರೆದರೆನ್ನಲಾಗಿದೆ. ಆನಂತರ ಇದ್ದಕ್ಕಿದ್ದಂತೆ ಒಂದುದಿನ ಶಿರಡಿಯಿಂದ ನಿರ್ಗಮಿಸಿಬಿಟ್ಟರು.
ಜನ್ಮವೃತ್ತಾಂತ, ಬಾಲ್ಯ, ಗುರುಶಿಷ್ಯ ಸಂಬಂಧ
ಶ್ರೀ ಸಾಯಿಬಾಬಾರ ಮಾತಾಪಿತೃಗಳು ಯಾರು? ಅವರ ನಿಜವಾದ ಜನ್ಮದಿನಾಂಕವೇನು? – ಎಂಬ ವಿಚಾರಗಳು ಯಾರಿಗೂ ಸ್ಪ?ವಾಗಿ ತಿಳಿದಿಲ್ಲ. ಇತಿಹಾಸದ ಪುಟಗಳಲ್ಲಿ ಅವರ ಬಗೆಗಿನ ಕೆಲವು ಮಾಹಿತಿಗಳು ಲಭ್ಯವಿವೆ. ಸಾಯಿಬಾಬಾ ಜೀವನಚರಿತ್ರೆ ಬರೆದಿರುವ ನರಸಿಂಹಸ್ವಾಮಿಜೀಯವರು ಸಾಯಿಬಾಬಾ ಬ್ರಾಹ್ಮಣದಂಪತಿಗಳಿಗೆ ಜನಿಸಿದವರೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ರಾಹ್ಮಣ ಕುಲದಲ್ಲಿ ಜನಿಸಿದರೂ ಫಕೀರರೊಬ್ಬರ ಆಶ್ರಯದಲ್ಲಿ ಬೆಳೆದವರಾದ್ದರಿಂದ ತಮ್ಮ ನಡವಳಿಯಲ್ಲಿ ಮುಸ್ಲಿಂ ಜನಾಂಗದ ಕೆಲವು ಆಚರಣೆಗಳನ್ನೂ ಒಳಗೂಡಿಸಿಕೊಂಡಿರಬಹುದು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಏನೇ ಆದರೂ ’ಸಾಯಿ ಸಚ್ಚರಿತ್ರೆ’ಯಲ್ಲಿ ಬಾಬಾರ ಜನ್ಮವೃತ್ತಾಂತವು ನಮೂದಿತವಾಗಿಲ್ಲ, ಅವರ ಪೂರ್ವಾಶ್ರಮದ ಸಂಬಂಧಗಳ ಬಗ್ಗೆ ಯಾವುದೇ ನಿಖರ ಉಲ್ಲೇಖಗಳೂ ಇಲ್ಲ. ಈ ಎಲ್ಲ ವಿಚಾರಗಳಲ್ಲಿ ಕೆಲವು ಆಪ್ತ ಭಕ್ತರು ಅವರನ್ನೇ ವಿಚಾರಿಸಿದರೂ ಉತ್ತರ ಕೊಡಲು ಬಾಬಾರವರು ನಿರಾಕರಿಸಿದ್ದನ್ನು ಹಲವು ಭಕ್ತರೇಒಪ್ಪಿಕೊಂಡಿದ್ದಾರೆ. ಆದರೆ ಕೆಲವು ಪುಸ್ತಕಗಳಲ್ಲಿ ಅವರ ಬಗೆಗಿನ ಕೆಲವು ಬಾಲ್ಯವಿಶೇ?ಗಳನ್ನು ಕೆಲವರು ದಾಖಲಿಸುತ್ತಾರೆ.
ಆ ದಾಖಲೆಗಳ ಪ್ರಕಾರ ದೊರೆಯುವ ಬಾಬಾರ ಜನ್ಮವೃತ್ತಾಂತ ಇಂತಿದೆ:
ಭಾರತದೇಶದ ಮಧ್ಯಭಾಗದಲ್ಲಿರುವ ನೈಜಾಮ ಆಧಿಪತ್ಯದ ಎಂಬ ಪ್ರದೇಶದಲ್ಲಿರುವ ’ಪತ್ತಿ’ ಎಂಬ ಗ್ರಾಮದಲ್ಲಿ ನಂದಲಾಲನೆಂಬ ದ್ವಿಜೋತ್ತಮನೂ ಅವನ ಪತ್ನಿಯಾದ ಸಾಧ್ವಿ-ಸುಶೀಲೆಯಾದ ಜಮುನಾಬಾಯಿ ಎಂಬಾಕೆಯೂ ವಾಸಿಸುತ್ತಿದ್ದರು. ತೀರಾ ಬಡತನದ ಬವಣೆಯಲ್ಲಿ ದಿನಗಳೆಯುತ್ತಿದ್ದರು. ’ನೀರಿಲ್ಲದೆಡೆ ಬಾಯಾರಿಕೆ ಹೆಚ್ಚು, ಬಡತನಕ್ಕೆ ಮಕ್ಕಳು ಹೆಚ್ಚು’ ಎಂಬೊಂದು ಗಾದೆಯಂತೆ ದಂಪತಿಗಳಿಗೆ ಸಾಲಾಗಿ ಐದು ಮಕ್ಕಳು ಜನಿಸಿದರು. ಅವರಿಗೆ ಆರನೆಯ ಬಾರಿ ಗರ್ಭ ಕಟ್ಟಿ ಮತ್ತೆ ಜನಿಸಿದ ಮಗುವೇ ದೈವಾಂಶಸಂಭೂತವಾದ, ಬಾಬಾ ಎಂದು ಮುಂದೆ ಖ್ಯಾತಿ ಪಡೆದ ಮಗು. ಈ ಕಂದ ದೈವಾಂಶಸಂಭೂತವಾದರೂ ಭೂಸ್ಪರ್ಶವಾದ ಮೇಲೆ ಸೃಷ್ಟಿಚಕ್ರಕ್ಕೆ ಅನುಗುಣವಾಗಿಯೇ ಬೆಳೆಯಬೇಕಿತ್ತು. ಹುಟ್ಟಿದೊಡನೆ ಒಂದೇ ಸಮನಾಗಿ ರೋದನ ಆರಂಭಿಸಿತು. ಆರಂಭದಲ್ಲಿ ಇದು ಶಿಶುವಿನ ಸಹಜರೋದನ ಎಂದೇ ದಂಪತಿಗಳು ಭಾವಿಸಿ ಸುಮ್ಮನಾಗಿದ್ದರು. ಆದರೆ ಇದು ದಿನಗಳೆದಂತೆ ಸಮಸ್ಯೆಯಾಗಿ ಕಾಡಲಾರಂಭಿಸಿತು.
