
ಮನುಷ್ಯನ ಕ್ರಿಯೆ ಆಲೋಚನೆಯಿಂದ ಬರುತ್ತದೆ. ಆಲೋಚನೆ ಭಾವನೆಯಿಂದ ಹುಟ್ಟುತ್ತದೆ. ಪ್ರತಿಯೊಂದು ಆಲೋಚನೆಯ ಹಿಂದೆಯೂ ಒಂದು ಭಾವನೆ ಇರುತ್ತದೆ. ವಿಷಾದ ಭಾವನೆಯ ಬೀಜಬಿತ್ತಿ ಅಮೃತದ ಫಲವನ್ನು ಎಂದೂ ಪಡೆಯಲು ಸಾಧ್ಯವಿಲ್ಲ. ಜೀವನದಲ್ಲಿ ಸತ್ಫಲಗಳು ಸಿಗಬೇಕಾದರೆ ಸದ್ಭಾವನೆಯ ಬೀಜಗಳನ್ನು ಮನಸ್ಸಿನಲ್ಲಿ ಬಿತ್ತಿಕೊಳ್ಳಬೇಕು. ಬದುಕಿನ ಬಗ್ಗೆ ಹಲವರು ಹಲವು ರೀತಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಕೆಲವರಿಗೆ ಬದುಕಿನಲ್ಲಿ ನೋವೇ ಕಂಡುಬಂದರೆ, ಇನ್ನು ಕೆಲವರಿಗೆ ನಲಿವೇ ಕಂಡುಬರುತ್ತದೆ. ಕೆಲವರಿಗೆ ಈ ಬದುಕೊಂದು ಆಕಸ್ಮಿಕವಾಗಿ ಕಂಡುಬಂದರೆ, ಇನ್ನು ಕೆಲವರಿಗೆ ಪೂರ್ವಯೋಜಿತವಾಗಿ ಕಂಡುಬರುತ್ತದೆ. ಕೆಲವರಿಗೆ ವ್ಯರ್ಥವಾಗಿ ಕಂಡುಬಂದರೆ, ಮತ್ತೆ […]