‘ನಮ್ಮ ಇಪ್ಪತ್ತು ವರ್ಷಗಳ ತ್ಯಾಗಕ್ಕೆ ಫಲ ಸಿಕ್ಕಿದೆ. ಯುದ್ಧ ಮುಗಿದಿದೆ’ ಎಂಬ ತಾಲಿಬಾನ್ ಘೋಷಣೆ ಅರ್ಥಹೀನವಾಗಿದೆ. ಈಗಿನ ಬೆಳವಣಿಗೆ ಮತ್ತೊಂದು ಸಂಘರ್ಷಪರ್ವಕ್ಕೆ ನಾಂದಿಯಷ್ಟೆ ಆಗಿದೆ. ಬಹುಕಾಲದಿಂದ ನಿಸ್ಸತ್ತ್ವಗೊಂಡಿರುವ ವಿಶ್ವಸಂಸ್ಥೆ ನಿಜವಾಗಿ ಕಾಗದದ ಗೊಂಬೆಯಷ್ಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಜಾಪ್ರಭುತ್ವಾನುಗುಣ ನಾಗರಿಕ ವ್ಯವಸ್ಥೆಗಳು ಇಪ್ಪತ್ತೊಂದನೇ ಶತಮಾನದಷ್ಟು ಆಧುನಿಕ ಯುಗದಲ್ಲಿಯೂ ಎಷ್ಟು ಕ್ಷಣಭಂಗುರವಾಗಬಹುದೆಂಬುದನ್ನು ಎತ್ತಿತೋರಿಸಿವೆ ಭಾರತದ ನೆರೆಯ ಆಫಘಾನಿಸ್ತಾನದ ಇತ್ತೀಚಿನ ವಿದ್ಯಮಾನಗಳು. ಸಭ್ಯತೆಯ ಮತ್ತು ಸತರ್ಕತೆಯ ಸೋಗು ಹಾಕುವ ಸಾಂಕೇತಿಕತೆಯನ್ನೂ ಗಾಳಿಗೆ ತೂರಿ ತಾಲಿಬಾನಿ ಪಡೆಗಳು ವಿಧ್ಯುಕ್ತ ಸರ್ಕಾರದ ಮೇಲೆ […]