ಹಸಿವಿರಲಿ, ಹೊಟ್ಟೆ ತುಂಬಿರಲಿ, ಜೋಗುಳ ಹಾಡಲಿ ಹಾಡದಿರಲಿ, ಎತ್ತಿಕೊಂಡಿರಲಿ ಕೆಳಗೆ ಬಿಟ್ಟಿರಲಿ, ಮಗು ಅಳುವನ್ನೆ ರೂಢಿಸಿಕೊಂಡು ಸದಾ ರೋದಿಸುತ್ತಿತ್ತು. ಒಂದು ಕಡೆ ಮನೆ ತುಂಬ ದಾರಿದ್ರ್ಯ, ಮತ್ತೊಂದೆಡೆ ಮನೆ ತುಂಬ ಹಸಿವಿನಿಂದ ಕಂಗಾಲಾದ ಮಕ್ಕಳು – ಎಲ್ಲ ಸೇರಿ ಈ ಮಗುವಿನ ನಿರಂತರ ರೋದನದಿಂದಲೂ ದಂಪತಿಗಳು ಹತಾಶರಾದರು. ಕಡೆಗೊಮ್ಮೆ ಯಾರೋ ಮಗುವನ್ನು ಸೂಫಿ ಫಕೀರನೊಬ್ಬನ ಬಳಿ ಕೊಂಡೊಯ್ಯಲು ಸೂಚಿಸಿದರು. ಅದರಂತೆ ಆ ಬಡಬ್ರಾಹ್ಮಣ ದಂಪತಿಗಳು ತಮ್ಮ ಈ ಎರಡು ವ?ದ ಮಗುವನ್ನು ಫಕೀರನಲ್ಲಿಗೆ ಕರೆದೊಯ್ದರು. ಸದಾ ಅಳುತ್ತಿದ್ದ ಆ ಮಗುವನ್ನು ಕಂಡು ಫಕೀರನಿಗೆ ಏನನ್ನಿಸಿತೋ ಏನೋ; ದಿವ್ಯಶಕ್ತಿ ಆ ಮಗುವಿನಲ್ಲಿ ಅಡಗಿದೆ ಎಂತಲೂ ಭಾಸವಾಯಿತು. ಆ ಮಗುವನ್ನು ಪ್ರೀತಿಯಿಂದ ಎತ್ತಿಕೊಂಡನು. ಆಕಾಶ, ಭೂಮಿ ಒಂದು ಮಾಡಿ ಅಳುತ್ತಿದ್ದ ಆ ಮಗು ಅವನ ತೋಳಿಗೆ ಬರುತ್ತಿದ್ದಂತೆ ಅಳು ನಿಲ್ಲಿಸಿ ಸುಮ್ಮನಾಗಿಬಿಟ್ಟಿತು. ಫಕೀರನನ್ನು ಕಂಡು ಸಮ್ಮೋಹಕವಾದ ನಗೆ ಬೀರಿತು. ಈ ಮಗುವನ್ನು ನನಗೆ ಕೊಡಿ ಅಮ್ಮಾ, ಸಾಕಿಕೊಳ್ಳುತ್ತೇನೆ ಎಂದು ಫಕೀರನು ಕೋರಿದನು. ದಂಪತಿಗಳು ತಮ್ಮ ತಮ್ಮಲ್ಲೇ ಚರ್ಚಿಸಿಕೊಂಡು ಹೇಗಾದರೂ ಮಗು ಸುಖವಾಗಿರಲಿ, ನಮ್ಮ ದಾರಿದ್ರ್ಯದ ಝಳ ಅವನನ್ನು ತಾಗುವುದು ಬೇಡ ಎಂದು ನಿಶ್ಚಯಿಸಿಕೊಂಡು ಮಗುವನ್ನು ಫಕೀರ ದಂಪತಿಗಳಿಗೇ ಕೊಟ್ಟುಬಿಡಲು ಒಪ್ಪಿದರು.
ಅವತಾರಪುರು?ರ ಬದುಕೇ ಹಾಗೆ, ದೈವಲೀಲೆ ಅವರನ್ನು ಎತ್ತಲೋ ಹೇಗೋ ಕರೆದೊಯ್ಯುತ್ತ ಮುನ್ನಡೆಸುತ್ತದೆ. ಸಾಧುಸಂತ ಸತ್ಪುರು?ರು ಎಲ್ಲಿ ಹೇಗೆ ಯಾರ ಮಡಿಲಲ್ಲಿ ಬೆಳೆದು ಲೋಕಕಲ್ಯಾಣದಲ್ಲಿ ತೊಡಗಿಕೊಳ್ಳುತ್ತಾರೆ ಎನ್ನುವುದು ಆ ನಿಯಾಮಕನೊಬ್ಬನಿಗೇ ಗೊತ್ತು.
ಸೂಫಿ ಫಕೀರನು ತಮ್ಮ ಮತಪದ್ಧತಿಯಂತೆಯೇ ಮಗುವನ್ನು ಬೆಳೆಸುತ್ತಾ, ಅಕ್ಕರೆಯ ವ?ಧಾರೆಯನ್ನೇ ಮಗುವಿನ ಮೇಲೆ ಹರಿಸಿದ. ತಮ್ಮ ಮತಾಚಾರಗಳನ್ನು ಹೇಳಿಕೊಟ್ಟ. ಅನೇಕ ಮಹಾತ್ಮರ, ಸಂತರ ಕಥೆಗಳನ್ನು ಹೇಳುತ್ತ ಬಾಲಕನನ್ನು ಬೆಳೆಸಿದ. ಸಂತ ಕಬೀರರ ದೋಹೆಗಳನ್ನು ಹಾಡುತ್ತಾ ಕುಣಿಯುತ್ತಾ ಅದನ್ನೇ ಬಾಲಕನಿಗೂ ಹೇಳಿಕೊಡಲಾರಂಭಿಸಿದ. ನಾಲ್ಕು ವ?ದ ಮಗು ಕಾಲಿಗೆ ಗೆಜ್ಜೆ ಕಟ್ಟಿ ಬಾಪು ಹೇಳಿಕೊಟ್ಟಂತೆ ಕಬೀರರ ದೋಹೆಗಳನ್ನು ಹಾಡುತ್ತಾ ಕುಣಿಯುತ್ತಾ ನರ್ತಿಸುವುದನ್ನು ನೋಡುವುದಕ್ಕೆ ಕಣ್ಣುಗಳೆರಡು ಸಾಲದೆಂಬಂತಾಯಿತು. ಮುಂದೆ ಬಾಲಕನಿಗೆ ದೋಹೆಗಳು ಕಂಠಸ್ಥವೂ ಆಗಿ ಅರ್ಥಸಹಿತವಾಗಿ ಹೃದಯಸ್ಥವೂ ಆಗಿಬಿಟ್ಟತು. ಸೂಫಿ ಮತಸಂಪ್ರದಾಯದ ಅನೇಕ ಆಧ್ಯಾತ್ಮಿಕ ವಿ?ಯಗಳು, ದೋಹೆಗಳು ತೆರೆತೆರೆದು ನೀಡುವ ಹೊಸಹೊಸ ಅರ್ಥಗಳು ಎಲ್ಲವೂ ಹುಡುಗನಿಗೆ ಹೃದಯವೇದ್ಯವಾಗಿಬಿಟ್ಟಿತು. ಕಬೀರನನ್ನು ಗುರುವೆಂದು ಅಪಾರವಾಗಿ ಪ್ರೀತಿಸುತ್ತಿದ್ದ ಫಕೀರನು ಹುಡುಗನ ಜ್ಞಾನ, ಭಕ್ತಿ, ಜಾಣತನ, ಪ್ರತಿಭೆಗಳನ್ನು ಕಂಡು ಅನೇಕಬಾರಿ ನನ್ನ ಗುರು ಕಬೀರರ ಇನ್ನೊಂದು ಅವತಾರವೇ ನೀನು ಎಂದು ಅವನನ್ನು ಬಿಗಿದಪ್ಪಿ ಮುದ್ದಿಸಿ ಆನಂದಾಶ್ರುಭರಿತನಾಗುತ್ತಿದ್ದನು. ಫಕೀರ ದಂಪತಿಗಳ ಕಣ್ಮಣಿಯಾಗಿ ಬಾಬಾ ಬೆಳೆದರು.
ಬಾಲ್ಯಕಾಲದಲ್ಲಿ ಬಾಬಾರ ಪಾಲನೆ ಮಾಡಿದ್ದ ಸೂಫಿ ಫಕೀರ ಸಂತ ಕಬೀರ ದಾಸರೇ ತನ್ನ ಗುರುವೆಂದು ತಿಳಿದು ಅವರ ದೋಹೆಗಳನ್ನು ಹಾಡುತ್ತಾ ಅವುಗಳ ಅರ್ಥವನ್ನು ಜನರಿಗೆ ತಿಳಿಹೇಳುತ್ತಾ ಆಧ್ಯಾತ್ಮಿಕ ಹಾಡು, ಪ್ರವಚನಗಳ ಹಾದಿಯಲ್ಲಿದ್ದವನು. ಪತ್ತಿ ಗ್ರಾಮದಿಂದ ಕೆಲವೇ ಮೈಲುಗಳ ದೂರದಲ್ಲಿರುವ ’ಮನ್ವತ್’ ಗ್ರಾಮದಲ್ಲಿದ್ದವನು. ಫಕೀರ ದಂಪತಿಗಳಿಗೆ ಮಕ್ಕಳಿರಲಿಲ್ಲ. ಅವನ ಪತ್ನಿ ತನಗೆ ಸಂತಾನಭಾಗ್ಯವಿಲ್ಲವೆಂದು ತುಂಬ ಕೊರಗುತ್ತಿದ್ದಾಕೆ. ಸುತ್ತಮುತ್ತಲಿನವರು ಆಕೆಯನ್ನು ಬಂಜೆ ಎಂದು ನಿಂದಿಸುತ್ತಿದ್ದರು.
