ಇತ್ತೀಚೆಗೆ ಸಮೀಪದ ಬಂಧುಗಳ ಮನೆಗೆ ಹೋಗಿದ್ದೆ. ಆ ಮನೆಯ ಮಗು ಹತ್ತಾರು ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ಅವಕಾಶ ಒದಗಿಸಿಕೊಟ್ಟಿದ್ದಾರೆ. ಮಗು ಅವರ ನಿರೀಕ್ಷೆಯಂತೆ ಚೆನ್ನಾಗಿ ಕಲೆಗಳನ್ನು ಅಭ್ಯಾಸ ಮಾಡುತ್ತಲೂ ಇದ್ದಾಳೆ. ಪೋಷಕರಿಗೆ ಅವಳು ನಮ್ಮೆದುರು ಯಾವುದಾದರೂ ಒಂದನ್ನು ಪ್ರದರ್ಶಿಸಲಿ ಎಂಬ ಆಕಾಂಕ್ಷೆ ಇತ್ತು. ಆದರೆ ದಣಿದಿದ್ದ ಆ ಮಗು ‘ತನ್ನಿಂದಾಗದು’ ಎನ್ನುತ್ತಲೇ ಇದ್ದಳು. ಹಾಗೂ ಅನುನಯಿಸಿ ಬಲವಂತ ಮಾಡಿದರೆ ಕೊಂಚ ಕಟುವಾಗಿಯೇ ತನಗೆ ಸುಸ್ತಾಗಿದೆ, ತಾನೇನೂ ಮಾಡಲಾರೆ ಎಂದಳು. ಅವಳ ಮಾತಿಗೆ ದಂಗಾಗುವ ಸರದಿ ಅಪ್ಪ ಅಮ್ಮನದ್ದು, […]








