
ರಾಷ್ಟ್ರೀಯ ಅಂತಾರಾಷ್ಟ್ರೀಯ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುವ ಬೆಂಗಳೂರಿನ ಕಂಠೀರವ ಕ್ರೀಡಾಂಗಣವೆಂದರೆ ಅದೊಂದು ಸುವ್ಯವಸ್ಥಿತ ಉತ್ತಮ ಗುಣಮಟ್ಟದ, ಸಕಲ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಕ್ರೀಡಾಂಗಣವೆಂದೇ ಕ್ರೀಡಾಭಿಮಾನಿಗಳ ನಂಬಿಕೆ. ಆದರೆ ವಾಸ್ತವ ಮಾತ್ರ ಬೇರೆಯೇ. ಗುಂಡಿ ಬಿದ್ದ ಅಥ್ಲೆಟಿಕ್ಸ್ ಟ್ರ್ಯಾಕ್, ಆ ಟ್ರ್ಯಾಕ್ನಲ್ಲಿ ಓಟದ ಅಭ್ಯಾಸ ನಡೆಸಿದರೆ ಬಿದ್ದು ಮುಗ್ಗರಿಸಿ ಗಾಯಾಳುಗಳಾಗುವುದು ಗ್ಯಾರಂಟಿ. ಗಾಯವಾದರೆ ಕ್ರೀಡಾಂಗಣದ್ದೇ ವೈದ್ಯರು ಇಲ್ಲ. ಗಾಯಾಳುಗಳನ್ನು ಸಾಗಿಸಲು ಟ್ರ್ಯಾಲಿಯು ಇಲ್ಲ. ನಾಲ್ಕುಮಂದಿ ಹೊತ್ತುಕೊಂಡೇ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಬೇಕು. ಸಿಂಥೆಟಿಕ್ ಟ್ರ್ಯಾಕ್ ನಿರ್ವಹಿಸಲು ಸಿಬ್ಬಂದಿಯೇ ಇಲ್ಲ. […]