ಬಾಲಕ ಬಾಬಾ ಮಠ, ಮಂದಿರ, ಮಸೀದಿ ಎಂದು ಬೇಧಭಾವ ತೋರದೆ ಎಲ್ಲ ಕಡೆಗೂ ಹೋಗುವುದು, ಅಲ್ಲಿನ ಪೂಜೆ ಪ್ರವಚನಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸುವುದು ಈ ರೀತಿಯಲ್ಲಿ ಬೆಳೆದರು. ಕೆಲವು ಸಾಂಪ್ರದಾಯಿಕರು ಇದನ್ನು ವಿರೋಧಿಸಿ ಮಡಿವಂತಿಕೆ ತೋರಿದಾಗ ಬಾಲಕ ಬಾಬಾ ’ದೇವರಿರುವುದು ಒಬ್ಬನೇ ತಾನೆ? ಅವನನ್ನು ಅಲ್ಲೇ ಇಲ್ಲೇ ಎಂದು ಯಾಕೆ ಕಟ್ಟಿಹಾಕುತ್ತೀರಿ? ಎಲ್ಲ ಕಡೆಯೂ ಇರುವುದು ಒಬ್ಬನೇ ದೇವರು ಎಂದು ನಿರ್ಭಿಡೆಯಿಂದ ಉತ್ತರಿಸುತ್ತಿದ್ದರು. ಅವರವರ ಭಾವಕ್ಕೆ ಅವರವರನ್ನು ಬಿಟ್ಟುಬಿಡಿ.. ಎಲ್ಲೆಡೆಯೂ ಅವನೊಬ್ಬನೇ ಇರುವುದು, ಅವನೇ ಇರುತ್ತಾನೆ. ದೇವರು ಒಬ್ಬನೇ, ಅವನೇ ಜಗತ್ತಿನ ಏಕೈಕ ಮಾಲೀಕ ಎಂದು ವಾದಿಸುತ್ತಿದ್ದರು. ಯಾವುದೇ ಮಾತಿನಿಂದಾಗಲಿ, ಕೃತಿಯಿಂದಾಗಲಿ, ಜ್ಞಾನದಿಂದಾಗಲಿ ಈ ಹುಡುಗನನ್ನು ಗೆಲ್ಲಲು ಸಾಧ್ಯವಾಗದೆ ಆ ಸಂಪ್ರದಾಯಮತಸ್ಥರು ಇವನೊಬ್ಬ ಹುಚ್ಚನೇ ಸರಿ, ಆ ಫಕೀರ ಈ ಹುಚ್ಚು ಹುಡುಗನನ್ನು ಸಾಕಿಕೊಂಡಿದ್ದಾನೆ ಎಂದು ಗೊಣಗಿಕೊಂಡು ಸುಮ್ಮನಾಗಿದ್ದರು.
ಮುಂದೆ ಕಾಲಕ್ರಮೇಣ ಸೂಫಿ ಫಕೀರನಿಗೆ ಮರಣಕಾಲ ಸನ್ನಿಹಿತವಾಯಿತು. ಮರಣಶಯ್ಯೆಯಲ್ಲಿದ್ದಾಗ ತನ್ನ ಪತ್ನಿಯನ್ನು ಕರೆದು, ನಮ್ಮ ಮಗ ಸಾಮಾನ್ಯನಲ್ಲ, ಅವನು ಸಿದ್ಧಪುರು?. ಜನರೆಲ್ಲ ನಾನು ಅವನಿಗೆ ಗುರು ಎಂದು ಭಾವಿಸಿದ್ದಾರೆ. ಆದರೆ ನಿಜಕ್ಕೂ ಅವನೇ ನನಗೆ ಗುರು. ಒಬ್ಬ iಹಾಪುರು?ನನ್ನು ಮಗುವಾಗಿ ಪಡೆದು ಅವನ ಬಾಲ್ಯವನ್ನು ರೂಪಿಸುವ ಅದೃ?ವನ್ನು ದೇವರು ನನಗೆ ಕರುಣಿಸಿರುವ ತೃಪ್ತಿ ನನಗೆ ಇದೆ. ನನಗೆ ಮರಣಕಾಲ ಸಮೀಪವಾಗಿದೆ. ಮರಣದ ನಂತರ ನೀನು ಮಹಾರಾ?ದ ’ಸೈಲೂ’ ಗ್ರಾಮಕ್ಕೆ ಹೋಗು. ಅಲ್ಲಿ ವೆಂಕಟೇಶ್ವರಸ್ವಾಮಿಯ ಪರಮಭಕ್ತ ’ವೆಂಕೂಸಾ’ ಎಂಬಾತನಿದ್ದಾನೆ. ಅವನಲ್ಲಿಗೆ ಹೋಗಿ ನಿನ್ನ ಮಗನನ್ನು ಅವನಲ್ಲಿಗೆ ಬಿಡು. ಮುಂದಿನ ಹೊಣೆ ಅವನು ಹೊರುತ್ತಾನೆ ಎಂದು ಹೇಳಿ ಪ್ರಾಣಬಿಟ್ಟನು.
ಇದೇ ಕಾಲದಲ್ಲಿ ಉತ್ತರಭಾರತದ ತೀರ್ಥಕ್ಷೇತ್ರಗ
ಯಾತ್ರೆ ಮುಗಿಸಿ ಬಂದಿದ್ದ ವೆಂಕೂಸಾ ಅಂದು ತಮ್ಮ ಪೂಜಾಗೃಹದಲ್ಲಿ ಧ್ಯಾನಸ್ಥರಾಗಿ ಕುಳಿತಿದ್ದಾಗ ಶ್ರೀ ವೆಂಕಟೇಶ್ವರಸ್ವಾಮಿಯ ವಿಗ್ರಹದ ಎದುರು ಸುಂದರ ಬಾಲಕನೋರ್ವ ಕುಳಿತಿರುವುದನ್ನು ಕಂಡು ಚಕಿತಗೊಂಡರು. ಅವರ ಅಂತರ್ವಾಣಿ ಆಗ ವೆಂಕೂಸಾ.. ಗುರುವಿನ ಗುರುವಾಗಿ ನಿನ್ನ ಗುರುಸ್ಥಾನದಲ್ಲಿರುವ ಮಹಾತ್ಮನೂ, ಲೋಕಕಲ್ಯಾಣಕ್ಕಾಗಿ ಅವತಾರವೆತ್ತಿದವನೂ ಆದ ದತ್ತಾವತಾರಿ ಸಮರ್ಥ ಸದ್ಗುರುವು ಈಗ ನಿನ್ನ ಶಿ?ನಾಗಲು ಬರುತ್ತಿದ್ದಾನೆ. ಸ್ವೀಕರಿಸಲು ಸಿದ್ಧನಾಗು ಎಂದು ನುಡಿದು ಬೆಳಕನ್ನು ತುಂಬಿತು.
ಸಾಯಿಬಾಬಾ – ಇತಿಹಾಸಮೂಲಗಳು
ಗೋವಿಂದರಾವ್ ರಘುನಾಥ ದಾಭೋಲ್ಕರ್, ಆಚಾರ್ಯ ಎಕ್ಕೀರಾ ಭಾರದ್ವಾಜ್, ಸ್ಮೃತಿ ಶ್ರೀನಿವಾಸ, ಅಂತೋನಿಯೋ ರಿಗೋಪೊಲಾಸ್ ಇವರುಗಳು ಪ್ರಮುಖವಾಗಿ ಸಾಯಿಬಾಬಾ ಜೀವನಚರಿತ್ರೆಕಾರರು.
