ಬೇಜವಾಬ್ದಾರಿಯೆನಿಸುವಂತಹ ಮಾತುಗಳನ್ನು ರಾಹುಲ್ಗಾಂಧಿಯವರಿಂದ ಕೇಳಿಬರುತ್ತಿರುವುದನ್ನು ಗಮನಿಸುವಾಗ ಅವರನ್ನು ವಿಪಕ್ಷನಾಯಕರಾಗಿ ಸಂದರ್ಭವಶದಿಂದ ಆಯ್ಕೆ ಮಾಡಿರುವ ಪಕ್ಷಗಳವರಿಗೆ ಆಂತರ್ಯದಲ್ಲಿ ಹೇಗನಿಸುತ್ತಿರಬಹುದು? ಇಷ್ಟಾಗಿ ಇದು ಯಾವಾಗಲೋ ಒಮ್ಮೆ ಆಕಸ್ಮಿಕವಾಗಿ ನಡೆದದ್ದಲ್ಲ;. ಸತತವಾಗಿ ನಡೆದಿರುವ ವಿದ್ಯಮಾನ. ರಾಹುಲ್ಗಾಂಧಿ ಮಾನಸಿಕತೆಯನ್ನು ಏನೆಂದು ಅರ್ಥಯಿಸಬೇಕು? ಇತರರನ್ನು, ಅಧಿಷ್ಠಿತ ಸರ್ಕಾರವನ್ನು ಹಗಲುರಾತ್ರಿ ಟೀಕಿಸುತ್ತಿದ್ದಲ್ಲಿ ತಮ್ಮ ‘ಪ್ರತಿಮೆ’ ವರ್ಧಿಸುತ್ತದೆಂದು ಅವರು ಭಾವಿಸಿದ್ದಾರೆಯೆ? ಇದು ಅಸಮಂಜಸವೆಂದು ಐ.ಎನ್.ಡಿ.ಐ.ಎ ಕೂಟದ ಇತರ ಪಕ್ಷಗಳಿಗೂ ಅನ್ನಿಸಬೇಕಾಗಿತ್ತು. ಹಾಗೆ ಆಗದಿರುವುದು ದುರದೃಷ್ಟಕರ. ಈ ಮಾತುಗಳನ್ನು ಇಂತಹವರು ಆಡಿದರೆಂದು ವರದಿಗಳು ನಮೂದಿಸದಿದ್ದರೆ ಇವು ಯಾರೋ ಬುದ್ಧಿವಿಕಲರ […]
ತುಟಿ ಮೀರಿದ ತೊದಲಿಕೆಗಳು
Month : December-2024 Episode : Author : -ಎಸ್.ಆರ್.ಆರ್.