ಇವರಿಗೆ ದೊರೆತ ಮೂಲ ದಾಖಲೆ ಎಂದರೆ ಶಿರಡಿಯಲ್ಲೇ ದೊರೆತ ಒಂದು ಡೈರಿ. ಗಣೇಶ ಶ್ರೀಕೃ? ಕಪರ್ದೆ ಎನ್ನುವಾತ ಈ ಡೈರಿಯನ್ನು ಬರೆದಿದ್ದವರು. ಇವರು ಪ್ರತಿದಿನವೂ ಶಿರಡಿಯಲ್ಲೇ ಇದ್ದುಕೊಂಡು ಡೈರಿಯನ್ನು ಬರೆದಿದ್ದಾರೆ ಎನ್ನಲಾಗಿದೆ.
ಪತಿಯ ಅಂತಿಮ ಸಂಸ್ಕಾರಗಳನ್ನು ಮುಗಿಸಿದ ಮೇಲೆ ಅವರ ಕೊನೆಯ ಆಸೆ ಪೂರೈಸಲು ಫಕೀರನ ಪತ್ನಿ ಬಾಲಕ ಬಾಬಾರನ್ನು ಕರೆದುಕೊಂಡು ಮನ್ವತ್ ಗ್ರಾಮವನ್ನು ಬಿಟ್ಟು ಸೈಲೂ ಗ್ರಾಮಕ್ಕೆ ಹೊರಟಳು. ಇತ್ತ ಅಹಮದಾಬಾದ್ನಲ್ಲಿ ಪ್ರಖ್ಯಾತವಾದ ಸಾವದ್ಗಾಹೀ ಎಂಬ ಮುಸ್ಲಿಂ ದರ್ಗಾವನ್ನು ಸಂದರ್ಶಿಸಿ ಬರಲೆಂದು ವೆಂಕೂಸಾ ಹೋದರು. ಆಗಲೂ ದರ್ಗಾದಿಂದ ಅವರಿಗೆ ಅಶರೀರವಾಣಿಯೊಂದು ಕೇಳಿಬಂದಿತು: ನೀನು ರಮಾನಂದ ಯೋಗಿಯಾಗಿದ್ದ ಕಾಲದಲ್ಲಿ ನಿನ್ನ ಪ್ರಿಯ ಶಿ?ನಾಗಿದ್ದ ’ಕಬೀರ’ನ ಅಂಶವನ್ನೇ ಹೊತ್ತಿರುವ ಬಾಲಕನೊಬ್ಬ ಮನ್ವತ್ ಗ್ರಾಮದಿಂದ ಬರುತ್ತಿದ್ದಾನೆ. ಅವನನ್ನು ನಿನ್ನ ಎತ್ತರಕ್ಕೆ ತಿದ್ದಿತೀಡಿ ನಿನ್ನ ಜನ್ಮವನ್ನು ಸಾರ್ಥಕಪಡಿಸಿಕೋ. ಇದನ್ನು ಕೇಳಿ ಅಚ್ಚರಿ, ಸಂಭ್ರಮಗಳಿಂದ ವೆಂಕೂಸಾ ಬೇಗಬೇಗನೆ ತಮ್ಮ ಊರಿಗೆ, ಮನೆಗೆ ಹಿಂದಿರುಗಿ ಬಂದರು.
ಫಕೀರನ ಪತ್ನಿ ಮತ್ತು ಬಾಲಕ ಬಾಬಾರಿಗೆ ವೆಂಕೂಸಾ ಮನೆಯಲ್ಲಿ ಭೇಟಿ ಒದಗಿತು. ಸೂಕ್ತ ರೀತಿಯಲ್ಲಿ ತಾಯಿ ಮಗನನ್ನು ಉಪಚರಿಸಿ ಬಾಲಕನನ್ನು ತಮ್ಮ ಮನೆಯಲ್ಲೇ ಇಟ್ಟುಕೊಳ್ಳುವುದಾಗಿ ತಿಳಿಸಿ ಬೇಗಂಗೆ ಕೋಟೆಯಲ್ಲೇ ವಸತಿಯ ಅನುಕೂಲ ಕಲ್ಪಿಸಿಕೊಟ್ಟರು ವೆಂಕೂಸಾ. ಮುಂದೆ ಬಾಲಕನಿಗೆ ವೇದವಿದ್ಯೆ, ವೇದಾಂತಸಾರ ಇತ್ಯಾದಿ ಬೋಧಿಸುತ್ತ ಅಧ್ಯಾತ್ಮವಿದ್ಯೆ ತಿಳಿಹೇಳಲಾರಂಭಿಸಿದರು. ಪ್ರಿಯಶಿ?ನಿಗೆ ಯೋಗಶಾಸ್ತ್ರ, ಕುಂಡಲಿನೀ ಯೋಗದ ಬಗ್ಗೆಯೂ ಪ್ರಾತ್ಯಕ್ಷಿಕೆ ಸಮೇತ ಪರಿಜ್ಞಾನವನ್ನು ಧಾರೆಯೆರೆದರು. ಪ್ರಾಣಾಯಾಮ, ಯೋಗಾಸನಗಳು, ಸೂರ್ಯೋಪಾಸನೆ ಈ ಎಲ್ಲವನ್ನೂ ಹೇಳಿಕೊಟ್ಟರು. ಗುರುವಿಗೆ ತಕ್ಕ ಶಿ?ನೆನಿಸಿಕೊಂಡು ಬಾಬಾ ಎಲ್ಲ ವಿದ್ಯೆಗಳಲ್ಲೂ ಪರಿಣತರಾಗಿ ಜ್ಞಾನಸಂಪನ್ನರಾದರು. ಬಾಬಾರ ತಾಯಿ, ಫಕೀರರ ಬೇಗಂ ’ಸೈಲೂ’ಗೆ ಬಂದು ಎರಡು ವ?ಗಳು ಮಾತ್ರ ಬದುಕಿದ್ದು ತದನಂತರ ಅವರು ಕೊನೆಯುಸಿರೆಳೆದರು. ಬಾಲಕ ಬಾಬಾಗೆ ಪ್ರಾಪಂಚಿಕವಾಗಿ ಇದ್ದಿದ್ದ ಒಂದೇ ಒಂದು ಬಂಧುತ್ವವೂ ಸಾಕುತಾಯಿಯ ಸಾವಿನಿಂದ ಕೊನೆಗೊಂಡಿತು.
ಈಗ ಗುರು ವೆಂಕೂಸಾರವರೇ ಬಾಬಾಗೆ ಸರ್ವಸ್ವವೂ ಆಗಿ ಉಳಿದರು. ಗುರುವಿನಿಂದ ಬಾಲಕ ಆಗಮಶಾಸ್ತ್ರ, ವೇದಾಂತರಹಸ್ಯಗಳನ್ನೆಲ್ಲ ಆಳವಾಗಿ ಅಭ್ಯಸಿಸಿದರು. ವೆಂಕೂಸಾ ಅವರ ಸಮಸ್ತ ಬೋಧನೆಗಳು ಬಾಬಾರ ವ್ಯಕ್ತಿತ್ವದೊಳಗೆ ನೆಲೆಯಾಗಿ ನಿಂತವು. ತಮ್ಮ ಮೊದಲ ಗುರುವಾದ ಫಕೀರನ ಸಂಗ ಸಾನ್ನಿಧ್ಯದಿಂದ ಮುಂಚೆಯೇ ಸೂಫಿ ಸಂಪ್ರದಾಯದ ಸಾರವನ್ನೆಲ್ಲ ಗ್ರಹಿಸಿದ್ದ ಬಾಬಾ ಈಗ ಹಿಂದೂ ಮತಗ್ರಂಥಗಳಾದ ಭಗವದ್ಗೀತೆ, ರಾಮಾಯಣ, ಮಹಾಭಾರತ, ದೇವೀಭಾಗವತ, ಬ್ರಹ್ಮಾಂಡಪುರಾಣಗಳೇ ಮೊದಲ್ಗೊಂಡು ಉಪನಿ?ತ್ತುಗಳನ್ನೂ ಅಭ್ಯಸಿಸಿ ಕುಲ ಮತ ಜಾತಿ ಭೇದಭಾವವಿಲ್ಲದೆ ಜ್ಞಾನಯೋಗ ಪುರು?ರಾದರು.
ವೆಂಕೂಸಾ ಈ ತಮ್ಮ ಶಿ?ನನ್ನು ಎಲ್ಲರಿಗಿಂತ ಹೆಚ್ಚು ಇ?ಪಡುತ್ತಾರೆ, ಪ್ರೀತಿಸುತ್ತಾರೆ ಎಂಬುದು ಜೊತೆಯಲ್ಲಿನ ಸಹಪಾಠಿ ಶಿ?ವೃಂದಕ್ಕೆ ಅಸೂಯೆ ತಂದಿತ್ತು. ಅವರೆಲ್ಲ ಬಾಬಾರಿಗೆ ಪರಿಪರಿಯಾಗಿ ಹಿಂಸೆ ಕೊಡುತ್ತಿದ್ದರು. ಆದರೆ ಬಾಬಾ ಯಾವುದನ್ನೂ ಮನಸ್ಸಿಗೆ ತಂದುಕೊಳ್ಳದೆ ನಿರ್ಲಿಪ್ತಸ್ಥಿತಿಯಲ್ಲಿದ್ದು ಆವಾಹನೆಯೂ ಬೇಡ, ವಿಸರ್ಜನೆಯೂ ಬೇಡ ಎಂಬಂತಿದ್ದುಬಿಟ್ಟರು. ಸಹಪಾಠಿಗಳು ಕೊಟ್ಟ ಹಿಂಸೆಗಳನ್ನೆಲ್ಲ ನಗುಮುಖದಿಂದಲೇ ತಡೆದುಕೊಂಡರು. ಸ್ವಲ್ಪವಾದರೂ ಯಾರನ್ನೂ ಪ್ರತಿಭಟಿಸದೆ, ದ್ವೇಷಿಸದೆ, ಗುರುವಿನ ಬಳಿಗೆ ದೂರನ್ನೂ ಕೊಂಡೊಯ್ಯದೆ ತಟಸ್ಥ ಧೋರಣೆಯಲ್ಲಿದ್ದೇ ಎಲ್ಲವನ್ನೂ ಶಾಂತವಾಗಿ ಎದುರಿಸಿದರು. ಕಡೆಗೂ ಅವರ ಸೌಜನ್ಯಯುಕ್ತ ಪ್ರೀತಿ ತುಂಬಿದ ನಡವಳಿಕೆಯೇ ಅವರ ಸಹಪಾಠಿಗಳ ಮನಸ್ಸನ್ನು ಒಲಿಸಿತು, ಗೆದ್ದುಕೊಂಡಿತು.
ಸೈಲೂ ಗ್ರಾಮದ ಸಮೀಪವೇ ಇದ್ದ ಪರ್ಬಣಿ ಎಂಬ ದಟ್ಟ ಕಾಡಿಗೆ ಬಾಬಾರನ್ನು ಕರೆದೊಯ್ದು ವೆಂಕೂಸಾ ಕಾಡಿನಲ್ಲಿದ್ದ ಗುಹೆಯೊಂದರಲ್ಲಿ ಏಕಾಂತವಾಸದಲ್ಲಿ ಕುಳ್ಳಿರಿಸಿ ಯೋಗಶಾಸ್ತ್ರದ ಅತ್ಯಂತ ಕಠಿಣವಾದ ದೌತಿಯೋಗ, ಖಂಡಯೋಗವನ್ನು ಉಪದೇಶಿಸಿ ಸಾಧನೆ ಮಾಡಲು ಆದೇಶಿಸಿದರು. ಅನೇಕ ದಿನಗಳು ಈ ಗುಹೆಯಲ್ಲಿ ಏಕಾಂತವಾಸದಲ್ಲಿದ್ದು ಹದಿಮೂರರ
ವಯಸ್ಸಿನ ಬಾಲಕ ಬಾಬಾರು ತುಂಬ ಪರಿಶ್ರಮದಿಂದ ಈ ಎರಡೂ ಯೋಗಸಾಧನೆಗೈದು ಗುರುವಿನಿಂದ ಸೈ ಎನಿಸಿಕೊಂಡರು. ಮತ್ತೆ ಮುಂದಿನ ದಿನಗಳಲ್ಲಿ ಇದೇ ಗುರುವಿನ ಮಾರ್ಗದರ್ಶನದಲ್ಲಿ ಬಾಬಾರಿಗೆ ಆತ್ಮಜ್ಞಾನವೂ ಸಿದ್ಧಿಸಿತು. ತದನಂತರ ಬಾಬಾ ಗುರುವಿನ ಬಳಿ ನನಗೆ ತಂದೆ ತಾಯಿ ಗುರುದೇವ ಬಂಧು ಮಿತ್ರ ಎಲ್ಲವೂ ಆಗಿದ್ದೀರಿ. ನಾನು ನಿಮ್ಮಲ್ಲಿ ಸರ್ವಸ್ವವನ್ನೂ ಕಾಣುತ್ತಿದ್ದೇನೆ. ಇನ್ನು ಮುಂದೆ ನಾನು ನನ್ನದು ಯಾವ ಅಂಶವೂ ನನ್ನಲ್ಲಿರುವುದಿಲ್ಲ. ನಂಬಿ ಬಂದವರ ಕ? ನ? ರೋಗ-ರುಜಿನ ದುಃಖ-ದುಮ್ಮಾನಗಳನ್ನು ಪರಿಹರಿಸಲು ನನ್ನೆಲ್ಲ ವಿದ್ಯೆ ಬುದ್ಧಿ ಜ್ಞಾನ ಸಿದ್ಧಿ ಸಾಧನೆಯನ್ನು ಮುಡುಪಾಗಿಡುತ್ತೇನೆ ಎಂದು ಹೇಳಿ ಉದ್ದಂಡ ವಂದನೆಗೈದರು.
ವೆಂಕೂಸಾ ಗುರುಗಳು ಶಿ?ನನ್ನುದ್ದೇಶಿಸಿ, ಮುಂದಿನ ದಿನಗಳಲ್ಲಿ ಸಮರ್ಥ ಸದ್ಗುರು ಎನಿಸಿಕೊಳ್ಳಲಿರುವ ಪ್ರಿಯ ಶಿ?ನೆ, ನನ್ನ ಸಮಸ್ತ ಅಧ್ಯಾತ್ಮಶಕ್ತಿಯನ್ನು ನಿನಗೆ ಧಾರೆಯೆರೆಯುವ ಸಮಯ ಸನ್ನಿಹಿತವಾಗಿದೆ. ನನ್ನ ಜನ್ಮದ ಕರ್ಮಕರ್ತವ್ಯಗಳು ಪೂರ್ಣಗೊಂಡಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ನುಡಿದರು. ಅಸೂಯಾಪರರಾಗಿದ್ದ ಕೆಲವು ಕುಹಕಮನಸ್ಸಿನ ಶಿ?ರಿಗೆ ಈ ನೋಟ, ಮಾತುಗಳು ಹಿಡಿಸದಾಯಿತು. ಸಂಚು ಹೂಡಿ ಇಟ್ಟಿಗೆಯೊಂದನ್ನು ಬಾಬಾರ ಹಣೆಗೆ ತಗುಲಲೆಂದು ಬೀಸಿ ಒಗೆದರು. ಅದನ್ನು ತಮ್ಮ ಯೋಗಶಕ್ತಿಯಿಂದ ತಡೆದು ವೆಂಕೂಸಾ ಗಾಳಿಯಲ್ಲಿ ತೇಲುತ್ತ ನಿಂತಿದ್ದ ಇಟ್ಟಿಗೆಯನ್ನು ಕೈಯಲ್ಲೆತ್ತಿಕೊಂಡು ಬಾಬಾರಿಗೆ ನೀಡಿದರು. ಪ್ರಿಯ ಶಿ?ನೆ, ಇದು ನನ್ನ ಪ್ರತಿಬಿಂಬವಾಗಿ ನಿನ್ನ ಬಳಿ ಇರಲಿ. ಇದು ಎಲ್ಲಿಯವರೆಗೆ ನಿನ್ನ ಬಳಿ ಇರುತ್ತದೆಯೋ, ಅಲ್ಲಿಯವರೆಗೂ ನಿನ್ನ ಕಾರ್ಯಕರ್ತವ್ಯಗಳು ಈ ಲೋಕದಲ್ಲಿ ಇರುತ್ತವೆ ಎಂದು ತಿಳಿ. ಈ ಇಟ್ಟಿಗೆ ಭಗ್ನವಾದಂದು ನಿನಗೆ ಈ ಭೂಮಿಯ ಋಣ ತೀರುತ್ತದೆಯಾದ್ದರಿಂದ ಇದನ್ನು ಜತನದಿಂದ ಕಾಪಾಡಿಕೊಂಡಿರು ಎಂದು ನುಡಿದರು.
ಅಲ್ಲಿಯೆ ಮೇಯುತ್ತಿದ್ದ ’ಕಪಿಲೆ’ ಎಂಬ ಹಸುವಿನಿಂದ ಹಾಲು ಕರೆಯಿಸಿಕೊಂಡು ಅದೇ ಕ್ಷೀರದಲ್ಲೇ ವೆಂಕೂಸಾ ತಮ್ಮ ಯೋಗಸಾಧನೆಗಳನ್ನೆಲ್ಲ ’ಶಕ್ತಿವಿಪಾತ’ಗೊಳಿಸಿ ಪ್ರಿಯಶಿ?ನಿಗೆ ಧಾರೆಯೆರೆದರು. ಮಗೂ, ನನ್ನೆಲ್ಲ ಜ್ಞಾನಶಕ್ತಿ ಸಾಧನೆಗಳು ಈಗ ನಿಜವಾಗಿವೆ. ಇನ್ನು ಮುಂದೆ ನೀನು ವಿರಾಗಿಯಾಗಿ, ಸುಜ್ಞಾನಿಯಾಗಿ, ಪರಿಪೂರ್ಣಗುರುವಾಗಿ, ಮಾನವಕುಲಕೋಟಿಯನ್ನು ಉದ್ಧರಿಸುವ ಅವಧೂತನೂ ಮಹಾತ್ಮನೂ ಆಗಿ ವಿರಾಜಿಸು ಎಂದು ಆಶೀರ್ವದಿಸಿದರು. ಗುರುದಕ್ಷಿಣೆಯಾಗಿ ತಾನೇನು ಕೊಡಲಿ ಎಂದು ಬಾಬಾ ವಿನಂತಿಸಿದಾಗ ಪ್ರಿಯಶಿ?, ಜಾತಿ ಮತ ಕುಲ ಬಡವ ಬಲ್ಲಿದ ಯಾವುದನ್ನೂ ಲೆಕ್ಕಿಸದೆ ನಿನ್ನ ಬಳಿ ಬಂದವರ ಕ?, ಸಂಕಟ, ನೋವು, ಸಮಸ್ಯೆ, ವ್ಯಾಧಿಗಳನ್ನು ನಿವಾರಿಸು. ಮನು?, ಪ್ರಾಣಿ, ಪಕ್ಷಿ, ಜಲಚರ, ಎಲ್ಲವೂ ಒಂದೇ ಎಂಬ ಭಾವದಲ್ಲಿ ಕಾಣು. ದಿನಕ್ಕೆ ಐದು ಮನೆಯಲ್ಲಿ ಭಿಕ್ಷೆ ಬೇಡಿ ಉದರಪೋ?ಣೆಗೆ ಎ? ಬೇಕೋ ಅ? ಸ್ವೀಕರಿಸಿ ಉಳಿದಿರುವುದನ್ನು ದಾನ ಮಾಡು. ಇದೇ ನಿನ್ನ ಬದುಕಾಗಲಿ. ಇದೇ ನೀನು ನನಗೆ ಕೊಡಬೇಕಾದ ಗುರುದಕ್ಷಿಣೆ ಎಂದರು. ಇ? ಹೇಳಿದವರು ತಾವು ತಲೆಗೆ ಕಟ್ಟಿಕೊಂಡಿದ್ದ ವಸ್ತ್ರವನ್ನು ಬಿಚ್ಚಿ ಅದನ್ನು ಬಾಬಾರವರ ತಲೆಗೆ ವಜ್ರಕವಚದಂತೆ ಸುತ್ತಿದರು. ಮಗೂ… ಈ ವಸ್ತ್ರವನ್ನೂ ಈಗಾಗಲೇ ನಾನು ನೀಡಿರುವ ನನ್ನ ರಕ್ತವೇ ಚಂದನವಾಗಿ ಸೇರಿಕೊಂಡಿರುವ ಇಟ್ಟಿಗೆಯನ್ನೂ ಜಾಗರೂಕವಾಗಿ ಕಾದುಕೊಂಡಿರು. ಇವೆರಡರಲ್ಲಿ ಪ್ರತಿಬಿಂಬವಾಗಿ ನಾನೇ ಇರುತ್ತೇನೆ ಎಂದು ಶಿ?ನನ್ನು ಆಶೀರ್ವದಿಸಿದರು.
ಗುರುಕಾರುಣ್ಯದಲ್ಲಿ ತೊಯ್ದ ಬಾಬಾರವರು ಶ್ರದ್ಧಾಭಕ್ತಿ ಭಾವೋದ್ವೇಗದಲ್ಲಿ ಧನ್ಯನಾದೆ ತಂದೆ… ಗುರುವೇ ಧನ್ಯನಾದೆ ಎನ್ನುತ್ತ ಆನಂದಬಾ?ದಲ್ಲಿ ಗುರುವಿನ ಪಾದಗಳಿಗೆ ಅಭಿವಂದಿಸಿದರು. ಎಲ್ಲವನ್ನೂ ನೋಡುತ್ತಿದ್ದ ಇತರ ಶಿ?ರು, ಆಶ್ರಮವಾಸಿಗಳಿಗೆ ಈಗ ಅಂತಃಕರಣ ಕಲಕಿತು. ತಾವು ಮಾಡಿದ ಸಂಚು ಈ ರೀತಿ ಪರಿವರ್ತಿತವಾದುದನ್ನು ಕಂಡು ತಮ್ಮ ಕೃತ್ಯಕ್ಕಾಗಿ ನಾಚಿ ಕ್ಷಮಾಯಾಚನೆ ಮಾಡಿದರು.
ಇದೆಲ್ಲ ನಡೆದು ಕೆಲವು ದಿನಗಳಾದ ಮೇಲೆ ವೆಂಕೂಸಾ ತಮ್ಮ ಶಿ?ರೊಡಗೂಡಿ ಕಾಡಿನಿಂದ ಸೈಲೂಗ್ರಾಮಕ್ಕೆ ಹಿಂದಿರುಗಿದರು. ಅದಾಗಲೇ ಪರ್ಬಣಿ ಕಾಡಿನ ಆಶ್ರಮದಲ್ಲಿ ನಡೆದ ಘಟನೆಗಳೆಲ್ಲ ಗ್ರಾಮಸ್ಥರ ಕಿವಿಗಳಿಗೆ ತಲಪಿತ್ತು. ಜನರೆಲ್ಲ ಬಂದು ಈ ಅದ್ಭುತ ಗುರುಶಿ?ರನ್ನು ಕಂಡು ವಂದಿಸಿದರು. ಅಂದು ಮಾರ್ಗಶಿರ ಶುದ್ಧ ಏಕಾದಶಿಯ ದಿನ. ತಮ್ಮೆಲ್ಲ ಶಿ?ರು, ಭಕ್ತಬಂಧುಗಳನ್ನು ಸೇರಿಸಿ ಎಲ್ಲರ ಮುಂದೆಯೇ ನನ್ನ ಈ ಜನ್ಮದ ಕರ್ತವ್ಯಗಳೆಲ್ಲ ಮುಗಿದಿವೆ. ಯೋಗಸಿದ್ಧಿಯಿಂದ ನಾನಿಂದು ದೇಹತ್ಯಾಗ ಮಾಡಲು ನಿರ್ಧರಿಸಿದ್ದೇನೆ ಎಂದು ಸಾರಿದರು. ಅಶ್ರುಪೂರ್ಣರಾಗಿ ನಿಂತಿದ್ದ ಬಾಬಾರನ್ನು ತಮ್ಮ ಬಳಿ ಕರೆದು ತಾವು ಹೊದೆದಿದ್ದ ಶ್ವೇತವಸ್ತ್ರವನ್ನು ಅವರ ಮೈಮೇಲೆ ಹೊದಿಸಿ ಹೀಗೆ ಆದೇಶಿಸಿದರು:
ಮಗೂ.. ಗೋದಾವರೀ ತಟದ ಬಳಿ ಪುರಾಣಪ್ರಸಿದ್ಧ ದಿವ್ಯಕ್ಷೇತ್ರವೊಂದಿದೆ. ಅಲ್ಲಿನ ಗುರುಸ್ಥಾನ ನಿನ್ನ ಆಗಮನದ ನಿರೀಕ್ಷೆಯಲ್ಲಿದೆ. ನೀನು ಇಲ್ಲಿಂದ ಹೊರಟು ಕೆಲಕಾಲ ಅಲ್ಲೇ ಇರುವ ಅರಣ್ಯದಲ್ಲಿ ತಪೋನಿರತನಾಗಿರು. ಆನಂತರ ಆ ದಿವ್ಯಕ್ಷೇತ್ರದಲ್ಲಿ ನೆಲೆಯಾಗಿ ನಿನ್ನ ಕರ್ತವ್ಯವನ್ನು ಮುಂದುವರಿಸಿಕೊಂಡಿರು. ಅದೇ ನಿನ್ನ ಕಾರ್ಯಕ್ಷೇತ್ರ ಎಂದು ಸೂಚಿಸಿದರು. ಶಿ?ನ ಮಸ್ತಕದ ಮೇಲೆ ತಮ್ಮ ಹಸ್ತವನ್ನಿಟ್ಟು ಆಶೀರ್ವದಿಸುತ್ತ ಇರುವಾಗಲೇ ಎಲ್ಲರೂ ನೋಡನೋಡುತ್ತಿರುವಂತೆಯೇ ಕಣ್ಣುಮುಚ್ಚಿ ಕುಂಡಲಿನಿಯನ್ನು ಜಾಗೃತಗೊಳಿಸಿ ಆರೋಹಣಕ್ರಮದಲ್ಲಿ ಸಹಸ್ರಾರಕ್ಕೇರಿಸಿ ಪ್ರಾಣತ್ಯಾಗ ಹೊಂದಿದರು. ಕೆಲಹೊತ್ತು ಅವರ ಪಾದದ ಬಳಿ ಕುಳಿತು ಬಾಬಾ ದುಃಖಿಸಿದರು. ಅಪರಕರ್ಮಗಳಾದ ಮೇಲೆ ಗುರುಗಳು ಪ್ರಸಾದಿಸಿದ ಇಟ್ಟಿಗೆಯನ್ನೂ, ಅವರೇ ಹೊದೆಸಿದ್ದ ಶ್ವೇತವಸ್ತ್ರವನ್ನೂ, ತನ್ನ ಬಾಲ್ಯದಲ್ಲಿ ಸಾಕುತಂದೆಯೂ ಗುರುವೂ ಆಗಿದ್ದ ಸೂಫೀ ಫಕೀರನು ಕೊಟ್ಟಿದ್ದ ಚಿಟಿಕೆ ತಾಳಗಳನ್ನೂ ಒಂದು ಜೋಳಿಗೆಗೆ ಹಾಕಿಕೊಂಡು ಎಳೆಯ ಯುವಕ ಬಾಬಾ ಸೈಲೂ ಗ್ರಾಮವನ್ನು ಬಿಟ್ಟು ಪರಿವ್ರಾಜಕರಾಗಿ ಹೊರಟುಬಿಟ್ಟರು.
ಶಿರಡಿಗೆ ಬಂದರು ಬಾಬಾ
ಮಹಾರಾ?ದ ಅಹಮದ್ನಗರ ಜಿಲ್ಲೆಯ ಗೋದಾವರೀ ನದೀತೀರವು ರಮ್ಯ ಮನೋಹರವೂ, ಪುಣ್ಯತಾಣವೂ ಆಗಿ ಅನೇಕಾನೇಕ ಸಂತರು ಇಲ್ಲಿ ಜನ್ಮತಾಳಿದವರಾಗಿದ್ದಾರೆ. ಇದೇ ಜಿಲ್ಲೆಯ ಕೋಪರಗಾಂವ್ ತಾಲೂಕಿನ ಗೋದಾವರೀ ನದಿಯ ತಟದಲ್ಲಿರುವ ಪುಣ್ಯಭೂಮಿಯೇ ಶಿರಡಿ ಎಂಬ ಊರು. ಗುರುವಿನ ಆಜ್ಞಾವರ್ತಿಯಾಗಿ ಸೈಲೂ ಗ್ರಾಮದಿಂದ ಹೊರಟ ಬಾಬಾ ಶಿರಡಿಗೆ ಬಂದು ಅರಳಿಮರವೊಂದರ ಕೆಳಗೆ ಪ್ರಕಟವಾದರು. ಗ್ರಾಮಸ್ಥರೆಲ್ಲ ಕುತೂಹಲಿಗಳಾಗಿ ಬಂದು ಬಂದು ಸಂದರ್ಶಿಸಿದರು. ಯಾರಿರಬಹುದೀತ? ನೋಡಲು ಸುಂದರ, ದೃಢಕಾಯ; ಯೋಗಿಯ ಮೈಕಟ್ಟು, ವಯಸ್ಸು ಎಳೆಯದು; ಆದರೆ ದಿವ್ಯ ತೇಜಸ್ಸಿನಿಂದ ಕೂಡಿದ್ದಾನೆ; ಪದ್ಮಾಸನದಲ್ಲಿ ಕುಳಿತು ಧ್ಯಾನಸ್ಥ ಭಂಗಿಯಲ್ಲಿರುತ್ತಾನೆ. ಮನೆಮನೆಗಳಲ್ಲಿ ಈ ಯುವಕನ ಬಗ್ಗೆಯೇ ಮಾತುಗಳು.
ಅದೇ ಊರಿನಲ್ಲಿದ್ದ ಖಂಡೋಬಾ ದೇವಾಲಯದ ಸಾತ್ತ್ವಿಕ ಗುಣಗಳ ಅರ್ಚಕ ಮಹಾಲ್ಸಾಪತಿ ಈ ವಿ?ಯ ತಿಳಿದು ಚಕಿತಗೊಂಡನು. ಆದರೆ ಶಿರಡಿಯಲ್ಲಿದ್ದ ನಾನಾ ಚೋಪ್ದಾರ್ ಎಂಬ ರೈತನ ತಾಯಿ ಹಾಗೂ ಮಹಾಲ್ಸಾಪತಿ ಇವರಿಬ್ಬರ ಅಂತರ್ದೃಷ್ಟಿಗೆ ಮಾತ್ರ ಈ ಯುವಕ ಮುಂದೆ ಮಹಾಪುರು?, ಸದ್ಗುರುವಾಗಿ ಜನರನ್ನು ಉದ್ಧರಿಸಲೆಂದು ಬಂದವನೆಂಬುದು ಗೋಚರವಾಯಿತು. ಅದರಂತೆ ಇವರಿಬ್ಬರೂ ಭಯ ಭಕ್ತಿಯಿಂದ ಅಲ್ಲಿ ಧ್ಯಾನಸ್ಥನಾಗಿದ್ದ ಬಾಬಾರವರನ್ನು ಹಣ್ಣುಹಂಪಲು ನೀಡುತ್ತ ನೋಡಿಕೊಂಡು ಸೇವೆಗೈದರು.
ಬಾಬಾ ಕುಳಿತು ಧ್ಯಾನಮಾಡುತ್ತಿದ್ದ ಆ ಸ್ಥಳದಲ್ಲೇ ಅವರ ಗುರುಸ್ಥಾನವಿದ್ದಿತು ಎನ್ನಲಾಗಿದೆ. ಒಂದುದಿನ ಇದ್ದಕ್ಕಿದ್ದಂತೆ ಬಾಬಾ ಅಲ್ಲಿಂದ ನಿರ್ಗಮಿಸಿದರು. ಎಲ್ಲಿಯೂ ಎತ್ತಲೂ ಕಾಣಲಿಲ್ಲ. ಕಡೆಗೆ ಖಂಡೋಬಾ ದೇವಾಲಯದ ಗಣಾಚಾರಿಯ ಮೈಮೇಲೆ ದೈವದ ಆವೇಶ ಬಂದು ಈ ವಿ?ಯವನ್ನು ಬಹಿರಂಗಪಡಿಸಿತು ಎನ್ನಲಾಗಿದೆ. ಅದೇ ಆದೇಶದಂತೆ ಜನರೆಲ್ಲ ಬಾಬಾ ಕುಳಿತಿದ್ದ ತಳಭಾಗದ ಕಲ್ಲನ್ನು ಜರುಗಿಸಿ ನೋಡಿದಾಗ ಅದರೊಳಗೊಂದು ಸುರಂಗಮಾರ್ಗವೂ, ಅದರ ತುದಿಯಲ್ಲಿ ಕೋಣೆಯೊಂದೂ, ಅದರೊಳಗೆ ಗೋಮುಖದ ಪೀಠವೂ ಗೋಚರಿಸಿತು. ಜನರೆಲ್ಲ ಸ್ತಂಭೀಭೂತರಾದರು. ಆದರೆ ಬಾಬಾ ಮತ್ತೆ ಸುತ್ತಲೆಲ್ಲೂ ಕಾಣಸಿಗಲಿಲ್ಲ. ಅವರನ್ನು ಕುಹಕವಾಡಿದವರು, ಕಲ್ಲೆಸೆದವರು ಈಗ ಪಶ್ಚಾತ್ತಾಪ ಪಟ್ಟರು. ಸುತ್ತಮುತ್ತಲ್ಲೆಲ್ಲ ವದಂತಿ ಹಬ್ಬಿತು. ತಂಡೋಪತಂಡವಾಗಿ ಜನರು ಆಗಮಿಸಿ ಆ ಗುರುಸ್ಥಾನವನ್ನು ಸಂದರ್ಶಿಸಿ ನಮಸ್ಕರಿಸಿ ತೆರಳುತ್ತಿದ್ದರು. ಬಾಬಾ ಕುಳಿತಿರುತ್ತಿದ್ದ ಸ್ಥಳದಲ್ಲಿ ಅರಳಿಮರದ ಸುತ್ತಲೂ ಖಂಡೋಬಾನ ಸಲಹೆಯಂತೆ ವಿಶಾಲವಾದ ಕಟ್ಟೆಯನ್ನು ಕಟ್ಟಿ ಪಾವನ ನೆಲೆಯೆಂದು ಘೋಷಿಸಿ ಭದ್ರಪಡಿಸಲಾಯಿತು.
ಹೀಗೆಯೇ ಸಾಕ? ದಿನಗಳು, ತಿಂಗಳುಗಳು ಕಳೆದುಹೋದವು. ಊರಿನ ಗ್ರಾಮಸ್ಥರು, ಮಹಲ್ಸಾಪತಿ, ಪರಊರುಗಳಿಂದಲೂ ಕೆಲವು ಆಸ್ತಿಕ ಬಂಧುಗಳು ಪ್ರತಿದಿನವೂ ಈ ಗುರುಸ್ಥಾನದ ಬಳಿ ಬಂದು ದರ್ಶಿಸಿ ಮಣಿದು ಹೋಗುತ್ತಿದ್ದರು. ಹೀಗೆ ಒಂದು ದಿನ ಮಹಾಲ್ಸಾಪತಿ ಗುರುಸ್ಥಾನದ ಬಳಿ ನಿಂತು ಧ್ಯಾನಿಸುತ್ತಿರುವಾಗ ಅವನ ಅಂತರ್ವಾಣಿಯು ನೀನು ನಿರೀಕ್ಷಿಸುತ್ತಿರುವ ಮಹಾಪುರು?ನು ಈ ಪರಿಸರದಲ್ಲೇ ಮತ್ತೆ ಪ್ರಕಟವಾಗುತ್ತಾನೆ. ಶೀಘ್ರವೇ ಇಲ್ಲಿಗೆ ಬರಲಿದ್ದಾನೆ ಎಂದು ನುಡಿದಂತಾಯಿತು. ಖಂಡೋಬಾನ ಪೂಜೆಯನ್ನು ಅಲಕ್ಷಿಸದೆ ಮಾಡುತ್ತಾ ಆ ಮಹಾಪುರು?ನ ಆಗಮನಕ್ಕಾಗಿ ಕಾಯುತ್ತಿರುವುದೇ ಅವನ ದಿನಚರಿಯಾಯಿತು.
ಇದ್ದಕ್ಕಿದ್ದಂತೆ ಒಂದು ದಿನ ಖಂಡೋಬಾ ದೇವಸ್ಥಾನದಲ್ಲಿ ಗುಜುಗುಜು ಪ್ರಾರಂಭವಾಯಿತು. ದೇವಸ್ಥಾನದ ಅಂಗಳದಲ್ಲಿ ಫಕೀರರೊಬ್ಬರು ಕಾಲಿಟ್ಟರು. ಅದೇತಾನೇ ಪೂಜೆ ಮುಗಿಸಿದ್ದ ಮಹಾಲ್ಸಾಪತಿ ಗರ್ಭಗುಡಿಯಿಂದ ಹೊರಬಂದು ನೋಡುತ್ತಾನೆ, ಅಲ್ಲೇ ಎದುರಲ್ಲಿ ನಿಂತಿದ್ದಾರೆ ಅದೇ ಮಹಾತ್ಮ! ಖಂಡೋಬಾನ ಅರ್ಚಕನಿಗೆ ಮೈಮನದಲ್ಲಿ ಮಿಂಚಿನ ಸಂಚಾರವಾಯಿತು. ಭಕ್ತಿಪರಾಕಾ?ಯಿಂದ ರೋಮಾಂಚನವಾಯಿತು. ಆವೇಶದಿಂದ ಕೂಡಿ ಗದ್ಗದಕಂಠದಿಂದ ಮಹಾಲ್ಸಾ… ಮಾಲಸಾ… ಸಾಹೀ.. ಸಾಯಿ… ಸಾಯಿ… ಬಂದಿರಾ ತಂದೇ! ಬನ್ನಿ.. ಬನ್ನಿ… ಒಳಗೆ ಬನ್ನಿ ಎನ್ನುತ್ತ ಅಶ್ರುಧಾರೆ ಹರಿಸಿದನು.
ಭಕ್ತಿಭಾವೋದ್ವೇಗದಲ್ಲಿ ಮಹಾಲ್ಸಾಪತಿಯ ಬಾಯಿಂದ ಹೊರಬಿದ್ದ ಸಾಯಿ.. ಸಾಯಿ.. ಸಾಯಿಬಾಬಾ ಎಂಬುದೇ ಮುಂದಿನ ದಿನಗಳಲ್ಲಿ ಸ್ಥಿರಗೊಂಡು ಆ ಫಕೀರರ ಹೆಸರಾಯಿತು. ಜನರೆಲ್ಲ ಹಾಗೆಯೆ ಕರೆಯುತ್ತ ಅವರನ್ನು ಆರಾಧಿಸತೊಡಗಿದರು. ತಮ್ಮ ದೈವ ತಮ್ಮೆಡೆಗೆ ಮರಳಿ ಬಂದಿದೆಯೆಂದು ಹರ್ಷಿಸುತ್ತ ಸೇವೆಗೈಯತೊಡಗಿದರು.
(ಮುಂದುವರಿಯುತ್ತದೆ)